ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕಾಲಿಕವಾಗಿ ಹುಟ್ಟಿದ ಚಾಲಕನ ಮಗಳ ಚಿಕಿತ್ಸೆಗೆ ನೆರವು ಬೇಕಿದೆ

Google Oneindia Kannada News

ಅಂಜಿ ಮತ್ತು ಮಂಗಮ್ಮ ಎನ್ನುವ ಯುವ ತಂಪತಿಗಳು ತಮ್ಮ ಚೊಚ್ಚಲ ಮಗುವಿಗಾಗಿ ಹಂಬಲಿಸುತ್ತಿದ್ದರು. ಇವರ ಆಸೆ ಹಾಗೂ ನಿರೀಕ್ಷೆಯು ನಿಗದಿತ ಸಮಯಕ್ಕಿಂತ ಮುಂಚೆಯೇ ಕೈಗೂಡಿತು; ಅಂದರೆ ಅಕಾಲಿಕ ಜನನದಿಂದ. ಆದರೆ ಮೇ 30, 2018ರಂದು ಹೆಣ್ಣು ಮಗುವಿನ ಜನನದ ಜೊತೆಗೆ ಒಂದಿಷ್ಟು ದುಃಖವೂ ಸೇರಿಕೊಂಡಿತು. ಅದಕ್ಕೆ ಕಾರಣ ಅಂಜಿ ಮತ್ತು ಮಂಗಮ್ಮ ಅವರ ಶಿಶು ಏಳು ತಿಂಗಳಲ್ಲಿಯೇ ಜನಿಸಿರುವುದು.

ಆ ಶಿಶು ಹುಟ್ಟುತ್ತಲೇ ಉಸಿರಾಟದ ಸಮಸ್ಯೆಯನ್ನು ಅನುಭವಿಸುತ್ತಿತ್ತು. ಈ ಕಾರಣದಿಂದಾಗಿ ತಕ್ಷಣವೇ ವೆಂಟಿಲೇಟರ್ ಅಳವಡಿಸಲಾಯಿತು. ಹುಟ್ಟಿದ ಕ್ಷಣದಿಂದಲೂ ಮಗು ಟ್ಯೂಬ್‍ಗಳು, ಇಂಜಕ್ಷನ್, ಬ್ಯಾಂಡೇಜ್‍ಗಳಿಂದಲೇ ಆವರಿಸಿಕೊಂಡಿದೆ. ಮಗುವಿನ ಆರೋಗ್ಯ ಸುಧಾರಣೆಗೆ ದೀರ್ಘ ಕಾಲದವರೆಗೆ ಎನ್‍ಐಸಿಯು ನಲ್ಲಿ ಇಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಮಗುವಿನ ಆರೋಗ್ಯ ಸುಧಾರಣೆ ಆಗುವವರೆಗೆ ಚಿಕಿತ್ಸೆ ನಡೆಸಲು ಬೇಕಾದಷ್ಟು ಹಣವನ್ನು ಅಂಜಿ ದಂಪತಿಗಳು ಹೊಂದಿಲ್ಲ. ಇವರ ಆರ್ಥಿಕ ಸ್ಥಿತಿ ದುರ್ಬಲವಾಗಿದೆ.

ಅಂಜಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ತಿಂಗಳ ಆದಾಯ 10 ಸಾವಿರ ರೂಪಾಯಿ. ಇವರ ಪತ್ನಿಯಿಂದಲೂ ಯಾವುದೇ ದುಡಿಮೆಯಿಲ್ಲ. ಹೀಗಿದ್ದರೂ ಇವರು ತಮ್ಮ ಸ್ನೇಹಿತರು ಹಾಗೂ ಬಂಧುಗಳ ಸಹಾಯದಿಂದ 3 ಲಕ್ಷ ಹಣವನ್ನು ಪಡೆದಿದ್ದಾರೆ. ಆದರೆ ಮಗುವಿನ ಸಂಪೂರ್ಣ ಚಿಕಿತ್ಸೆಗೆ 8 ಲಕ್ಷ ರೂಪಾಯಿಯ ಅಗತ್ಯವಿದೆ.

ಇಷ್ಟೊಂದು ಹಣವನ್ನು ಭರಿಸುವುದು ಅಥವಾ ಸಂಗ್ರಹಿಸುವುದು ಇವರಿಗೆ ಕಷ್ಟವಾಗುತ್ತಿದೆ. ಹಾಗಾಗಿಯೇ ಮಗುವಿನ ಆರೋಗ್ಯ ಸುಧಾರಣೆಗಾಗಿ ಎಲ್ಲರಲ್ಲೂ ಸಹಾಯ ಹಸ್ತವನ್ನು ಯಾಚಿಸುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಸಹಾಯ ಮಾಡಲು ಬಯಸುವವರು ದೇಣಿ ಅಥವಾ ದಾನದ ರೂಪದಲ್ಲಿ ಹಣ ಸಹಾಯ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X