ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ರಾಜ್‌ಕುಮಾರ್‌, ಇಂದಿರಾ ಗಾಂಧಿ ಜೊತೆ ಮೋದಿ! ಇದು ಸತ್ಯವೇ?

|
Google Oneindia Kannada News

ನವದೆಹಲಿ, ಮೇ 14: ರಾ.ರಾಜ್‌ಕುಮಾರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಪಾರ್ವತಮ್ಮ ರಾಜ್ ಕುಮಾರ್ ಅವರ ಜೊತೆಯಲ್ಲಿ ನರೇಂದ್ರ ಮೋದಿ ಅವರು ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಣಕ್ಕಾಗಿ ಬೆದರಿಕೆ, ಸುಳ್ಳು ಸುದ್ದಿ: ವರ್ಷದಲ್ಲಿ ರಾಜ್ಯದ 16 ಪತ್ರಕರ್ತರ ಬಂಧನಹಣಕ್ಕಾಗಿ ಬೆದರಿಕೆ, ಸುಳ್ಳು ಸುದ್ದಿ: ವರ್ಷದಲ್ಲಿ ರಾಜ್ಯದ 16 ಪತ್ರಕರ್ತರ ಬಂಧನ

ಹೌದು, ನಿಜ ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಜನರ ಜೊತೆ ಹಿಂದೆ ನರೇಂದ್ರ ಮೋದಿ ಅವರು ಇಣುಕಿ ಇಂದಿರಾ ಗಾಂಧಿ ಅವರನ್ನು ನೋಡುತ್ತಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ ಈ ಚಿತ್ರ ನಕಲಿ ಆಗಿದೆ.

A Fake photo of Narendra Modi with Indira Gandhi is serculating in social media

ಸಂಗೀತ ಮ್ಯೂಸಿಕ್‌ನ ಕಾರ್ಯಕ್ರಮವೊಂದರಲ್ಲಿ ರಾಜ್ ಕುಮಾರ್ ಅವರನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ಆಗಿದ್ದರು, ಆಗ ಈ ಚಿತ್ರವನ್ನು ತೆಗೆಯಲಾಗಿತ್ತು, ಇದರಲ್ಲಿ ನರೇಂದ್ರ ಮೋದಿ ಇಲ್ಲ ಆದರೆ ಯಾರೋ ಕಿಡಿಗೇಡಿಗಳು ಚಿತ್ರದಲ್ಲಿ ಇರುವ ಬೇರೆಯೊಬ್ಬರಿಗೆ ನರೇಂದ್ರ ಮೋದಿ ಅವರ ಹಳೆಯ ಚಿತ್ರದ ತಲೆ ಅಂಟಿಸಿ ವೈರಲ್ ಮಾಡಿದ್ದಾರೆ.

ನಿಜವಾದ ಜೀವಂತಿಕೆಯ ಚಿತ್ರಗಳಿಗೆ ಸ್ವಾರಸ್ಯಕರ ಸುಳ್ಳು ಕಥೆಗಳು ನಿಜವಾದ ಜೀವಂತಿಕೆಯ ಚಿತ್ರಗಳಿಗೆ ಸ್ವಾರಸ್ಯಕರ ಸುಳ್ಳು ಕಥೆಗಳು

ಈ ಚಿತ್ರವನ್ನು ಹಂಚಿಕೊಂಡಿರುವ ಹಲವರು, ಮೋದಿ ಸಹ ಒಮ್ಮೆ ಕಾಂಗ್ರೆಸ್‌ ಪಕ್ಷದ ಸದಸ್ಯರೇ ಆಗಿದ್ದರು, ಭಕ್ತರೇ ಇದಕ್ಕೇನು ಹೇಳುತ್ತೀರಿ ಎಂದು ವ್ಯಂಗ್ಯ ಮಾಡಿದ್ದಾರೆ. ಆದರೆ ಇದು ನಕಲಿ ಚಿತ್ರವಾಗಿದ್ದು, ನಿಜವಾದ ಚಿತ್ರದಲ್ಲಿ ಮೋದಿ ಅವರು ಇಲ್ಲ. ಬದಲಿಗೆ ಬೇರೆಯಾರದ್ದೋ ಚಿತ್ರಕ್ಕೆ ಮೋದಿ ಅವರ ಹಳೆಯ ಚಿತ್ರವನ್ನು ಅಂಟಿಸಲಾಗಿದೆ.

A Fake photo of Narendra Modi with Indira Gandhi is serculating in social media

ಇತ್ತೀಚೆಗೆ ಈ ರೀತಿಯ ನಕಲಿ ಚಿತ್ರಗಳ ಹಾವಳಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿದೆ. ಪ್ರಿಯಾಂಕಾ ಗಾಂಧಿ ಶಿಲುಬೆ ಧರಿಸಿದ್ದಾರೆ ಎಂಬ ಸುಳ್ಳು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಯೋಗಿ ಆದಿತ್ಯನಾಥ ಅವರು ಹಸುವಿನ ಮೂತ್ರಿ ಕುಡಿಯುತ್ತಿರುವ ನಕಲಿ ಚಿತ್ರವೂ ಭಾರಿ ಸದ್ದು ಮಾಡಿತ್ತು.

English summary
A fake photo getting viral in social media, in which Narendra Modi is with Dr Rajkumar, Indira Gandhi, Parvathamma Rajkumar. It is a fake photo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X