ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ವಯನಾಡಿನ ಬಸ್ ನಿಲ್ದಾಣದಲ್ಲಿ ಜನ ಬೆಚ್ಚಿದ್ದೇಕೆ?

By Mahesh
|
Google Oneindia Kannada News

ವಯನಾಡು, ಜೂ.18: ದೇವರ ನಾಡು ಕೇರಳ ವಯನಾಡು ಜಿಲ್ಲೆಯ ಪುಟ್ಟ ಊರು ಕಲ್ಪೆಟ್ಟದ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳ್ಳಗೆ ಪ್ರಸಾರವಾದ ಸಿನಿಮಾ ನೋಡಿ ಅಲ್ಲಿದ್ದ ಮಹಿಳೆಯರು ಬೆಚ್ಚಿ ಓಟಕಿತ್ತಿದ್ದಾರೆ, ಪುರುಷರು ಕಂಗಾಲಾಗಿ ಅತ್ತಿಂದಿತ್ತ ನೋಡಿದ್ದಾರೆ, ಮಕ್ಕಳು ಕುತೂಹಲದಿಂದ ಟಿವಿ ಕಡೆಗೆ ನೋಡತೊಡಿಗಿದ್ದಾರೆ. ಇಷ್ಟಕ್ಕೂ ಸಾರ್ವಜನಿಕರಿಗೆ ಇಷ್ಟೆಲ್ಲ ಸಮಸ್ಯೆ ಏಕೆ ಉಂಟಾಯಿತು? ಇಲ್ಲಿದೆ ಉತ್ತರ.

ಕಲ್ಪೆಟ್ಟದಲ್ಲಿ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಗಾಗಿ ಕಾದಿದ್ದ ಜನರಿಗೆ ಬಸ್ ನಿಲ್ದಾಣದಲ್ಲಿದ್ದ ಟಿವಿಗಳು ಶಾಕ್ ನೀಡಿವೆ. ಎರಡು ದಿನಗಳ ಹಿಂದೆ ಎರಡು ಟಿವಿಗಳಲ್ಲಿ ಬೆಳಗ್ಗೆ 10.30ರ ಸುಮಾರಿಗೆ ವಯಸ್ಕರ ಸಿನಿಮಾವನ್ನು ಪ್ರಸಾರ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಇಂಥ ಪ್ರಮಾದವಾದರೂ ಎಚ್ಚೆತ್ತುಕೊಳ್ಳದ ಆಡಳಿತ ಅಧಿಕಾರಿಗಳು ಸುಮಾರು 30 ನಿಮಿಷಗಳ ಕಾಲ ಚಿತ್ರ ಓಡಲು ಬಿಟ್ಟಿದ್ದಾರೆ.

A movie shown at Wayanad Kalpetta KSRTC Bus Stand Shocks all

ಬಸ್ ನಿಲ್ದಾಣದಲ್ಲಿದ್ದ ಜನರು ಭಾರಿ ಮುಜುಗರ ಅನುಭವಿಸಿದ್ದಾರೆ. ಕೆಲವರು ಟಿವಿ ಪರದೆ ಮುಚ್ಚಲು ಯತ್ನಿಸಿದರು. ಟಿವಿ ಆಪರೇಟರ್ ರೂಮ್ ಲಾಕ್ ಆಗಿತ್ತು. ಟಿವಿ ಸ್ವಿಚ್ ಸಿಗುತ್ತಿರಲಿಲ್ಲ. ಕೊನೆಗೆ ಕೇಬಲ್ ಕಟ್ ಮಾಡಬೇಕಾಯಿತು. ಮಹಿಳೆಯರಂತೂ ಬಸ್ ಮರೆತು ನಿಲ್ದಾಣದಿಂದ ಕಾಲ್ಕಿತ್ತರು ಎಂದು ಪ್ರತ್ಯಕ್ಷ ದರ್ಶಿಗಳು ತಮ್ಮ ಅನುಭವವನ್ನು ಗುರುವಾರ ಹೇಳಿಕೊಂಡಿದ್ದಾರೆ.

ಕೊನೆಗೂ ಬಸ್ ನಿಲ್ದಾಣದ ನಿರ್ವಾಹಕರು ಎಚ್ಚೆತ್ತುಕೊಂಡು, ಕೇಬಲ್ ಆಪರೇಟರ್ ನನ್ನು ಕಂಡು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳೀಯ ಕೇಬಲ್ ಆಪರೇಟರ್ 38 ವರ್ಷ ವಯಸ್ಸಿನ ಮನ್ಜೂರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಐಪಿಸಿ ಸೆಕ್ಷನ್ 292, ಮಹಿಳೆಯರನ್ನು ಕೆಟ್ಟದಾಗಿ ಪ್ರತಿನಿಧಿಸುವ ನಿಯಂತ್ರಣ ಕಾಯ್ದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಕನಿಷ್ಠ 2 ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.

ವಿಚಾರಣೆ ವೇಳೆ ಈ ಬಗ್ಗೆ ಮಾತನಾಡಿದ ಮನ್ಜೂರ್, ಅವಸರದಲ್ಲಿ ಯಾವುದೋ ಪೆನ್ ಡ್ರೈವ್ ಹಾಕಿಬಿಟ್ಟೆ ಅನ್ಸುತ್ತೆ, ನಾನು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದಿದ್ದಾನೆ.

English summary
Those waiting at a bus station in Kalpetta town in Kerala's Wayanad district were in for a rude shock on Tuesday morning when the two television sets installed to broadcast advertisements suddenly started showing an adult film.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X