ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral video: ದುರ್ಗಾ ಮೂರ್ತಿ ವಿಸರ್ಜನೆ ಮಾರ್ಗದಲ್ಲಿ ಜನರ ಮೇಲೆ ಹರಿದ ವಾಹನ

|
Google Oneindia Kannada News

ಛತ್ತೀಸ್‌ಗಢ ಅಕ್ಟೋಬರ್ 15: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ಪಥಲ್‌ಗಾಂವ್‌ನಲ್ಲಿ ದುರ್ಗಾ ಮೂರ್ತಿಯನ್ನು ವಿಸರ್ಜಿಸಲು ಹೊರಟಿದ್ದ ಜನರ ಮೇಲೆ ವೇಗವಾಗಿ ವಾಹನ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಘಟನೆಯಲ್ಲಿ ಗಾಯಗೊಂಡ 16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರಿಗೆ ಬೆನ್ನು ಮೂಳೆ ಮುರಿದಿವೆ ಎಂದು ಇತರ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ವೈದ್ಯಕೀಯ ಅಧಿಕಾರಿ ಜೇಮ್ಸ್ ಮಿಂಜ್ ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 1.30 ರಿಂದ 2 ಗಂಟೆಯ ನಡುವೆ ಈ ಘಟನೆ ನಡೆದಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಜನರು ದುರ್ಗಾ ಪಂಡಲರ ಮೂರ್ತಿಯನ್ನು ವಿಸರ್ಜಿಸಲು ನದಿಯ ಕಡೆಗೆ ಹೋಗುತ್ತಿದ್ದರು. ಈ ಮಧ್ಯೆ, ಹಿಂದೆ ವೇಗವಾಗಿ ಬಂದ ಕಾರು ಈ ಜನರ ಮೇಲೆ ಹರಿದಿದೆ. ಅದರ ನಂತರ ಕೆಲವರು ಕಾರನ್ನು ಸ್ವಲ್ಪ ದೂರದವರೆಗೂ ಹೋಗಿ ನಿಲ್ಲಿಸಿದ್ದಾರೆ. ಕೋಪಗೊಂಡ ಗುಂಪು ಕಾರು ಚಾಲಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದೆ. ಕಾರಿನಲ್ಲಿ ಗಾಂಜಾ ತುಂಬಿತ್ತೆಂದು ಜನರು ಆರೋಪಿಸಿದ್ದಾರೆ. ಸುಮಾರು 100 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಾಲಕ ಕಾರು ಚಾಲನೆ ಮಾಡಿದ್ದಾನೆ. ಘಟನೆಯ ನಂತರ, ಕೋಪಗೊಂಡ ಜನರು ಪಥಲ್‌ಗಾಂವ್‌ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದರು. ಜೊತೆಗೆ ಗುಮ್ಲಾ-ಕಟ್ನಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಮೃತ ದೇಹವನ್ನು ಇಟ್ಟುಕೊಂಡು ಪ್ರತಿಭಟಿಸಿದ್ದಾರೆ. ಜನರ ಮಧ್ಯೆ ನುಗ್ಗಿದ ವಾಹನದಲ್ಲಿ ಗಾಂಜಾ ತುಂಬಿದೆ ಎಂದು ಜನರು ಆರೋಪಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಈ ಬಗ್ಗೆ ಇನ್ನೂ ತನಿಖೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.

 A car torn down on people on their way to dismantle Durga idol: Viral Video

ಜಶ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಅಗರ್‌ವಾಲ್ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಜಶ್ಪುರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಬಂದ ಮಾಹಿತಿಯ ಪ್ರಕಾರ, ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು 21 ವರ್ಷದ ಬಬ್ಲು ವಿಶ್ವಕರ್ಮ ಮತ್ತು 26 ವರ್ಷದ ಶಿಶುಪಾಲ್ ಸಾಹು ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ನಿವಾಸಿಗಳಾದ ಇವರು ಛತ್ತೀಸ್‌ಗಢದ ಮೂಲಕ ಹಾದುಹೋಗುವಾಗ ಘಟನೆ ಸಂಭವಿಸಿದೆ.

ಘಟನೆಗೆ ಪ್ರತಿಕ್ರಿಯಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, "ಜಶ್‌ಪುರ ಘಟನೆ ಅತ್ಯಂತ ದುಃಖಕರ ಮತ್ತು ಹೃದಯವಿದ್ರಾವಕವಾಗಿದೆದ. ಘಟನೆಯ ಕಾರಣಿಕರ್ತರನ್ಯಾರನ್ನೂ ಬಿಡುವುದಿಲ್ಲ. ನ್ಯಾಯವನ್ನು ನೀಡಲಾಗುತ್ತದೆ " ಇದರಿಂದ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.

English summary
A speeding car mowed down people on their way to immerse a Durga idol in Pathalgaon. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X