ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ತೆರಿಗೆ ಪಾವತಿಸಲು ಆಧಾರ್ ಸಂಖ್ಯೆಯೇ ಸಾಕು

|
Google Oneindia Kannada News

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ತೆರಿಗೆ ವಿಚಾರದಲ್ಲಿ ಹಲವು ಮಹತ್ತರವಾದ ಬದಲಾವಣೆ ಮಾಡಲಾಗಿದೆ. ಮುಖ್ಯವಾಗಿ ತೆರಿಗೆ ಸಂಗ್ರಹ ಸಲೀಸಾಗಲಿ ಎಂಬ ಕಾರಣಕ್ಕೆ ಆದಾಯ ತೆರಿಗೆ ರಿಟರ್ನ್ ಮಾಡುವಾಗ ಆಧಾರ್ ಸಂಖ್ಯೆ ನೀಡಿದರೂ ಸಾಕು ಎಂದು ಹೇಳಲಾಗಿದೆ. ಹಾಗಂತ ಪ್ಯಾನ್ ಕಾರ್ಡ್ ಅಸ್ತಿತ್ವಕ್ಕೆ ಏನೂ ಧಕ್ಕೆ ಇಲ್ಲ. ಎಲ್ಲಿ ಅಗತ್ಯವೋ ಅಲ್ಲಿ ಪ್ಯಾನ್ ಸಂಖ್ಯೆ ಮಾಹಿತಿಯನ್ನೂ ನೀಡಬೇಕಾಗುತ್ತದೆ.

ಕೇಂದ್ರ ಬಜೆಟ್ Live Updates: ಈ ವರ್ಷದಲ್ಲಿ ದೇಶ ಬಯಲುಶೌಚ ಮುಕ್ತಕೇಂದ್ರ ಬಜೆಟ್ Live Updates: ಈ ವರ್ಷದಲ್ಲಿ ದೇಶ ಬಯಲುಶೌಚ ಮುಕ್ತ

ಇದರ ಜತೆಗೆ ಬ್ಯಾಂಕ್ ನಿಂದ ವಾರ್ಷಿಕವಾಗಿ ಒಂದು ಕೋಟಿಗೂ ಹೆಚ್ಚು ಹಣ ವಿಥ್ ಡ್ರಾ ಮಾಡುವವರಿಗೆ ಎರಡು ಪರ್ಸೆಂಟ್ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬರಲಾಗಿದೆ. ಆದರೆ ಈ ಮೊತ್ತವನ್ನು ಹೇಗೆ ಗಮನಿಸಲಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಜತೆಗೆ ಚಾಲ್ತಿ ಖಾತೆ (ಕರೆಂಟ್ ಅಕೌಂಟ್) ವ್ಯವಹಾರಗಳಲ್ಲಿ ಈ ಒಂದು ಕೋಟಿ ಮೊತ್ತ ಸಲೀಸಾಗಿ ದಾಟುತ್ತದೆ. ಎಷ್ಟೋ ಸಂದರ್ಭದಲ್ಲಿ ಸಣ್ಣ-ಪುಟ್ಟ ಖರ್ಚುಗಳು, ವರ್ಕಿಂಗ್ ಕ್ಯಾಪಿಟಲ್ ನ ಅಗತ್ಯಗಳಿಗಾಗಿ ನಗದು ವಿಥ್ ಡ್ರಾ ಮಾಡುವ ಸಾಧ್ಯತೆ ಇರುತ್ತದೆ.

Aadhaar card enough to Income tax return, PAN card not mandatory

ಇನ್ನು ಉಳಿತಾಯ ಖಾತೆಗೆ ಅನ್ವಯಿಸಿ ಹೇಳುವುದಾದರೆ, ತುಂಬ ದೊಡ್ಡ ಆದಾಯ ಬಂದ ನಂತರ ಬ್ಯಾಂಕ್ ನಲ್ಲಿ ಅಷ್ಟು ಮೊತ್ತವನ್ನು ಜಮೆ ಮಾಡಿ, ಆ ನಂತರ ವಿಥ್ ಡ್ರಾ ಮಾಡುವವರು ಎಷ್ಟು ಮಂದಿ ಎಂಬುದು ಪ್ರಶ್ನಾರ್ಹ. ಹಾಗೆ ನಗದು ವಿಥ್ ಡ್ರಾ ಮಾಡುವ ಉದ್ದೇಶ ಇದ್ದರೂ ಇನ್ನು ಮುಂದೆ ನಿಯಮಾವಳಿಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಆದರೆ ಈ ನಿಯಮದ ಬಗ್ಗೆ ಇನ್ನೂ ಹೆಚ್ಚಿನ ಸ್ಪಷ್ಟತೆ ಬೇಕಿದೆ.

English summary
Union Budget 2019: Aadhaar card enough to Income tax return, PAN card not mandatory. Finance minister Nirmala Sitharaman proposed in her speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X