ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಕಾರ್ಡ್‌: 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಲ್ಲ ಫಿಂಗರ್‌ಪ್ರಿಂಟ್, ಕಣ್ಣಿನ ಸ್ಕ್ಯಾನ್

|
Google Oneindia Kannada News

ನವದೆಹಲಿ, ಜು.27: ''ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಫಿಂಗರ್‌ಪ್ರಿಂಟ್‌ಗಳು ಮತ್ತು ಕಣ್ಣಿನ ಸ್ಕ್ಯಾನ್ ಅಗತ್ಯವಿಲ್ಲ,'' ಎಂದು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಹೇಳಿದೆ.

ಹಾಗೆಯೇ '' ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್ ಪಡೆಯಬಹುದು,'' ಎಂದು ಯುಐಡಿಎಐ ತಿಳಿಸಿದೆ. ಆದರೆ, '' ಮಕ್ಕಳು ಐದು ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ನವೀಕರಣ ಕಡ್ಡಾಯ,'' ಎಂದು ಕೂಡಾ ಪ್ರಾಧಿಕಾರ ತಿಳಿಸಿದೆ.

ಎಸ್‌ಬಿಐ ಗ್ರಾಹಕರೇ ಗಮನಿಸಿ, ಆಧಾರ್ -ಪ್ಯಾನ್ ಲಿಂಕ್ ಹೀಗೆ ಮಾಡಿ!ಎಸ್‌ಬಿಐ ಗ್ರಾಹಕರೇ ಗಮನಿಸಿ, ಆಧಾರ್ -ಪ್ಯಾನ್ ಲಿಂಕ್ ಹೀಗೆ ಮಾಡಿ!

ಈ ಬಗ್ಗೆ ಟ್ವೀಟ್‌ ಮೂಲಕ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಮಾಹಿತಿ ನೀಡಿದೆ. "ಆಧಾರ್‌ನಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದಾಖಲಿಸುವಾಗ ಫಿಂಗರ್‌ಪ್ರಿಂಟ್‌ ಮತ್ತು ಐರಿಸ್ ಸ್ಕ್ಯಾನ್‌ಗಳನ್ನು ಮಾಡಲಾಗುವುದಿಲ್ಲ. ಕೇವಲ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ. ಮಗುವು 5 ವರ್ಷವನ್ನು ತಲುಪಿದ ನಂತರ, ಬಯೋಮೆಟ್ರಿಕ್ಸ್ ಅನ್ನು ಕಡ್ಡಾಯವಾಗಿ ನವೀಕರಿಸಬೇಕಾಗಿದೆ," ಎಂದು ಉಲ್ಲೇಖಿಸಿದೆ.

Aadhaar Card For Children: No fingerprint, eye scan for children below 5 years

ಒಂದು ಮಗು 5 ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದು ಆದ್ದಲ್ಲಿ, ಪೋಷಕರು ಅಥವಾ ಪೋಷಕರಲ್ಲಿ ಒಬ್ಬರು ಮಗುವಿನ ಪರವಾಗಿ ದೃಢೀಕರಿಸಬೇಕು ಮತ್ತು ದಾಖಲಾತಿ ನಮೂನೆಯಲ್ಲಿ ಸಹಿ ಮಾಡುವ ಮೂಲಕ ಅಪ್ರಾಪ್ತ ವಯಸ್ಕರ ದಾಖಲಾತಿಗೆ ಒಪ್ಪಿಗೆ ನೀಡಬೇಕು ಎಂದು ಯುಐಡಿಎಐ ತಿಳಿಸಿದೆ.

ಇನ್ನು ಮಗುವಿನ ಹೆಸರಿನಲ್ಲಿ ಆಧಾರ್‌ ಮಾಡುವಾಗ, ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್, ಅಥವಾ ಮಗುವಿನ ಶಾಲೆಯ ಐಡಿ ಹಾಗೂ ಪೋಷಕರಲ್ಲಿ ಒಬ್ಬರ ಆಧಾರ್‌ ಕಾರ್ಡ್ ಮಾತ್ರ ಬೇಕಾಗುತ್ತದೆ ಎಂದು ಕೂಡಾ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.

ಜೂನ್ 30ರವರೆಗೂ ಆಧಾರ್- ಪ್ಯಾನ್‌ ಜೋಡಣೆ ಗಡುವು ವಿಸ್ತರಣೆಜೂನ್ 30ರವರೆಗೂ ಆಧಾರ್- ಪ್ಯಾನ್‌ ಜೋಡಣೆ ಗಡುವು ವಿಸ್ತರಣೆ

'' ಮಗು ಎನ್‌ಆರ್‌ಐ ಆಗಿದ್ದರೆ, ಮಗುವಿನ ಮಾನ್ಯ ಭಾರತೀಯ ಪಾಸ್‌ಪೋರ್ಟ್ ಪ್ರೂಫ್ ಆಫ್ ಐಡೆಂಟಿಟಿ (ಪಿಒಐ) ಎಂದು ಕಡ್ಡಾಯವಾಗಿದೆ. ಮಗು ಭಾರತೀಯ ನಿವಾಸಿಯಾಗಿದ್ದರೆ, ಜನನ ಪ್ರಮಾಣಪತ್ರದಂತಹ ಸಂಬಂಧದ ದಾಖಲೆಗಳ ಯಾವುದೇ ಮಾನ್ಯ ಪುರಾವೆ, ಜೊತೆಗೆ ಪೋಷಕರು ಅಥವಾ ಪೋಷಕರ ಆಧಾರ್ ಅನ್ನು ದಾಖಲಾತಿಗೆ ಬಳಸಬಹುದು,'' ಎಂದು ಹೇಳಿದೆ.

ಮಗುವಿಗೆ 5 ರಿಂದ 18 ವರ್ಷ ವಯಸ್ಸಿನವರಾಗಿದ್ದರೆ, ಪೋಷಕರು ಅಥವಾ ಪಾಲಕರಲ್ಲಿ ಒಬ್ಬರು ದಾಖಲಾತಿ ನಮೂನೆಯಲ್ಲಿ ಸಹಿ ಮಾಡುವ ಮೂಲಕ ಅಪ್ರಾಪ್ತ ವಯಸ್ಕರ ದಾಖಲಾತಿಗೆ ಒಪ್ಪಿಗೆ ನೀಡಬೇಕು ಎಂದು ತಿಳಿಸಿದೆ.

ಆಧಾರ್ ಯುಐಡಿಎಐ ಎಲ್ಲಾ ಭಾರತೀಯ ನಿವಾಸಿಗಳಿಗೆ ನೀಡಿದ 12-ಅಂಕಿಯ ಸಂಖ್ಯೆಯಾಗಿದೆ. ಇದನ್ನು ಪ್ರಮುಖ ಗುರುತಿನ ಪುರಾವೆಯಾಗಿ ಪರಿಗಣಿಸಲಾಗುತ್ತಿದೆ. ಈ ಕಾರ್ಡ್ ದಾಖಲಾತಿ ಪ್ರಕ್ರಿಯೆಯಲ್ಲಿ ಸಂಗ್ರಹಿಸಿದ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿದೆ. ಈ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುತ್ತದೆ.

(ಒನ್‌ಇಂಡಿಯಾ ಸುದ್ದಿ)

English summary
Aadhaar Card For Children: Fingerprints and an eye scan are not required for getting an Aadhaar card for children below 5 years of age, the Unique Identification Authority of India (UIDAI) has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X