• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಕರ್ತನಿಗೂ ಅಂಟಿಕೊಂಡಿತು ಕೊರೊನಾ ಸೋಂಕು

|

ಶಿಮ್ಲಾ, ಏಪ್ರಿಲ್ 15: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಪೊಲೀಸರಿಗೂ ಸೋಂಕು ಕಾಣಿಸಿಕೊಂಡಿರುವ ಸುದ್ದಿಗಳು ವರದಿಯಾಗಿತ್ತು. ಇದೀಗ, ಪತ್ರಕರ್ತರಲ್ಲಿಯೂ ಕೊವಿಡ್ ಸೋಂಕು ಪತ್ತೆಯಾಗುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ಮುದ್ರಣ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರೊಬ್ಬರಿಗೆ ಸೋಂಕು ತಗುಲಿದ್ದು, ಕ್ವಾರೆಂಟೈನ್‌ಗೆ ಒಳಪಟ್ಟಿದ್ದಾರೆ.

ಕೊರೊನಾಗೆ ಲಸಿಕೆ: ಮನುಷ್ಯರ ಮೇಲೆಯೇ ವೈದ್ಯಕೀಯ ಪ್ರಯೋಗ!ಕೊರೊನಾಗೆ ಲಸಿಕೆ: ಮನುಷ್ಯರ ಮೇಲೆಯೇ ವೈದ್ಯಕೀಯ ಪ್ರಯೋಗ!

ಇದಕ್ಕೂ ಮುಂಚೆ ಮುಂಬೈನಲ್ಲಿ ಮೂವರು ಪತ್ರಕರ್ತರಿಗೆ ಕೊರೊನಾ ಸೋಂಕು ದಢೃವಾಗಿತ್ತು. ಬಾಂದ್ರಾದ ಹೋಟೆಲ್‌ವೊಂದರಲ್ಲಿ ಉಳಿದು, ಅಲ್ಲಿಂದ ಇತರೆ ಕೆಲಸಗಳಿಗೆ ಹೋಗುತ್ತಿದ್ದರು. ಈ ವೇಳೆ ಮತ್ತಷ್ಟು ಪತ್ರಕರ್ತರು ಇವರ ಸಂಪರ್ಕದಲ್ಲಿದ್ದರು. ಹಾಗಾಗಿ, ಅವರ ಸ್ನೇಹಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಂಬೈ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರವಲ್ಲ, ಇತರೆ ರಾಜ್ಯಗಳಲ್ಲಿಯೂ ಪತ್ರಕರ್ತರಿಗೆ ಸೋಂಕು ತಗುಲಿದೆ ಎಂದು ಸುದ್ದಿಗಳು ವರದಿಯಾಗಿದೆ.

ದೇಶದ 170 ಜಿಲ್ಲೆಗಳು ಕೊರೊನಾ ಸೋಂಕಿನ ಹಾಟ್‌ಸ್ಪಾಟ್ದೇಶದ 170 ಜಿಲ್ಲೆಗಳು ಕೊರೊನಾ ಸೋಂಕಿನ ಹಾಟ್‌ಸ್ಪಾಟ್

ಇನ್ನು ಹಿಮಾಚಲ ಪ್ರದೇಶದಲ್ಲಿ ಇದುವರೆಗೂ 33 ಕೊರೊನಾ ಕೇಸ್ ಖಚಿತವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಅದರಲ್ಲಿ 13 ಜನರು ಚೇತರಿಸಿಕೊಂಡಿದ್ದಾರೆ. 18 ಜನರು ಐಸೋಲೇಶನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
A journalist with a newspaper has been tested positive for COVID19 in Kangra, Himachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X