ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಊರಲ್ಲಿ ಹೆಣ್ಣುಮಕ್ಕಳು ಮೊಬೈಲ್ ಬಳಸುವಂತಿಲ್ಲ

|
Google Oneindia Kannada News

ಸೋನಿಪಟ್ (ಹರಿಯಾಣ): ಈ ಗ್ರಾಮದಲ್ಲಿ ಹೆಣ್ಣುಮಕ್ಕಳು ಮೊಬೈಲ್ ಬಳಸುವಂತಿಲ್ಲ. ಜೀನ್ಸ್‌ ಅಂತೂ ಧರಿಸುವಂತೆಯೇ ಇಲ್ಲ.

ಹೌದು. ಹೆಣ್ಣುಮಕ್ಕಳ ಮೇಲೆ ಇಂಥದ್ದೊಂದು ನಿರ್ಬಂಧ ವಿಧಿಸಿ ಹರಿಯಾಣದ ಸೋನಿಪಟ್ ಜಿಲ್ಲೆಯ ಇಸಾಯ್‌ಪುರ ಖೇದಿ ಗ್ರಾಮ ಪಂಚಾಯತ್ ಆದೇಶ ಹೊರಡಿಸಿದೆ.

"ಅಂತರ್ಜಾಲ, ಉಪಗ್ರಹ ಸೌಲಭ್ಯ ಮಹಾಭಾರತ ಕಾಲದಲ್ಲೇ ಅಸ್ತಿತ್ವದಲ್ಲಿತ್ತು!"

ಇಲ್ಲಿನ ಹೆಣ್ಣುಮಕ್ಕಳು ಪರಾರಿಯಾದ ಕೆಲವು ಘಟನೆಗಳು ನಡೆದ ಕಾರಣ ಗ್ರಾಮಪಂಚಾಯತ್ ಈ ಫರ್ಮಾನು ಹೊರಡಿಸಿತ್ತು. ವರ್ಷದ ಹಿಂದೆಯೇ ಈ ರೀತಿ ಆದೇಶ ಹೊರಡಿಸಲಾಗಿತ್ತು.

A village of Haryana bans girls from using mobiles, wearing jeans

ಈ ನಿಯಮ ಜಾರಿಗೆ ಬಂದ ಬಳಿಕ ಗ್ರಾಮದ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎನ್ನುತ್ತಾರೆ ಗ್ರಾಮದ ಸರಪಂಚ್ ಪ್ರೇಮ್ ಸಿಂಗ್.

'ನಮ್ಮ ಗ್ರಾಮದಲ್ಲಿ ಹೆಣ್ಣುಮಕ್ಕಳು ಜೀನ್ಸ್ ಧರಿಸುವಂತಿಲ್ಲ. ಅಲ್ಲದೆ ಅವರು ಮೊಬೈಲ್‌ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಅದನ್ನೂ ನಾವು ನಿಷೇಧಿಸಿದ್ದೇವೆ. ಅವುಗಳಿಂದ ಹೆಣ್ಣುಮಕ್ಕಳು ಹಾಳಾಗುತ್ತಾರೆ ಎಂದು ನಾನು ಹೇಳುತ್ತಿಲ್ಲ. ಆದರೆ, ಅದು ಅವರಿಗೆ ಹೊಂದಿಕೆಯಾಗುವುದಿಲ್ಲ' ಎಂದು ಸಿಂಗ್ ಹೇಳುತ್ತಾರೆ.

ಗ್ರಾಮ ಪಂಚಾಯತ್‌ನ ಈ ನಿರ್ಬಂಧಕ್ಕೆ ಅಲ್ಲಿನ ಹೆಣ್ಣುಮಕ್ಕಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಸಂಪೂರ್ಣ ತಪ್ಪು ನಿರ್ಧಾರ. ಸಮಸ್ಯೆ ಇರುವುದು ಪುರುಷರ ಮನೋಭಾವದಲ್ಲಿ. ಮಹಿಳೆ ತೊಡುವ ಬಟ್ಟೆಗಳ ಆಧಾರದಲ್ಲಿ ಆಕೆಯ ನಡತೆಯನ್ನು ಅವರು ಹೇಗೆ ನಿರ್ಧರಿಸುತ್ತಾರೆ? ಎಂದು ಪ್ರಶ್ನಿಸುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.

English summary
A village in Haryana's Sonipat district have banned girls from using mobile phones and wearing jeans to control the incidents of elopement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X