ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಾ? ಜ್ಯೋತಿಷಿ, ವಿಜ್ಞಾನಿಗಳು ಏನಂತಾರೆ?

|
Google Oneindia Kannada News

ನವದೆಹಲಿ, ಸೆಪ್ಟೆಬಂರ್ 11: "ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಸಂವಹನ ಕಳೆದುಕೊಂಡ ಹದಿನಾಲ್ಕು ದಿನಗಳ ಒಳಗೆ ಸಂಪರ್ಕಕ್ಕೆ ಸಿಕ್ಕುತ್ತಾ? " ಎಂಬುದು ಹಲವರ ಮನಸ್ಸಿನಲ್ಲಿ ಕೊರೆಯುತ್ತಿರುವ ಪ್ರಶ್ನೆ.

ಈ ಪ್ರಶ್ನೆಗೆ ಅನಿರುದ್ಧ ಕುಮಾರ್ ಮಿಶ್ರಾ ಎಂಬ ಜ್ಯೋತಿಷಿಯೊಬ್ಬರು ಉತ್ತರ ನೀಡಿದ್ದಾರೆ. ಸೆಪ್ಟೆಂಬರ್ 7 ರ ಬೆಳಗ್ಗಿನ ಜಾವ ಆರ್ಬಿಟರ್ ನೊಂದಿಗೆ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಅನಿರುದ್ಧ ಟ್ವೀಟ್ ಮಾಡಿದ್ದರು. ಇಸ್ರೋ ಸಹ ಸಂಪರ್ಕ ದೊರಕಬಹುದು ಎಂಬ ಭರವಸೆಯನ್ನು ವ್ಯಕ್ತಪಡಿಸಿತ್ತು.

ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದೇಕೆ? ವಿಜ್ಞಾನಿ ನೀಡಿದ ವಿವರ...ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದೇಕೆ? ವಿಜ್ಞಾನಿ ನೀಡಿದ ವಿವರ...

ವಿಕ್ರಂ ಲ್ಯಾಂಡರ್ ಚಂದ್ರನ ವಾತಾವರಣದಲ್ಲಿ ಕೇವಲ 14 ದಿನಗಳಷ್ಟೇ ಕಾರ್ಯನಿರ್ವಹಿಸಲು ಸಾಧ್ಯ. ಆದ್ದರಿಂದ ಅದು ಸಂಪರ್ಕಕಕ್ಕೆ ಸಿಕ್ಕುವುದಾದರೆ ಹದಿನಾಲ್ಕು ದಿನಗಳ ಒಳಗೆ ಸಿಗಬೇಕು. ಈಗಾಗಲೇ ಮೂರು ದಿನ ಕಳೆದಿದ್ದು, ಇನ್ನು ಹನ್ನೊಂದು ದಿನಗಳಷ್ಟೇ ಸಮಯವಿದೆ.

ಜ್ಯೋತಿಷಿ ಹೇಳಿದ್ದೇನು?

ಜ್ಯೋತಿಷಿ ಹೇಳಿದ್ದೇನು?

"ನನ್ನ ಲೆಕ್ಕಾಚಾರದ ಪ್ರಕಾರ ಸೆಪ್ಟೆಂಬರ್ 20 ರ ಒಳಗೆ ವಿಕ್ರಂ ಲ್ಯಾಂಡರ್ ಖಂಡಿತವಾಗಿಯೂ ಸಂಪರ್ಕಕ್ಕೆ ಸಿಗುತ್ತದೆ. ಈಗಾಗಲೇ ಇಸ್ರೋದ ವಿಜ್ಞಾನಿಗಳು ಅದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಸಫಲವಾಗಲಿದೆ, ಆಗಲಿ ಎಂಬುದು ನನ್ನ ಹಾರೈಕೆ" ಎಂದು ಅನಿರುದ್ಧ ಹೇಳಿದ್ದಾರೆ.

ಸೆ.13 ರಿಂದ 18 ರ ಒಳಗೆ ಸಂಪರ್ಕ

ಸೆ.13 ರಿಂದ 18 ರ ಒಳಗೆ ಸಂಪರ್ಕ

ಹೈದರಾಬಾದ್ ಮೂಲದ ಜ್ಯೋತಿಷ ಅಧ್ಯಯನಕಾರರ ಪ್ರಕಾರ ವಿಕ್ರಂ ಲ್ಯಾಂಡರ್ ಸೆಪ್ಟೆಂಬರ್ 13 ರಿಂದ 18 ಒಳಗೆ ಸಂಪರ್ಕಕ್ಕೆ ಸಿಗಲಿದೆ. ಜೆ ಉದಯ ಭಾಸ್ಕರ್ ಶಾಸ್ತ್ರಿ ಎಂಬ ಜ್ಯೋತಿಷಿ ಪ್ರಕಾರ ಸೆಪ್ಟೆಂಬರ್ 13 ಸಂಜೆ 5:20 ರ ಸಮಯದಲ್ಲಿ ಸಂಪರ್ಕಕ್ಕೆ ಸಂಬಂಧಿಸಿದಂತೆ ಲ್ಯಾಂದರ್ ನಿಂದ ಧನಾತ್ಮಕ ಪ್ರತಿಕ್ರಿಯೆ ಹೊರಬರಲಿದೆ. ಅಕಸ್ಮಾತ್ ಅಂದು ಸಂಪರ್ಕ ಸಿಗದಿದ್ದರೆ ಸೆಪ್ಟೆಂಬರ್ 18 ಸಹ ಶುಭದಿನವಾಗಿದ್ದು, ಅಮದು ಸಂಪರ್ಕಕ್ಕೆ ಸಿಕ್ಕಿಯೇ ಸಿಗುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?

