ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಹಫೀಜ್ ಬಿಡುಗಡೆ : ಕಾಶ್ಮೀರದಲ್ಲಿ ಹೈ ಅಲರ್ಟ್

By Manjunatha
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ನವೆಂಬರ್ 24 : ಗೃಹಬಂಧನದಲ್ಲಿದ್ದ ಲಷ್ಕರ್-ಎ-ತೊಯೆಬಾ ಮತ್ತು ನಿಷೇಧಿತ ಜಮಾತ್ ಉದ್ ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಬಿಡುಗಡೆ ಆಗುತ್ತಿದ್ದಂತೆಯೇ ಇತ್ತ ಜಮ್ಮು ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಗೃಹ ಬಂಧನದಿಂದ ಮುಕ್ತಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಗೃಹ ಬಂಧನದಿಂದ ಮುಕ್ತ

ಮುಂಬೈ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಸಯೀದ್ ಬಿಡುಗಡೆ ಆಗಿರುವುದು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಸ್ಪೂರ್ಥಿ ತುಂಬವ ಅಪಾಯ ಇದ್ದು, ಪ್ರತ್ಯೇಕವಾದಿಗಳ ಹುಮ್ಮಸ್ಸು ಹೆಚ್ಚಿ ಗಲಭೆಗೆ ಕಾರಣವಾಗಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಉಗ್ರ ಹಫೀಸ್ ಬಹಿಷ್ಕಾರಕ್ಕೆ ಮುಸ್ಲಿಂ ಧರ್ಮಗುರುಗಳಿಂದಲೇ ಒತ್ತಾಯಉಗ್ರ ಹಫೀಸ್ ಬಹಿಷ್ಕಾರಕ್ಕೆ ಮುಸ್ಲಿಂ ಧರ್ಮಗುರುಗಳಿಂದಲೇ ಒತ್ತಾಯ

A High alert has been declared in J&K following relaease of Haffiz Saeed

ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಹಫೀಜ್ ಬಿಡುಗಡೆ ಆಗಿರುವುದರಿಂದ ಪಾಖಿಸ್ತಾನದ ಐಎಸ್‌ಐ ಚಳಿಗಾಲದ ಒಳಗೆ ಮತ್ತಷ್ಟು ಉಗ್ರರರನ್ನು ಭಾರತದ ಒಳಕ್ಕೆ ನುಗ್ಗಿಸುವ ಪ್ರಯತ್ನವನ್ನೂ ಮಾಡಲಿದೆ ಎಂದು ಹೇಳಿದೆ. ಗುಪ್ತಚರ ಮಾಹಿತಿ ಇಂದ ಅಲರ್ಟ್ ಆಗಿರುವ ಭಾರತೀಯ ಸೈನ್ಯೆ, ಗಡಿಯಲ್ಲಿ ಹೆಚ್ಚಿನ ಕಾವಲು ಪಡೆಯನ್ನು ನಿಯೋಜಿಸಿದೆ.

ಹಫೀಜ್ ಬಿಡುಗಡೆ ಆಗುತ್ತಿದ್ದಂತೆಯೇ ಕಾಶ್ಮೀರ ವಿಮೋಚನೆಗಾಗಿ ಹೋರಾಡುತ್ತೇನೆ ಎಂದು ಹೇಳಿರುವುದು ಗುಪ್ತಚರ ಮಾಹಿತಿಗೆ ಪುಷ್ಟಿ ನೀಡಿದೆ. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ತನ್ನ ಅನುಯಾಯಿಗಳನ್ನು ಉದ್ದೇಶಿಸಿದ ಹಫೀಜ್ ಸಯಿದ್ ಕೇವಲ 10 ತಿಂಗಳು ಮಾತ್ರ ನನ್ನ ಧ್ವನಿಯನ್ನು ಅದುಮಿಡಲು ಸರ್ಕಾರಕ್ಕೆ ಸಾಧ್ಯವಾಯಿತು. ಇನ್ನು ಮುಂದೆ ಕಾಶ್ಮೀರ ವಿಮೋಚನೆಗಾಗಿ ಹೋರಾಡುತ್ತೇನೆ ಎಂದಿದ್ದಾನೆ.

ಉಗ್ರ ಹಫೀಜ್ ಸಯೀದ್ ಬಿಡುಗಡೆಯನ್ನು ಭಾರತ ತೀರ್ವವಾಗಿ ವಿರೋದಿಸಿದ್ದು, ವಿಶ್ವಸಂಸ್ಥೆಯೇ ಆತನನ್ನು ಭಯೋತ್ಪಾದಕ ಎಂದು ಗುರುತಿಸದ ಮೇಲೂ ಆತನಿಗೆ ಶಿಕ್ಷೆ ನೀಡದೆ ಬಿಡುಗಡೆ ಆಗುವಂತೆ 'ನೋಡಿಕೊಂಡಿರುವ' ಪಾಕಿಸ್ತಾನಕ್ಕೆ ಭಾರತ ವಿದೇಶಾಂಗ ಇಲಾಖೆ ಛೀಮಾರಿ ಹಾಕಿದೆ. ಅಮೆರಿಕ ಸರ್ಕಾರವು ಹಫೀಜ್ ತೆಲೆಗೆ 10 ಮಿಲಿಯನ್ ಡಾಲರ್ ಬೆಲೆ ಕಟ್ಟಿದೆ.

ಪಾಕಿಸ್ತಾನದ ಈ ನಡೆಯನನ್ನು "ಉಗ್ರರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ' ಎಂದು ಭಾರತ ಕಟುವಾಗಿ ಟೀಕಿಸಿದೆ. 'ಈ ಘಟನೆಯಿಂದ ಪಾಕಿಸ್ತಾನದ ನಿಜ ಬಣ್ಣ ಏನು ಎಂಬುದು ಇಡೀಯ ಜಗತ್ತಿದೆ ಗೊತ್ತಾಗುತ್ತಿದೆ' ಎಂದು ಭಾರತದ ವಿದೇಶಾಂಗ ವಕ್ತಾರ ರವೀಶ್ ಕುಮಾರ್‌ ಹೇಳಿದ್ದಾರೆ.

English summary
Mumbai attack mastermind and banned JuD chief Hafiz Saeed walked free from house arrest and said he would gather people across Pakistan for the "cause of Kashmir" and try to help Kashmiris get their "destination of freedom". A High alert has been declared in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X