ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UIDAI ಹೊಸ ಸುತ್ತೋಲೆ: ಸರ್ಕಾರಿ ಸವಲತ್ತು, ಸಬ್ಸಿಡಿ ಪಡೆಯಲು ಆಧಾರ್‌ ಕಡ್ಡಾಯ

|
Google Oneindia Kannada News

ನವದೆಹಲಿ, ಆಗಸ್ಟ್‌ 17: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊರಡಿಸಿದ ಇತ್ತೀಚಿನ ಸುತ್ತೋಲೆಯಂತೆ ಇನ್ನು ಮುಂದೆ ನೀವು ಸರ್ಕಾರಿ ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ.

ಇಲ್ಲವೇ ಆಧಾರ್‌ ದಾಖಲಾತಿ ಚೀಟಿಯಾದರೂ ಹೊಂದಿರಲೇಬೇಕು. ಆಧಾರ್‌ ಸಂಖ್ಯೆ ಇಲ್ಲದಿದ್ದರೆ ಸರ್ಕಾರದ ಯಾವುದೇ ಸವಲತ್ತು ಹಾಗೂ ಸಬ್ಸಿಡಿಗಳು ನಿಮಗೆ ಸಿಗುವುದಿಲ್ಲ ಎಂದು ಸುತ್ತೋಲೆ ಹೇಳಿದೆ. ಯುಐಡಿಎಐ ಕಳೆದ ವಾರ ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಈ ಸುತ್ತೋಲೆ ಹೊರಡಿಸಿದೆ.

ಆಧಾರ್ ಸಂಖ್ಯೆ ಹೊಂದಿಲ್ಲದೆ ಸರ್ಕಾರ ನೀಡುವ ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಪಡೆಯುತ್ತಿರುವವರಿಗೆ ಆಧಾರ್ ನಿಯಮಗಳನ್ನು ಬಿಗಿಗೊಳಿಸಲು ಆಗಸ್ಟ್ 11 ರಂದು ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಎನ್ನಲಾಗಿದೆ. ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬರುವ ಸವಲತ್ತುಗಳು, ಸಬ್ಸಿಡಿಗಳು ಹಾಗೂ ಸೇವೆಗಳನ್ನು ನೀಡಲು ಫಲಾನುಭವಿಗಳ ಅರ್ಹತೆಯನ್ನು ನಿರ್ಧರಿಸುವ ಸಲುವಾಗಿ ಈಗ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಸರ್ಕಾರದ ಪ್ರಮಾಣ ಪತ್ರಗಳನ್ನು ಬಯಸಿದರೂ ಕೂಡ ಆಧಾರ್‌ ಕಡ್ಡಾಯ ಎಂದು ತಿಳಿಸಲಾಗಿದೆ.

just in: 10 ಮಿಲಿಯನ್ ನಕಲಿ ಹೆಸರುಗಳನ್ನು ತೆಗೆದ ಚುನಾವಣಾ ಆಯೋಗ!just in: 10 ಮಿಲಿಯನ್ ನಕಲಿ ಹೆಸರುಗಳನ್ನು ತೆಗೆದ ಚುನಾವಣಾ ಆಯೋಗ!

UIDAI ಆಗಸ್ಟ್ 11 ರಂದು ಹೊರಡಿಸಿದ ಸುತ್ತೋಲೆಯ ಪ್ರಕಾರ, ಆಧಾರ್ ಸಂಖ್ಯೆಯನ್ನು ಹೊಂದಿಲ್ಲದ ವ್ಯಕ್ತಿಗೆ ಸೌಲಭ್ಯಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪರ್ಯಾಯ ಕಾರ್ಯಸಾಧ್ಯವಾದ ವಿಧಾನಗಳನ್ನು ಗುರುತಿಸುವ ಮೂಲಕ ಪಡೆಯಲು ಅನುಕೂಲವಾಗುವಂತೆ ಅಸ್ತಿತ್ವದಲ್ಲಿರುವ ಆಧಾರ್ ಕಾಯಿದೆಯ ಸೆಕ್ಷನ್ 7 ರಲ್ಲಿ ಅವಕಾಶವಿದೆ. ಇತ್ತೀಚಿನ ಸುತ್ತೋಲೆಯೂ ದೇಶದಲ್ಲಿ 99 ಪ್ರತಿಶತಕ್ಕೂ ಹೆಚ್ಚು ವಯಸ್ಕರಿಗೆ ಈಗ ಆಧಾರ್ ಸಂಖ್ಯೆಯನ್ನು ನೀಡಲಾಗಿದೆ ಎಂದು ಹೇಳಿದೆ.

