ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 04: ನಾಗರಿಕ ಗುರುತಿನ ಚೀಟಿ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಎಂಬ ಸುದ್ದಿ ಕಿವಿಗೆ ಬೀಳುತ್ತಲೇ ಇರುತ್ತದೆ. ನಾಳೆ ಮಾಡಿದರೆ ಆಯ್ತು ಎಂದುಕೊಳ್ಳುವಷ್ಟರಲ್ಲೇ ಡೆಡ್ ಲೈನ್ ಮುಂದೆ ನಿಂತಿರುತ್ತದೆ.

ಆಧಾರ್ ಕಾರ್ಡ್ ಜೋಡಣೆ ಪ್ರಮುಖ ನಾಲ್ಕು ಡೆಡ್ ಲೈನ್ ಗಳ ಬಗ್ಗೆ ವಿವರ ಇಲ್ಲಿದೆ. ಆದಷ್ಟು ಬೇಗ ಆಧಾರ್ ಜೋಡಣೆ ಮಾಡಿಕೊಳ್ಳಿ ಇಲ್ಲದಿದ್ದರೆ ಬ್ಯಾಂಕ್ ವ್ಯವಹಾರ ಕಷ್ಟವಾಗಲಿದೆ.

ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ? ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?

ಸರ್ಕಾರಿ ಸವಲತ್ತು ಸೇವೆಯ ಫಲಾಕಾಂಕ್ಷಿಗಳಾಗಿದ್ದರೆ ಆಧಾರ್ ಕಡ್ಡಾಯವಾಗಿ ಜೋಡಣೆ ಮಾಡಿಕೊಳ್ಳಬೇಕಾಗುತ್ತದೆ. ಅನೇಕ ಸೇವೆಗಳಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು ಡಿಸೆಂಬರ್ 31, 2017 ಕೊನೆ ದಿನಾಂಕವಾಗಿದೆ. ಮೊಬೈಲ್ ನಂಬರ್ ಜತೆ ಜೋಡಣೆಗೂ ಇದು ಕೊನೆ ದಿನವಾಗಿದೆ.

ಸಿಮ್ ಕಾರ್ಡ್‌ ಜೊತೆ ಆಧಾರ್ ಜೋಡಣೆ ಕಡ್ಡಾಯ ಸಿಮ್ ಕಾರ್ಡ್‌ ಜೊತೆ ಆಧಾರ್ ಜೋಡಣೆ ಕಡ್ಡಾಯ

ಸರ್ಕಾರಿ ಸವಲತ್ತು ಪಡೆಯಲು ಆಧಾರ್ ಕಡ್ಡಾಯವಾಗಬೇಕೇ? ಬೇಡವೇ? ಎಂಬ ಚರ್ಚೆ, ವಾದ, ಪ್ರತಿವಾದ ಸದ್ಯ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ.

ಖಾಸಗಿತನ ಕುರಿತ ಸುಪ್ರೀಂ ತೀರ್ಪು, ಆಧಾರ್ ಕತೆ ಏನು? ಖಾಸಗಿತನ ಕುರಿತ ಸುಪ್ರೀಂ ತೀರ್ಪು, ಆಧಾರ್ ಕತೆ ಏನು?

ಈ ಬಗ್ಗೆ ಸುಪ್ರೀಂಕೋರ್ಟ್ ಏನು ಆದೇಶ ನೀಡುವುದೋ ಕಾದುನೋಡಬೇಕಿದೆ. ಸದ್ಯಕ್ಕಂತೂ ಆಧಾರ್ ಕಡ್ಡಾಯವಾಗಿರುವ ನಾಲ್ಕು ಪ್ರಮುಖ ಸೇವೆಗಳ ವಿವರ ಮುಂದಿದೆ.

