ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಮಹಾಯುದ್ಧಕ್ಕೆ ಎದುರು ನೋಡುತ್ತಿದ್ದೀವಾ..?!

ವಿಶ್ವ ಜಲದಿನ ಆಚರಿಸುತ್ತಿರುವ ಈ ಸಮಯದಲ್ಲಿ ಮೂರನೇ ಮಹಾಯುದ್ಧವಾದರೆ ಅದು ನೀರಿಗಾಗಿ ಎಂಬ ಹಿರಿಯರೊಬ್ಬರ ಮಾತನ್ನು ನೆನಪಿಸಿಕೊಳ್ಳುವುದು ಸೂಕ್ತ! ಪ್ರತಿ ಹನಿಯೂ ಅತ್ಯಮೂಲ್ಯ. ನೀರನ್ನು ಪೋಲು ಮಾಡಬೇಡಿ.

|
Google Oneindia Kannada News

ಮೂರನೇ ಮಹಾಯುದ್ಧವಾದರೆ ಅದು ನೀರಿಗಾಗಿಯೇ ಎಂದು ಹಿರಿಯರೊಬ್ಬರು ಹೇಳಿದ ಮಾತು ನಿಜವಾಗುತ್ತಾ? ಜಗತ್ತು ನೀರಿನ ಅಭಾವವನ್ನು ಎದುರಿಸುತ್ತಿರುವ ರೀತಿಯನ್ನು ನೋಡಿದರೆ ಅವರ ಮಾತು ನಿಜವಾಗುವುದಕ್ಕೆ ಹೆಚ್ಚು ದಿನ ಬೇಕಿಲ್ಲ ಎನ್ನಿಸುತ್ತಿದೆ.

ಮಾರ್ಚ್ 22 ವಿಶ್ವ ಜಲ ದಿನದಂದು ಪ್ರಧಾನಿ ಮೋದಿಯಾದಿಯಾಗಿ ಹಲವರು ನೀರನ್ನು ಉಳಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಜಲ ಸಂರಕ್ಷಣೆಯ ಯಜ್ಞ ಪ್ರತಿಯೊಬ್ಬರ ತಪಸ್ಸಾಗದೇ ಇದ್ದಲ್ಲಿ ಮುಂದಿನ ತಲೆಮಾರಿನ ಭವಿಷ್ಯವೇ ಚಿಂತಾಜನಕವಾಗುವುದರಲ್ಲಿ ಯಾವ ಅನುಮಾನವೇ ಇಲ್ಲ.

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನದಲ್ಲಿನ ಏರಿಕೆಯಿಂದಾಗಿ ಫೆಬ್ರವರಿ ಅಂತ್ಯದ ಹೊತ್ತಲ್ಲೇ ಭಾರತದ ಬಹುಪಾಲು ರಾಜ್ಯಗಳಿಗೆ ನೀರಿನ ಅಭಾವದ ಬಿಸಿ ತಟ್ಟಿದೆ. ಕರ್ನಾಟಕವಂತೂ ಈ ಬಾರಿ ಕಂಡರಿಯದ ಬರಗಾಲವನ್ನು ಎದುರಿಸುತ್ತಿದೆ. ಮುಂದೇನಪ್ಪಾ ಎಂಬಂತಹ ಪರಿಸ್ಥಿತಿ ನಮ್ಮ ಕಣ್ಣ ಮುಂದಿದೆ.

ಖ್ಯಾತ ಮರಳು ಕಲಾವಿದ ಸುದರ್ಶನ ಪಟ್ನಾಯಕ್ ರಚಿಸಿದ ಈ ಮರಳು ಶಿಲ್ಪ ನಾವಿಲ್ಲಿ ಪೋಲು ಮಾಡುವ ಒಂದೇ ಒಂದು ಹನಿ ನೀರು, ಇನ್ಯಾರಿಗೋ ಜೀವಜಲವಾಗಿರಬಹುದು ಎಂಬುದನ್ನು ನೆನಪಿಸುವುದು ನಿಜ.[ದೇಶದ 6.3 ಕೋಟಿ ಜನ ಇನ್ನೂ ಶುದ್ಧ ನೀರು ಕಂಡಿಲ್ಲ, ಕುಡಿದಿಲ್ಲ!]

