ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ದಿನದ ಮಗುವಿನ ಪ್ರಾಣ ಉಳಿಸಿಕೊಳ್ಳಲು ತಾಯಿಯ ಹೋರಾಟ...

Google Oneindia Kannada News

ಮಮತಾ ಈಗ ತಾನೇ ತಾಯಿಯಾದ ಸುಖ ಅನುಭವಿಸಿದ್ದಾಳೆ. ಎಲ್ಲ ತಾಯಂದಿರಂತೆ ಆಕೆಗೂ ಸ್ವಲ್ಪ ಭಯ ಮತ್ತು ಖುಷಿ ಎರಡೂ ಇದೆ. ಕಳೆದ ಕೆಲವು ತಿಂಗಳನ್ನು ಆಕೆ ಉತ್ತಮ ತಾಯಿಯಾಗಬೇಕು ಎಂದು ಕಳೆದಿದ್ದಾಳೆ. ತನ್ನ ಮಗುವಿನ ರಕ್ಷಣೆ ಹೇಗೆ ಮಾಡಬೇಕು ಎಂಬುದನ್ನೆಲ್ಲ ತಿಳಿದುಕೊಂಡಿದ್ದಾಳೆ. ತಾಯಿಯಾಗುವ ಸಂಭ್ರಮಕ್ಕೆ ಕಾದು ಕುಳಿತಿದ್ದಾಳೆ.

ತಾಯಿಯಾದ ಸಂಭ್ರಮ, ಖುಷಿಯನ್ನು ಕಳೆಯುವ ಆಕೆಯ ನಿರೀಕ್ಷೆಗೆ ದೇವರು ಕೃಪೆ ತೋರಿಲ್ಲ ಎಂದು ಕಾಣುತ್ತದೆ. ತಾಯಿಯಾಗಿ ತನ್ನ ಮಗುವಿನ ಆರೈಕೆಗೆ ಆಕೆ ತೆಗೆದುಕೊಂಡ ಎಲ್ಲ ಕಾಳಜಿಯೂ ವ್ಯರ್ಥವಾಗಿರುವಂತೆ ಗೋಚರಿಸುತ್ತಿದೆ. ಯಾಕೆಂದರೆ ಆಕೆಯ ಮಗು ಹುಟ್ಟುವಾಗಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿದೆ. ತಾಯಿಯಾದ ಸಂಭ್ರಮಕ್ಕಿಂತ ಆಕೆಗೆ ನೋವೇ ಹೆಚ್ಚಾಗಿದೆ. ಮಗುವನ್ನು ನೋಡುತ್ತಾ ಅಳುವುದೊಂದೇ ಆಕೆಯ ಕೆಲಸವಾಗಿದೆ.

ಮೇ 13ರಂದು ಮುದ್ದು ಮುದ್ದು ಗಂಡು ಮಗು ಮಮತಾಳ ತೋಳ ತೆಕ್ಕೆಯಲ್ಲಿತ್ತು. ಆದರೆ ಮಾರನೇ ದಿನವೇ ಆ ಮಗುವನ್ನು NICUಗೆ ಕರೆದುಕೊಂಡು ಹೋಗಲಾಯಿತು. ಮಗು ಉಸಿರಾಡಲು ಕಷ್ಟಪಡುತ್ತಿತ್ತು ಮತ್ತು ಕೂಡಲೇ ವೆಂಟಿಲೇಷನ್ ಗೆ ಹಾಕಿ ಮಗುವಿನ ಹೃದಯ ಬಡಿತ ಮತ್ತು ಉಸಿರಾಟಕ್ಕೆ ಪೂರಕ ವ್ಯವಸ್ಥೆಯನ್ನು ಮಾಡಲಾಯಿತು.

ಪ್ರತಿ ಎರಡು ಗಂಟೆಗಳಿಗೊಮ್ಮೆ ಮಮತಾ NICUಗೆ ತೆರಳಿ ಮಗುವಿಗೆ ಹಾಲುಣಿಸಿ ಬರಬೇಕು. ಆದರೆ ಮಗುವಿಗೆ ಸರಿಯಾಗಿ ಎದೆಹಾಲು ಸೇವಿಸಲೂ ಆಗುತ್ತಿಲ್ಲ ಮತ್ತು ತೀವ್ರವಾಗಿ ಅಳಲು ಪ್ರಾರಂಭಿಸುತ್ತದೆ. ಆ ಮಗುವನ್ನು ಸಂತೈಸುವ ಕೆಲಸವನ್ನು ತಾಯಿಯಾಗಿ ಮಮತಾಳಿಗೆ ಮಾಡಲೂ ಸಾಧ್ಯವಾಗುತ್ತಿಲ್ಲ.

ಕೂಡಲೇ ನರ್ಸ್ ಬರಲೇ ಬೇಕು. ಮಗು ಹಾಗೆ ಅಳುವುದನ್ನು ನನ್ನಿಂದ ನೋಡಲು ಸಾಧ್ಯವಿಲ್ಲ. ಅವನನ್ನು ಸಮಾಧಾನಿಸುವ ಸಾಮರ್ಥ್ಯವೂ ನನಗಿಲ್ಲ ಎಂದು ಮಮತಾ ಕಣ್ಣೀರಿಡುತ್ತಾಳೆ.

