• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

6 ವರ್ಷದಲ್ಲಿ 8 ರೈಲ್ವೇ ಸಚಿವರು: ನಷ್ಟವಲ್ಲದೆ ಇನ್ನೇನಾಗುತ್ತೆ?

|

ಬೆಂಗಳೂರು, ಫೆ.25: ರೈಲ್ವೆ ಸಚಿವಾಲಯ ಕೇಂದ್ರ ಸಂಪುಟದ ಆಯಕಟ್ಟಿನ ಕ್ಯಾಬಿನೆಟ್ ಖಾತೆಯಲ್ಲೊಂದು. ವಾರ್ಷಿಕ ಆಯವ್ಯಯ ಮಂಡನೆಯಂತೆ ರೈಲ್ವೆಗೂ ಪ್ರತ್ಯೇಕ ಬಜೆಟ್ ಮಂಡಣೆಯಾಗುವುದು ಈ ಇಲಾಖೆಗಿರುವ ಮಹತ್ವಕ್ಕೆ ಸಾಕ್ಷಿ.

ಭಾರತೀಯ ರೈಲ್ವೆಯ ಅಭಿವೃದ್ದಿ ಬಗ್ಗೆ ವಸ್ತುನಿಷ್ಟವಾಗಿ ಯಾವುದೇ ಪಕ್ಷ ಮುಂದಾಗಿದ್ದ ಉದಾಹರಣೆಗಳು ಕಮ್ಮಿ. ಎಲ್ಲಾ ಪಕ್ಷದವರಿಗೂ ರೈಲ್ವೆ ಬಜೆಟ್ ಅನ್ನೋದು ಮಧ್ಯಮ ಮತ್ತು ಕೆಳ ವರ್ಗದವರನ್ನು ಓಲೈಸುವ ವಾರ್ಷಿಕ ನಡಾವಳಿಯಂತಾಗಿರುವುದು ನಮ್ಮ ಮುಂದಿದೆ.

ಇಲಾಖೆ ತೀವ್ರ ನಷ್ಟದಲ್ಲಿದ್ದರೂ ಜನಪ್ರಿಯ ಘೋಷಣೆಯನ್ನು ಮಾಡುತ್ತಾ, ರೈಲ್ವೆ ಸಚಿವರು ಪ್ರತಿನಿಧಿಸುವ ರಾಜ್ಯಕ್ಕೆ ಹೆಚ್ಚಿನ ಮನ್ನಣೆ ಸಿಗುವ ಕೆಟ್ಟ ರಾಜಕೀಯ ಪದ್ದತಿಗೆ ಸ್ವಾತಂತ್ರ್ಯ ಬಂದು ಇಷ್ಟು ದಶಕಗಳಾದರೂ ಮುಕ್ತಿ ಸಿಗುತ್ತಿಲ್ಲ. [ರೈಲ್ವೆ ಬಜೆಟ್: 'ಪ್ರಭು' ದಯೆ ಕರ್ನಾಟಕಕ್ಕೆ ಸಿಗುವುದೇ?]

ಪ್ರಮುಖವಾಗಿ ಮಮತಾ ಬ್ಯಾನರ್ಜಿ ಸಚಿವೆಯಾಗಿದ್ದ ವೇಳೆಯಲ್ಲಿ ರೈಲ್ವೆ ಇಲಾಖೆ ತೀವ್ರ ಆರ್ಥಿಕ ನಷ್ಟ ಅನುಭವಿಸಲಾರಂಭಿಸಿತು. ಆದರೆ ಇಲಾಖೆಯ ಆರ್ಥಿಕ ಸುಧಾರಣೆಗೆ ಮುಂದಾಗದ ಮಮತಾ, ತನ್ನ ಬಜೆಟಿನಲ್ಲಿ ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಾ ಬಂದರು.

ಪಶ್ಚಿಮ ಬಂಗಾಳ ಚುನಾವಣೆಯ ಹೊಸ್ತಿಲಲ್ಲಿ, ಹೊಸ ಜನಪ್ರಿಯ ರೈಲುಗಳ ಘೋಷಣೆಗಳನ್ನು ಮಾಡಿ, ದರವನ್ನೂ ಏರಿಸಿದೆ ಇಲಾಖೆ ಮತ್ತಷ್ಟು ನಷ್ಟದತ್ತ ಸಾಗುವಲ್ಲಿ ಮಮತಾ ಪ್ರಮುಖ ಪಾತ್ರ ವಹಿಸಿದರು.