ಪ್ರಧಾನಿ ಕಾಳಜಿ

ಜನಶಕ್ತಿ ಮನಸ್ಸು ಮಾಡಿದರೆ ಜಲಶಕ್ತಿಯನ್ನು ಉಳಿಸುವುದು ದೊಡ್ಡವಿಷಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಲ್ಲದೆ, ಪ್ರತಿ ಹನಿ ನೀರನ್ನೂ ಉಳಿಸುವ ಶಪಥ ಮಾಡೋಣ ಎಂದಿದ್ದಾರೆ.

ಸಾಲು ಕ್ಯಾನಿನ ನಡುವೆ ನೀರಿನ ನಿರೀಕ್ಷೆ

ಸಾಲು ಕ್ಯಾನಿನ ನಡುವೆ ನೀರಿನ ನಿರೀಕ್ಷೆ

ಜಗತ್ತಿನಲ್ಲಿರುವ ಒಟ್ಟು ನೀರಿನ ಲಭ್ಯತೆಯಲ್ಲಿ ಭಾರತಕ್ಕೆ ದಕ್ಕುವುದು ಶೇ.4 ಮಾತ್ರ. ಆದರೆ ಪ್ರಪಂಚದ ಜನಸಂಖ್ಯೆಯಲ್ಲಿ ಶೇ.16 ರಷ್ಟು ಜನ ಭಾರತದಲ್ಲೇ ಇದ್ದಾರೆ. ಅಂದರೆ ಬೇಡಿಕೆಯ ಪ್ರಮಾಣ ಹೆಚ್ಚಾಗಿ, ಪೂರೈಕೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಕೊರತೆ ಸಹಜವಾಗಿಯೇ ಸೃಷ್ಟಿಯಾಗಿದೆ. ಭೂಪಾಲ್ ನಲ್ಲಿ ಕಂಡು ಬಂದ ಖಾಲಿ ಕ್ಯಾನ್ ಗಳ ಈ ದೃಶ್ಯ ಭಾರತದ ನೀರಿನ ಕೊರತೆಗೆ ಕನ್ನಡಿ ಹಿಡಿದಂತಿದೆ.[ಉಡುಪಿಯಲ್ಲೂ ನೀರಿಗೆ ಬರ..! ನಾಳೆಯಿಂದ ಎರಡು ದಿನಕ್ಕೊಮ್ಮೆ ನೀರು]

ನೀರಲ್ಲ ಇದು ನಿಧಿ!

ನೀರಲ್ಲ ಇದು ನಿಧಿ!

ಪ್ರತಿ ವರ್ಷ ಭಾರತದಲ್ಲಿ 6 ಲಕ್ಷ ಮಕ್ಕಳು ಶುದ್ಧವಲ್ಲದ ನೀರಿನಿಂದ ಬಂದ ರೋಗದಿಂದಾಗಿ ಸಾಯುತ್ತಿದ್ದಾರೆ. ಪ್ರತಿ ನಿಮಿಷಕ್ಕೊಂದು ನವಜಾತ ಶಿಶು ಅಶುದ್ಧ ನೀರು ಮತ್ತು ಸ್ವಚ್ಛವಲ್ಲದ ಪರಿಸರದಿಂದಾಗಿ ಸಾಯುತ್ತಿದೆ. ಅಷ್ಟೇ ಅಲ್ಲ, ಜಗತ್ತಿನಲ್ಲಿರುವ ಅರ್ಧದಷ್ಟು ಆಸ್ಪತ್ರೆಗಳಲ್ಲಿರುವ ರೋಗಿಗಳು ಅಶುದ್ಧ ನೀರಿನಿಂದ ಉಂಟಾದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದವರಾಗಿದ್ದಾರೆ! ಹನಿ ನೀರು ಸಿಕ್ಕರೆ ಸಾಕು, ಅದೇ ನಿಧಿ ಎಂಬಷ್ಟು ಸಂತಸ ಪಡುವವರಿದ್ದಾರೆ. ಭುವನೇಶ್ವರದ ಈ ಮಗುವೂ ನೀರನ್ನು ಕಂಡು ನಿಧಿ ಸಿಕ್ಕಷ್ಟೇ ಸಂಭ್ರಮಿಸುತ್ತಿದೆ.[ತುಂಬೆ ಡ್ಯಾಂನಲ್ಲಿ ನೀರು ಇಳಿಕೆ: ಕರಾವಳಿಯಲ್ಲೂ ಜಲಕ್ಷಾಮ..?]