ಮಗುವನ್ನು ಮತ್ತೆ ವೆಂಟಿಲೇಷನ್ ಗೆ ಹಾಕಬೇಕು. ಮಗುವು ಹೃದಯದ ಸಮಸ್ಯೆಯಿಂದ ಬಳಲುತ್ತಿದೆ. ಮಗು ಹುಟ್ಟುವಾಗಲೇ ಈ ಸಮಸ್ಯೆ ಇದ್ದು, ಕೂಡಲೇ ಸರ್ಜರಿ ಮಾಡಬೇಕಾದ ಅಗತ್ಯವಿದೆ. ಡಾಕ್ಟರ್ ಹೇಳುವ ಪ್ರಕಾರ ಈ ಸರ್ಜರಿ ಮಾಡಲು ಮಗು ತುಂಬಾ ಚಿಕ್ಕದು. ಆದರೆ ಆತನ ಪ್ರಾಣ ಉಳಿಸಬೇಕು ಎಂದರೆ ಈ ಸರ್ಜರಿಯನ್ನು ಮಾಡಲೇಬೇಕು ಎಂದು ತಿಳಿಸುತ್ತಾರೆ.

ಮಮತಾ ತುಂಬಾ ಭಯಗೊಂಡಿದ್ದು, ಇನ್ನೂ ತನ್ನ ತೋಳಿನಲ್ಲಿ ಸರಿಯಾಗಿ ಎತ್ತಿಕೊಳ್ಳಲೂ ಆಗದ ಮಗುವು ಹೇಗೆ ತಾನೆ ಸರ್ಜರಿಯನ್ನು ಸಹಿಸಿಕೊಳ್ಳುತ್ತೋ ಎಂದು ಗದ್ಗದಿತರಾಗುತ್ತಾರೆ.

ಕೇವಲ ಅದೊಂದೇ ಆಕೆಯ ನೋವಲ್ಲ. ಆಕೆಗೆ ಈ ಚಿಕಿತ್ಸೆ ಕೊಡಿಸಲು ಕೂಡಲೇ 5 ಲಕ್ಷ ರುಪಾಯಿ ಹಣ ಬೇಕಾಗಿದೆ. ಈಗಾಗಲೇ ಆಕೆಯ ಕುಟುಂಬವು ತಮ್ಮೆಲ್ಲ ಶಕ್ತಿ ಮೀರಿ ಪೂರ್ತಿ ಹಣವನ್ನು ಆಸ್ಪತ್ರೆಯ ಖರ್ಚಿಗೆ ವ್ಯಯಿಸಿ ಬಿಟ್ಟಿದೆ. ಪ್ರತಿ ದಿನ NICU ಚಿಕಿತ್ಸೆಗೆ 25,000 ರುಪಾಯಿ ಬೇಕಾಗಿತ್ತು ಮತ್ತು ಈಗಾಗಲೇ ಅವರ ಉಳಿತಾಯದ ಎಲ್ಲಾ ಹಣವೂ ಖಾಲಿಯಾಗಿದೆ.

ನನ್ನ ಗಂಡ ಡಿಟಿಎಚ್ ಆಪರೇಟರ್ ಆಗಿ ಸಣ್ಣದೊಂದು ಉದ್ಯೋಗದಲ್ಲಿದ್ದಾರೆ. ಕೆಲವೇ ದಿನದಲ್ಲಿ ಲಕ್ಷಗಟ್ಟಲೆ ಹಣ ಹೊಂದಿಸುವ ಸಾಮರ್ಥ್ಯ ನಮಗಿಲ್ಲ ಎಂದು ಮಮತಾ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಆಕೆಯ ಈ ಪರಿಸ್ಥಿತಿಯನ್ನು ನೋಡಿ, ಆಕೆಯ ಅಣ್ಣ ಒಂದೂವರೆ ಲಕ್ಷ ರುಪಾಯಿಯ ಸಹಾಯ ಹಸ್ತ ಚಾಚಿದ್ದಾರೆ.

ಅಷ್ಟೇ ಅಲ್ಲ, ಆಕೆಯ ಅಣ್ಣ ಆತನ ಹೆಂಡತಿಯ ಚಿನ್ನವನ್ನೆಲ್ಲ ಮಾರಿ ಹಣ ಹೊಂದಿಸಿದ್ದು, ಅದೆಲ್ಲವೂ ಈಗ ಖಾಲಿಯಾಗಿದೆ. ಈಗ ಎಲ್ಲಿಗೆ ಹೋಗುವುದು ಎಂದೇ ತೋಚುತ್ತಿಲ್ಲ ಎಂದು ಮಮತಾ ಚಿಂತಿತರಾಗಿದ್ದಾರೆ. ಆಕೆಗೆ ಈಗ ನೆರವಿನ ಆಗತ್ಯವಿದೆ. ಕೇವಲ 15 ದಿನದ ಹಸುಗೂಸನ್ನು ಆಕೆಗೆ ಉಳಿಸಿಕೊಡಬೇಕಾಗಿದೆ.

ಆಕೆಯ ಮಗುವಿನ ಜೀವ ಮತ್ತು ನಗು ಅಷ್ಟೇ ಆಕೆಗೆ ಬೇಕಾಗಿರುವುದು. ನೀವು ಆಕೆಗೆ ಸಹಾಯ ಮಾಡುವ ಇಚ್ಛೆಯುಳ್ಳವರಾದರೆ ದಯವಿಟ್ಟು ಸಹಕರಿಸಿ....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X