ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ದಿಟ್ಟ ಹೆಜ್ಜೆ: ಬಾಲಾಪರಾಧ ಕಾನೂನಿನಲ್ಲಿ ತಿದ್ದುಪಡಿ

|
Google Oneindia Kannada News

ನವದೆಹಲಿ, ಮೇ 08: ಬಾಲಾಪರಾಧ ಕಾನೂನಿನಲ್ಲಿ ಕೇಂದ್ರ ಸರ್ಕಾರ ಮಹತ್ತರ ಬದಲಾವಣೆ ಮಾಡಿದ್ದಿ ಇದಕ್ಕೆ ಸಂಬಂಧಿಸಿದ ವಿಧೇಯಕ ತಿದ್ದುಪಡಿ ಮಾಡಲಾಗಿದೆ. ಘೋರ ಅಪರಾಧಗಳನ್ನು ಎಸಗಿದ 16ರಿಂದ 18 ವಯಸ್ಸಿನೊಳಗಿನ ಮಕ್ಕಳನ್ನೂ ವಯಸ್ಕರಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಬಹುದು ಎಂಬುದು ವಿಧೇಯಕದ ಪ್ರಮುಖ ಅಂಶ.

ಅಮಾಯಕ ಮಕ್ಕಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ವಿಧೇಯಕದ 7ನೇ ಕಲಂ ಅನ್ನು ತೆಗೆದುಹಾಕಲು ಸರ್ಕಾರ ಒಪ್ಪಿದ ಬಳಿಕ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.["ಕುಡಿದು ವಾಹನ ಚಾಲನೆ, ಸೂಸೈಡ್ ಬಾಂಬರ್ ಗೆ ಸಮ"]

nda

ಬದಲಾದ ವಿಧೇಯಕದ ಹೈಲೈಟ್ಸ್ ಗಳು?
* ಬಾಲ ನ್ಯಾಯ ಕಾಯ್ದೆ, 2000ರ ಬದಲಾಗಿ ಈ ವಿಧೇಯಕ ಕಾಣಿಸಿಕೊಳ್ಳಲಿದೆ.
* ಘೋರ ಅಪರಾಧ ಎಸಗಿದರೆ 16 ರಿಂದ 18ರೊಳಗಿನವರನ್ನೂ ವಯಸ್ಕರಂತೆ ಪರಿಗಣಿಸಿ ವಿಚಾರಣೆ ನಡೆಸಲು ಅನುಮತಿ ನೀಡುತ್ತದೆ.
* ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲ ನ್ಯಾಯ ಮಂಡಳಿ(ಜೆಜೆಬಿ) ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ ರಚನೆಗೆ ಅವಕಾಶ.
* ಬಾಲಾರೋಪಿಯ ಪ್ರಾಥಮಿಕ ತನಿಖೆ ನಡೆಸುವ ಜೆಜೆಬಿ, ವ್ಯಕ್ತಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕೋ, ವಯಸ್ಕನಂತೆ ವಿಚಾರಣೆಗೊಳಪಡಿಸಬೇಕೋ ಎಂಬುದನ್ನು ನಿರ್ಧರಿಸುತ್ತದೆ.[ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!]
* ದತ್ತು ತೆಗೆದುಕೊಳ್ಳುವ ಹೆತ್ತವರ ಅರ್ಹತೆ ಮತ್ತು ದತ್ತು ಪ್ರಕ್ರಿಯೆಯನ್ನು ಕೂಡ ವಿಧೇಯಕದಲ್ಲಿ ವಿವರಿಸಲಾಗಿದೆ.
* ಮಕ್ಕಳಿಗೆ ಮಾದಕ ದ್ರವ್ಯ ನೀಡುವುದು ಮತ್ತು ಮಕ್ಕಳ ಅಪಹರಣ ಅಥವಾ ಮಾರಾಟಕ್ಕೆ ದಂಡ ವಿಧಿಸುವ ಬಗ್ಗೆಯೂ ವಿಧೇಯಕದಲ್ಲಿದೆ.

ನಿರ್ಭಯಾ ಪ್ರಕರಣವೇ ಬದಲಾವಣೆ ಮೂಲ
2012ರ ಡಿ.16ರಂದು ದೆಹಲಿಯಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವಿಧೇಯಕ ಬದಲಾವಣೆಗೆ ಮುನ್ನುಡಿ ಬರೆಯಿತು. ಅಂದು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದವರಲ್ಲಿ ಒಬ್ಬ ಬಾಲಕನೂ ಸೇರಿದ್ದ. ಉಳಿದ ಆರೋಪಿಗಳಿಗೆ ಗಲ್ಲುಶಿಕ್ಷೆಯಾದರೆ, ಬಾಲಕನನ್ನು 3 ವರ್ಷ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು. ಇದು ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇಂಥ ಘೋರ ಅಪರಾಧವೆಸಗುವ ಹದಿವಯಸ್ಕರನ್ನೂ ವಯಸ್ಕರಂತೆ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂಬ ಕೂಗು ಕೇಳಿಬಂದಿತ್ತು.

ಹೊಸ ಕಾನೂನಿನಿಂದಾಗಿ ಮಕ್ಕಳ ಹಕ್ಕುಗಳ ದುರ್ಬಳಕೆ ಹಾಗೂ ಉಲ್ಲಂಘನೆಯಾಗುವ ಸಾಧ್ಯತೆಯಿದೆ ಎಂದ ಪ್ರತಿಪಕ್ಷಗಳ ಆರೋಪ ಮಾಡಿವೆ. ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ, ಸಂತ್ರಸ್ತರಿಗೆ ನ್ಯಾಯ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ನಡುವೆ ಸಮತೋಲನ ಕಾಪಾಡಿಕೊಳ್ಳಲು ಇಂಥ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

English summary
A bill providing for trial of juveniles aged between 16 and 18 for heinous crimes under laws governing adults was passed by the Lok Sabha Thursday. Over 40 amendments moved by the government were adopted while those moved by opposition MPs were kept out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X