ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಹ್-ಲಡಾಖ್‌ನಲ್ಲಿ ನಡುಗಿದ ಭೂಮಿ: 5.4 ತೀವ್ರತೆಯ ಭೂಕಂಪ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನ ಭೂಮಿ ನಡುಗಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಮಧ್ಯಾಹ್ನ 4.27ರ ಸುಮಾರಿಗೆ ಭೂಕಂಪನ ಉಂಟಾಗಿದೆ. ಲೇಹ್‌ನಿಂದ 129 ಕಿ.ಮೀ. ದೂರದಲ್ಲಿರುವ ಈಶಾನ್ಯಭಾಗದ ಸ್ಥಳದಲ್ಲಿ ಭೂಕಂಪನದ ಕೇಂದ್ರಬಿಂದು ಇದ್ದು, ಹತ್ತು ಕಿ.ಮೀ. ಆಳದಿಂದ ಭೂಮಿ ನಡುಗಿದೆ ಎಂದು ಅದು ತಿಳಿಸಿದೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಲಘು ಭೂಕಂಪನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಲಘು ಭೂಕಂಪನ

ಭೂಮಿ ಕಂಪಿಸಿದ್ದರಿಂದ ಅನೇಕ ಮನೆಗಳು, ಕಟ್ಟಡಗಳಲ್ಲಿ ಬಿರುಕುಗಳು ಉಂಟಾಗಿವೆ ಎಂದು ಲೇಹ್‌ನ ಸ್ಥಳೀಯರು ತಿಳಿಸಿದ್ದಾರೆ. ಭೂಮಿ ನಡುಗಿದ ಅನುಭವವಾದ ಕೂಡಲೇ ಅವರು ಕಟ್ಟಡಗಳಿಂದ ಹೊರಗೆ ಓಡಿದ್ದಾರೆ. ಆದರೆ ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಈ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಸಂಭವಿಸಿರುವ ಎರಡನೆಯ ಭೂಕಂಪ ಇದಾಗಿದೆ. ಬುಧವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 3.6 ತೀವ್ರತೆಯ ಭೂಕಂಪ ಉಂಟಾಗಿತ್ತು.

A Magnitude 5.4 Earthquake Hit Leh-Ladakh Region

ಇದೇ ಸಾಲಿನಲ್ಲಿರುವ ಪಾಕಿಸ್ತಾನದ ರಾಜಧಾನ ಇಸ್ಲಾಮಾಬಾದ್‌ನಲ್ಲಿ ಗುರುವಾರ ಲಘು ಭೂಕಂಪ ಉಂಟಾಗಿತ್ತು. ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿತ್ತು.

English summary
Leh- Ladakh region has witnessed a magnitude 5.4 earthquake on Friday afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X