ವಿಜ್ಞಾನಿಗಳು ಹೇಳೋದೇನು?

ವಿಜ್ಞಾನಿಗಳು ಹೇಳೋದೇನು?

ಜ್ಯೋತಿಷಿಗಳೇನೋ ಸಂಪರ್ಕ ಸಿಕ್ಕೇ ಸಿಗುತ್ತದೆಂದು ಭರವಸೆಯಲ್ಲೇ ಹೇಳುತ್ತಾರೆ. ಆದರೆ ವಿಜ್ಞಾನಿಗಳು ಹೇಳೋದೇನು? ವಿಕ್ರಂ ಲ್ಯಾಂದರ್ ನೊಂದಿಗೆ ಸಂಪರ್ಕ ಸಿಗುತ್ತದೆ ಎಂಬ ಭರವಸೆ ವಿಜ್ಞಾನಿಗಳಿಗೂ ಇದೆ. ಆದರೆ ಅದು ಅಷ್ಟು ಸುಲಭವಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ, ಸೂರ್ಯನ ಬೆಳಕೇ ಸೋಕದ ಜಾಗದಲ್ಲಿ ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸಲು ಹಲವು ಅಡೆತಡೆಗಳಿವೆ. ಲ್ಯಾಂದರ್ ಮುರಿದಿಲ್ಲ ಎಂಬುದು ಸತ್ಯವಾದರೂ ಅದು ಲ್ಯಾಂಡ್ ಆದ ಸಂದರ್ಭದಲ್ಲಿ ತಾಂತ್ರಿಕ ದೋಷವೇನಾದರೂ ಸೃಷ್ಟಿಯಾಗಿದ್ದರೆ ಸಂಪರ್ಕ ಪಡೆಯುವುದಕ್ಕೆ ಸಾಧ್ಯವಾಗದೆ ಇರಬಹುದು.

ಭರವಸೆ ಉಳಿಸಿದ ಆರ್ಬಿಟರ್ ಕಳಿಸಿದ ಆ ಚಿತ್ರ

ಭರವಸೆ ಉಳಿಸಿದ ಆರ್ಬಿಟರ್ ಕಳಿಸಿದ ಆ ಚಿತ್ರ

ಸಾಫ್ಟ್ ಲ್ಯಾಂಡಿಂಗ್ ಆಗಲು ಅಗತ್ಯ ವೇಗವನ್ನು ತಗ್ಗಿಸಿಕೊಳ್ಳುವಲ್ಲಿ ಲ್ಯಾಂಡರ್ ವಿಫಲವಾದ ಪರಿಣಾಮ ಅದು ಚಂದ್ರನ ಮೇಲೆ ಅಪ್ಪಳಿಸಿ, ಮುರಿದು ನಾಶವೂ ಆಗಿದ್ದಿರಬಹುದು ಎಂಬ ಒಂದು ಸಾಧ್ಯತೆಯನ್ನು ಆರ್ಬಿಟರ್ ಭಾನುವಾರ ಕಳಿಸಿದ ಚಿತ್ರ ಸುಳ್ಳು ಮಾಡಿತ್ತು. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಥರ್ಮಲ್ ಇಮೇಜ್ ಅನ್ನು ಅದು ಕಳಿಸಿತ್ತು. ವಿಕ್ರಂ ಲ್ಯಾಂಡರ್ ಮುರಿದಿಲ್ಲ ಎಂಬುದು ಈ ಚಿತ್ರದಿಂದ ಸಾಬೀತಾಗಿತ್ತು. ಆದ್ದರಿಂದ ಚಂದ್ರನ ವಾತಾವರಣಕ್ಕೆ ಹೊಂದಿಕೊಂಡು, ಅಡೆತಡೆಗಳನ್ನು ಮೀರಿ ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಇದೀಗ ಮತ್ತೆ ಚಿಗುರಿದೆ.

'ಕಳೆದುಕೊಂಡಿದ್ದು ಸಂವಹನವನ್ನ, ಭರವಸೆಯನ್ನಲ್ಲ!' ಇಸ್ರೋ ಬೆನ್ನಿಗೆ ನಿಂತ ಭಾರತ'ಕಳೆದುಕೊಂಡಿದ್ದು ಸಂವಹನವನ್ನ, ಭರವಸೆಯನ್ನಲ್ಲ!' ಇಸ್ರೋ ಬೆನ್ನಿಗೆ ನಿಂತ ಭಾರತ

English summary
Anirudh Kumar Mishra, A Vedic Astrologer Assures Chandrayaan 2 Vikram Lander will gain back communication till Sep 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X