ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಜಯ: ಸಮೀಕ್ಷೆ

|
Google Oneindia Kannada News

ನವದೆಹಲಿ, ಆಗಸ್ಟ್ 14: ಇದೇ ವರ್ಷ ಡಿಸೆಂಬರ್ ನಲ್ಲಿ ನಡೆಯಬಹುದು ಎಂದು ನಿರೀಕ್ಷಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರೀ ಸೋಲು ಅನುಭವಿಸಲಿದೆ ಎಂದು ಸಿವೋಟರ್ ಮತ್ತು ಎಬಿಪಿ ನ್ಯೂಸ್ ಸಮೀಕ್ಷೆ ತಿಳಿಸಿದೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಈ ರಾಜ್ಯದ ಜನರಲ್ಲಿ ಆಡಳಿತ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ. ಆದ್ದರಿಂದ ಈ ಮೂರೂ ರಾಜ್ಯಗಳಲ್ಲಿ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಲೋಕಸಭಾ ಚುನಾವಣೆ ಜೊತೆ 11 ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ? ಲೋಕಸಭಾ ಚುನಾವಣೆ ಜೊತೆ 11 ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ?

ಲೋಕಸಭಾ ಚುನಾವಣೆಯ ಗತಿಯನ್ನೇ ಬದಲಿಸುವ ತಾಕತ್ತಿರುವ ಈ ಮೂರು ರಾಜ್ಯಗಳ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಈಗಾಗಲೇ ಗೆಲುವಿನ ಕಾರ್ಯತಂತ್ರ ರೂಪಿಸಲಾಗುತ್ತಿದೆ.

ಸ್ಪಷ್ಟ ಬಹುಮತ ಪಡೆಯಲಿರುವ ಕಾಂಗ್ರೆಸ್

ಸ್ಪಷ್ಟ ಬಹುಮತ ಪಡೆಯಲಿರುವ ಕಾಂಗ್ರೆಸ್

ಸಮೀಕ್ಷೆಯ ಪ್ರಕಾರ ಮಧ್ಯ ಪ್ರದೇಶದಲ್ಲಿ 117(230), ರಾಜಸ್ಥಾನದಲ್ಲಿ 130(200) ಮತ್ತು ಛತ್ತೀಸ್ ಗಢದಲ್ಲಿ 54(90) ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಾಲಿಗೆ ಈ ಸಮೀಕ್ಷೆ ಕೊಂಚ ಭರವಸೆ ಮೂಡಿಸಿರುವುದಂತೂ ಸತ್ಯ!

ಚುನಾವಣೆಗೂ ಮುನ್ನ ರಾಜಸ್ಥಾನ ಬಿಜೆಪಿಗೆ ಹೊಸ 'ರಜಪೂತ' ಸಾರಥಿಚುನಾವಣೆಗೂ ಮುನ್ನ ರಾಜಸ್ಥಾನ ಬಿಜೆಪಿಗೆ ಹೊಸ 'ರಜಪೂತ' ಸಾರಥಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸೀಟು?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸೀಟು?

ಆದರೆ ಲೋಕಸಭಾ ಚುನಾವಣೆಯ ವಿಷಯದಲ್ಲಿ ಮಾತ್ರ ಈ ರಾಜ್ಯಗಳ ಜನರು ವ್ಯತಿರಿಕ್ತ ಅಭಿಪ್ರಾಯ ನೀಡಿದ್ದಾರೆ! ಈ ಸಮೀಕ್ಷೆಯ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ನೀದಲಿರುವ ಜನರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸೀಟು ಗೆಲ್ಲಿಸಿಕೊಡಲಿದ್ದಾರೆ! ಮೂರೂ ರಾಜ್ಯಗಳ ಮತ ಹಂಚಿಕೆಯಲ್ಲಿ ಸಹ ಬಿಜೆಪಿ ಸಿಂಹಪಾಲು ಪಡೆಯಲಿದೆ!

ಮತ ಹಂಚಿಕೆ ವಿವರ

ಮತ ಹಂಚಿಕೆ ವಿವರ

ರಾಜಸ್ಥಾನದಲ್ಲಿ 2013 ರಲ್ಲಿ 163(200) ಸೀಟು ಗೆದ್ದಿದ್ದ ಬಿಜೆಪಿ ಈ ಬಾರಿ ಕಳಪೆ ಪ್ರದರ್ಶನ ತೋರಲಿದ್ದು, 51 ಪ್ರತಿಶತ ಮತ ಹಂಚಿಕೆಯೊಂದಿಗೆ ಕಾಂಗ್ರೆಸ್ 130 ಸ್ಥಾನ ಗೆಲ್ಲಲಿದೆ. ಮಧ್ಯಪ್ರದೇಶದಲ್ಲಿ 117(230) ಸ್ಥಾನ ಗೆಲ್ಲಲಿರುವ ಕಾಂಗ್ರೆಸ್ ಪರ 42 ಪ್ರತಿಶತ ಮತ ಹಂಚಿಕೆಯಾಗಲಿದೆ. ಇನ್ನು ಛತ್ತೀಸ್ ಗಢದ 90 ಕ್ಷೇತ್ರಗಳಲ್ಲಿ 54 ನ್ನು ಗೆಲ್ಲಲಿರುವ ಕಾಂಗ್ರೆಸ್ ಪರ ಶೇ.40 ರಷ್ಟು ಮತ ಹಂಚಿಕೆಯಾಗಲಿದೆ ಎಂದು ಸಮೀಕ್ಶಃಎ ತಿಳಿಸಿದೆ.

ಚುನಾವಣೆ ಯಾವಾಗ ನಡೆಯಬಹುದು?

ಚುನಾವಣೆ ಯಾವಾಗ ನಡೆಯಬಹುದು?

2019 ರ ಜನವರಿಯಲ್ಲಿ ಈ ಮೂರು ವಿಧಾನಸಭೆಯ ಕಾಲಾವಧಿ ಅಂತ್ಯವಾಗಲಿದ್ದು, ಅದಕ್ಕೂ ಮುನ್ನ ಚುನಾವಣೆ ನಡೆಯಬೇಕಿದೆ. ಆದರೆ 2019 ರ ಲೋಕಸಭಾ ಚುನಾವಣೆಯ ಸಮಯದಲ್ಲೇ, ದೇಶದ 11 ರಾಜ್ಯಗಳ ಚುನಾವಣೆಯನ್ನೂ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿರುವುದರಿಂದ ಈ ಮೂರು ರಾಜ್ಯಗಳ ಚುನಾವಣೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

English summary
Pre Poll survye: CVOTER and ABP News pre poll survey predicts Congress will win with clear majority in Rajasthan, Madhya Pradesh, Chhattisgarh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X