ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ದೇವರನ್ನೇ ಮೆಚ್ಚಿಸಿದ ಬಾಲಕ: ಕನಸಿಗೆ ಅಡ್ಡಿ ಆಗದು ವೈಕಲ್ಯ

|
Google Oneindia Kannada News

ರಾಯಪುರ್, ಜನವರಿ.03: ಸಾಧನೆಯ ಕನಸಿಗೆ ಏಣಿ ಬೇಕಿಲ್ಲ. ಕಣ್ಣಿನ ಎದುರಿಗೆ ಗುರಿಯಿದ್ದಲ್ಲಿ ಸೋಲುವ ಮಾತಿಲ್ಲ. ಅಡೆತಡೆಗಳೆಲ್ಲ ಲೆಕ್ಕಕ್ಕೆ ಬರುವುದಿಲ್ಲ ಎಂಬ ಮಾತಿಗೆ 7ನೇ ತರಗತಿ ಓದುತ್ತಿರುವ ಈ ಪುಟ್ಟ ಬಾಲಕನೇ ಜೀವಂತ ಉದಾಹರಣೆ.

ಛತ್ತೀಸಗಢ್ ದ ದಾಂತೇವಾಡ ಜಿಲ್ಲೆಯ ಮದ್ದಾರಾಮ್ ಕವಾಸಿ, ಕ್ರಿಕೆಟರ್ ಆಗುವ ಕನಸು ಕಟ್ಟಿಕೊಂಡಿದ್ದಾನೆ. 7ನೇ ತರಗತಿ ಓದುತ್ತಿರುವ ಬಾಲಕ ದಿವ್ಯಾಂಗ ಚೇತನನಾಗಿದ್ದರೂ ಕೂಡಾ ತನ್ನ ಕನಸಿನತ್ತ ಹೆಜ್ಜೆ ಹಾಕುತ್ತಿದ್ದಾನೆ.

ಮಗನ ಕನಸಿಗೆ ಹೆಗಲುಕೊಟ್ಟ ಈ ಅಮ್ಮನ ಕಥೆ ಕಟುಕನಿಗೂ ಕಣ್ಣೀರು ತರುತ್ತದೆಮಗನ ಕನಸಿಗೆ ಹೆಗಲುಕೊಟ್ಟ ಈ ಅಮ್ಮನ ಕಥೆ ಕಟುಕನಿಗೂ ಕಣ್ಣೀರು ತರುತ್ತದೆ

ಕಳೆದ ಎರಡು ವರ್ಷಗಳಿಂದಲೂ ತನಗಿರುವ ವೈಕಲ್ಯವನ್ನು ಲೆಕ್ಕಿಸದೇ ಕಠಿಣ ಅಭ್ಯಾಸದಿಂದ ಸ್ನೇಹಿತರೊಂದಿಗೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾನೆ. ಸಾಮಾನ್ಯರಂತೆ ಬ್ಯಾಟ್ ಹಿಡಿದು ಮೈದಾನದಲ್ಲಿ ಅಬ್ಬರಿಸುವ ಬಾಲಕ, ಎಲ್ಲರಂತೆ ರನ್ ಮಾಡುತ್ತಾನೆ. ಈ ಬಾಲಕ ಕ್ರಿಕೆಟ್ ಆಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

A Differently Abled Student Playing Cricket. The Video Goes Viral

ಕ್ರಿಕೆಟ್ ದೇವರನ್ನೇ ಮೆಚ್ಚಿಸಿದ ಪುಟ್ಟ ಬಾಲಕ:

ಸ್ವತಃ ಕ್ರಿಕೆಟ್ ದೇವರು ಎನಿಸಿರುವ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮದ್ದಾರಾಮ್ ಕ್ರಿಕೆಟ್ ಆಡುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ಬಾಲಕನ ದಿಟ್ಟತನವೇ ನಮ್ಮ ಪಾಲಿಗೆ ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಕ ಮದ್ದಾರಾಮ್, ತಮ್ಮ ತಂದೆ ದೋಮಾರಾಮ್ ಕವಾಸಿ ಒಬ್ಬ ರೈತರಾಗಿದ್ದಾರೆ. ಬಡತನದ ನಡುವೆಯೂ ತಮ್ಮಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಹೇಳಿದನು. ಜೊತೆಗೆ ಕಳೆದ ಎರಡು ವರ್ಷಗಳಿಂದ ಸ್ನೇಹಿತರೊಟ್ಟಿಗೆ ಕ್ರಿಕೆಟ್ ಆಟವಾಡುತ್ತಿದ್ದೇನೆ. ಇತ್ತೀಚಿಗೆ ಸಚಿನ್ ತೆಂಡೂಲ್ಕರ್ ಅವರು ತಾವು ಕ್ರಿಕೆಟ್ ಆಡುತ್ತಿದ್ದ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾನೆ.

English summary
A Differently Abled Student Playing Cricket As Common Man. Cricketer Sachin Tendulkar Posted A Video Goes Viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X