ಪ್ಯಾನ್ ಕಾರ್ಡ್ ಜತೆ ಆಧಾರ್ ಕಾರ್ಡ್ ಲಿಂಕ್

ಪ್ಯಾನ್ ಕಾರ್ಡ್ ಜತೆ ಆಧಾರ್ ಕಾರ್ಡ್ ಲಿಂಕ್

ಕೇಂದ್ರದ ನೇರ ತೆರಿಗೆ ಸಮಿತಿ(ಸಿಬಿಡಿಟಿ) ಆಗಸ್ಟ್ ನಲ್ಲಿ ನೀಡಿದ ಸೂಚನೆಯಂತೆ ಆಧಾರ್ ಹಾಗೂ ಪ್ಯಾನ್ ಜೋಡಣೆ ಕಡ್ಡಾಯವಾಗಿದೆ. ತೆರಿಗೆದಾರರ ಅನುಕೂಲಕ್ಕೆ ಈ ವ್ಯವಸ್ಥೆ ಮಾಡಲಾಗಿದ್ದು, ಡಿಸೆಂಬರ್ 31, 2017 ಕೊನೆ ದಿನಾಂಕವಾಗಲಿದೆ. ಈ ಮುಂಚೆ ಆಗಸ್ಟ್ 31 ಕೊನೆ ದಿನಾಂಕವಾಗಿತ್ತು. 2017-18ರ ಆದಾಯ ತೆರಿಗೆ ಪಾವತಿಗೆ ಈ ಜೋಡಣೆ ಕಡ್ಡಾಯವಾಗಿತ್ತು.

ಮೊಬೈಲ್ ಸಿಮ್ ಜತೆ ಆಧಾರ್ ಜೋಡಣೆ

ಮೊಬೈಲ್ ಸಿಮ್ ಜತೆ ಆಧಾರ್ ಜೋಡಣೆ

ಮೊಬೈಲ್ ಫೋನ್ ಸಿಮ್ ಜತೆಗೆ ಆಧಾರ್ ನಂಬರ್ ಜೋಡಣೆ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಬಹುತೇಕ ಎಲ್ಲಾ ಟೆಲಿಕಾಂ ಸೇವಾಸಂಸ್ಥೆಗಳು ತನ್ನ ಗ್ರಾಹಕರಿಗೆ ಸೂಚನೆ ನೀಡಿವೆ. ಗ್ರಾಹಕರು ಖುದ್ದು ಟೆಲಿಕಾಂ ಸಂಸ್ಥೆ ಕಚೇರಿಗೆ ತೆರಳಿ ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ. ಕೊನೆ ದಿನಾಂಕ ಫೆಬ್ರವರಿ 2018

ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಣೆ

ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಣೆ

ಬ್ಯಾಂಕ್/ ಆರ್ಥಿಕ ಸಂಸ್ಥೆಯಲ್ಲಿನ ಖಾತೆಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಅನಿವಾರ್ಯವಾಗಿದೆ. ಗ್ರಾಹಕರು ತಮ್ಮ ಕೆವೈಸಿ (Know your Customer) ದಾಖಲೆ ಜತೆಗೆ ಆಧಾರ್ ನಂಬರ್ ನೀಡುವುದು ಕಡ್ಡಾಯವಾಗಿದೆ. ಬ್ಯಾಂಕಿನಿಂದ ಯಾವುದೇ ಸೇವೆ, ಸಾಲ ಪಡೆಯಲು ಆಧಾರ್ ನಂಬರ್ ಕಡ್ಡಾಯವಾಗಿದೆ. ಕೊನೆ ದಿನಾಂಕ ಡಿಸೆಂಬರ್ 31, 2017.

ಸಾಮಾಜಿಕ ಭದ್ರತಾ ಯೋಜನೆ ಆಧಾರ್ ಕಾರ್ಡ್

ಸಾಮಾಜಿಕ ಭದ್ರತಾ ಯೋಜನೆ ಆಧಾರ್ ಕಾರ್ಡ್

ಎಲ್ಲಾ ಬಗೆಯ ಸಾಮಾಜಿಕ ಭದ್ರತಾ ಯೋಜನೆಗಳೊಂದಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ಡಿಸೆಂಬರ್ 31, 2017 ಕೊನೆ ದಿನಾಂಕವಾಗಿದೆ. ಪಿಂಚಣಿ, ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ, ಸರ್ಕಾರಿ ಸ್ಕಾಲರ್ ಶಿಪ್, ಡ್ರೈವಿಂಗ್ ಲೈಸನ್ಸ್ ಇತ್ಯಾದಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

English summary
Here are four Aadhaar linking deadlines you must not miss. Aadhaar linking has been been made mandatory for many services. While linking Aadhaar with PAN should be done by December 31, it would be mandatory to do the same for the mobile number too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X