ನೀರಿಗಾಗಿ ಮೈಲಿಗಟ್ಟಲೆ ನಡಿಗೆ!

ನೀರಿಗಾಗಿ ಮೈಲಿಗಟ್ಟಲೆ ನಡಿಗೆ!

ಜಗತ್ತಿನ ಜನಸಂಖ್ಯೆಯಲ್ಲಿ 633 ಮಿಲಿಯನ್ ಗೂ ಹೆಚ್ಚು ಜನರು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ. ಅಂದರೆ 10 ರಲ್ಲಿ ಒಬ್ಬ ಮನುಷ್ಯನಿಗೆ ನೀರಿನ ಲಭ್ಯತೆ ಇಲ್ಲ. ಜಮ್ಮು ಕಾಶ್ಮೀರದ ಈ ಮಹಿಳೆಯರು ಶುದ್ಧ ನೀರಿಗಾಗಿ ದಿನವೂ ಮೈಲಿಗಟ್ಟಲೆ ನಡೆಯುವುದು ನೀರಿನ ಅಭಾವದ ಕುರಿತು ಪ್ರತಿಯೊಬ್ಬರೂ ಗಂಭೀರವಾಗಿ ಯೋಚಿಸಲೇಬೇಕಾದ ಅಗತ್ಯವನ್ನು ಸಾರಿಹೇಳಿದೆ.[ಮೂಡಬಿದಿರೆಯಲ್ಲಿ ಕುಸಿಯುತ್ತಿರುವ ಅಂತರ್ಜಲ, ಬೇಸಿಗೆ ಭೀಕರ]

ಮಲೆನಾಡಲ್ಲೂ ನೀರಿಲ್ಲ!

ಮಲೆನಾಡಲ್ಲೂ ನೀರಿಲ್ಲ!

ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ನೀರಿಗಾಗಿ ನೀರೆಯರು ಮೈಲಿಗಟ್ಟಲೆ ನಡೆದು ಹೋಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಬಯಲು ಸೀಮೆ ಭಾಗಗಳಲ್ಲೇನೋ ಇದು ಮಾಮೂಲು. ಆದರೆ ಕರ್ನಾಟಕದ ಮಲೆನಾಡು ಭಾಗವಾದ ಚಿಕ್ಕಮಗಳೂರಿನಲ್ಲೂ ಈ ಮಕ್ಕಳು ಕುಡಿಯುವ ನೀರಿಗಾಗಿ ಮೈಯಲಿಗಟ್ಟೆಲೆ ನಡೆದು ಹೋಗುತ್ತಿರುವುದು ಭವಿಷ್ಯದ ಕುರಿತು ಆತಂಕ ಮೂಡಿಸಿರುವುದು ಸತ್ಯ.[ಜಲ ಸಂರಕ್ಷಣೆಗಾಗಿ ರಾಮನಗರದಲ್ಲಿ ಮ್ಯಾರಥಾನ್]

English summary
A drop of water can save a life. Today whole world is celebrating world water day. A few things to know about water is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X