 ಪರ್ಯಾಯ ಗುರುತಿನ ಚೀಟಿಯೂ ಮಾನ್ಯ

ಪರ್ಯಾಯ ಗುರುತಿನ ಚೀಟಿಯೂ ಮಾನ್ಯ

ಹೀಗಾಗಿ ಕಾಯಿದೆಯ ಸೆಕ್ಷನ್ 7ರ ನಿಬಂಧನೆಯನ್ನು ಪರಿಗಣಿಸಿ ಒಬ್ಬ ವ್ಯಕ್ತಿಗೆ ಯಾವುದೇ ಆಧಾರ್ ಸಂಖ್ಯೆಯನ್ನು ನಿಯೋಜಿಸದಿದ್ದಲ್ಲಿ ಆತ ಅಥವಾ ಆಕೆ ದಾಖಲಾತಿಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಬಳಿಕ ನಿರ್ದಿಷ್ಟ ಸಮಯದವರೆಗೆ ಆಧಾರ್ ಸಂಖ್ಯೆಯನ್ನು ಅವರಿಗೆ ನಿಗದಿಪಡಿಸಲಾಗುತ್ತದೆ. ವೈಯಕ್ತಿಕವಾಗಿ, ಅವನು ಇಲ್ಲವೆ ಅವಳು ಆಧಾರ್ ದಾಖಲಾತಿ ಗುರುತಿನ (ಇಐಡಿ) ಸಂಖ್ಯೆ, ಸ್ಲಿಪ್‌ನೊಂದಿಗೆ ಪರ್ಯಾಯ ಗುರುತಿನ ಚೀಟಿಗಳ ಮೂಲಕವೂ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಬಹುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

 ಸವಲತ್ತು ನೇರವಾಗಿ ನಿವಾಸಿಗಳಿಗೆ ವರ್ಗ

ಸವಲತ್ತು ನೇರವಾಗಿ ನಿವಾಸಿಗಳಿಗೆ ವರ್ಗ

ಇದರರ್ಥ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳು, ಸವಲತ್ತುಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಆಧಾರ್ ನೋಂದಣಿ ಗುರುತಿನ (EID) ಸಂಖ್ಯೆ ಕಡ್ಡಾಯವಾಗಿರುತ್ತದೆ ಎಂದು ಹೇಳಿದೆ. ಬಹುತೇಕ ವಯಸ್ಕರು ಈಗ ಆಧಾರ್ ಗುರುತಿನ ಚೀಟಿ ಹೊಂದಿದ್ದು, ಹಲವಾರು ಸೇವೆಗಳು ಮತ್ತು ಸವಲತ್ತುಗಳನ್ನು ನೇರವಾಗಿ ನಿವಾಸಿಗಳಿಗೆ ವರ್ಗಾಯಿಸಲಾಗುತ್ತಿದೆ. ಆಧಾರ್ ಸೌಲಭ್ಯ ಹಾಗೂ ಸೇವೆಗಳನ್ನು ಪಡೆಯುವಲ್ಲಿ ನಾಗರಿಕರ ಅನುಭವದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಿದೆ ಎಂದು ಸುತ್ತೋಲೆ ಹೇಳಿದೆ.

 ದಾಖಲಾತಿಗಳಲ್ಲಿ ಆಧಾರ್ ಸಂಖ್ಯೆ ಕಡ್ಡಾಯ

ದಾಖಲಾತಿಗಳಲ್ಲಿ ಆಧಾರ್ ಸಂಖ್ಯೆ ಕಡ್ಡಾಯ

UIDAI ಆಗಸ್ಟ್ 11 ರಂದು ಮತ್ತೊಂದು ಸುತ್ತೋಲೆಯನ್ನು ಹೊರಡಿಸಿದ್ದು, ಕೆಲವು ಸರ್ಕಾರಿ ಸಂಸ್ಥೆಗಳು ಸಮಾಜ ಕಲ್ಯಾಣ ಯೋಜನೆಗಳ ಸುಗಮ ಅನುಷ್ಠಾನಕ್ಕಾಗಿ ತಮಗೆ ಬೇಡಿಕೆಯಾಗಿ ದಾಖಲಾತಿಗಳಲ್ಲಿ ಆಧಾರ್ ಸಂಖ್ಯೆಯನ್ನು ಕೇಳಬಹುದು. ಆದ್ದರಿಂದ ಅಂತಹ ಸರ್ಕಾರಿ ಘಟಕಗಳಿಗೆ ಫಲಾನುಭವಿಗಳು ಆಧಾರ್ ಸಂಖ್ಯೆಗಳನ್ನು ಒದಗಿಸುವ ಅಗತ್ಯವಿದೆ ಎಂದು UIDAI ಸುತ್ತೋಲೆಯಲ್ಲಿ ತಿಳಿಸಿದೆ.

 ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಅಧಿನಿಯಮ, 2016ರ (''ಆಧಾರ್ ಕಾಯ್ದೆ 2016'') ಭಾರತ ಸರ್ಕಾರದ ವಿದ್ಯುನ್ಮಾನಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 12 ಜುಲೈ 2016 ರಂದು ಸ್ಥಾಪಿಸಲಾದಂಥ ಒಂದು ಶಾಸನಬದ್ಧ ಪ್ರಾಧಿಕಾರವಾಗಿರುತ್ತದೆ. ಆಧಾರ್ ಕಾಯ್ದೆ 2016 ಅನ್ನು ಆಧಾರ್ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ಕಾಯ್ದೆ, 2019 (14 ರ 2019)ರಿಂದ ತಿದ್ದುಪಡಿ ಮಾಡಲಾಗಿದೆ.

Recommended Video

Independence Day ಪ್ರಯುಕ್ತ ವಿದೇಶಿ ಕ್ರಿಕೆಟಿಗರ ವಿಶೇಷ ಉಡುಗೊರೆ | *Cricket | Oneindia Kannada

English summary
As per the latest circular issued by the Unique Identification Authority of India (UIDAI) Aadhaar number is now mandatory for you to avail government subsidies and benefits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X