ಮಮತಾ, ಪಶ್ಚಿಮ ಬಂಗಾಳದ ಸಿಎಂ ಆದ ನಂತರ ಮತ್ತು ಕಾಂಗ್ರೆಸ್ಸಿನ ಪಿ ಕೆ ಬನ್ಸಾಲ್ ರೈಲ್ವೆ ಸಚಿವರಾದ ಗ್ಯಾಪ್ ನಲ್ಲಿ ರೈಲ್ವೆ ಇಲಾಖೆ ಹೆಚ್ಚುಕಮ್ಮಿ ಯಜಮಾನನಿಲ್ಲದ ಮನೆಯಂತಾಗಿತ್ತು. ಈ ಅವಧಿಯಲ್ಲಿ ರೈಲ್ವೆ ಇಲಾಖೆ ಕಪ್ಪು ಪಟ್ಟಿಗೂ ಸೇರ್ಪಡೆಯಾಯಿತು.

ರೈಲ್ವೆ ಇಲಾಖೆಯ ಗತವೈಭವನ್ನು ಮರಳಿ ತರುತ್ತೇನೆಂದು ಮೋದಿ ಚುನಾವಣೆಯ ಸಮಯದಲ್ಲಿ ವಾಗ್ದಾನ ಮಾಡಿದ್ದರು, ಏನು ಮಾಡುತ್ತಾರೋ ಮುಂದೆ ನೋಡೋಣ. ಫೆ.26 ರಂದು ಸುರೇಶ್ ಪ್ರಭು ಅವರು ರೈಲ್ವೆ ಬಜೆಟ್ ಮಂಡಿಸಲಿದ್ದಾರೆ .ಇನ್ನೇನು ಘೋಷಣೆಯಾಗುತ್ತೋ, ಕಾದು ನೋಡೋಣ. ಮೇ 2009 ರಿಂದ ಇದುವರೆಗಿನ ಆರು ವರ್ಷದ ಅವಧಿಯಲ್ಲಿ ಒಟ್ಟು ಎಂಟು ಸಚಿವರು ರೈಲ್ವೆ ಇಲಾಖೆಯ ರಾಜ್ಯಭಾರ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಅಧಿಕಾರದ ಅವಧಿ : 26.05.2009 to 19.05.2011

ಪಕ್ಷ: ತೃಣಮೂಲ ಕಾಂಗ್ರೆಸ್

ದಿನೇಶ್ ತ್ರಿವೇದಿ

ದಿನೇಶ್ ತ್ರಿವೇದಿ

ಅಧಿಕಾರದ ಅವಧಿ : 12.07.2011 to 14.03.2012

ಪಕ್ಷ: ತೃಣಮೂಲ ಕಾಂಗ್ರೆಸ್

ಮುಕುಲ್ ರಾಯ್

ಮುಕುಲ್ ರಾಯ್

ಅಧಿಕಾರದ ಅವಧಿ : 20.03.2012 to 21.09.2012

ಪಕ್ಷ: ತೃಣಮೂಲ ಕಾಂಗ್ರೆಸ್

ಸಿ ಪಿ ಜೋಷಿ

ಸಿ ಪಿ ಜೋಷಿ

ಅಧಿಕಾರದ ಅವಧಿ : 22.09.2012 to 28.10.2012

ಅಧಿಕಾರದ ಅವಧಿ : 11.05.2013 to 16.06.2013

ಪಕ್ಷ : ಕಾಂಗ್ರೆಸ್

ಪವನ್ ಕುಮಾರ್ ಬನ್ಸಾಲ್

ಪವನ್ ಕುಮಾರ್ ಬನ್ಸಾಲ್

ಅಧಿಕಾರದ ಅವಧಿ : 28.10.2012 to 10.05.2013

ಪಕ್ಷ : ಕಾಂಗ್ರೆಸ್

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

ಅಧಿಕಾರದ ಅವಧಿ :17.06.2013 to 25.05.2014

ಪಕ್ಷ : ಕಾಂಗ್ರೆಸ್

ಡಿ ವಿ ಸದಾನಂದ ಗೌಡ

ಡಿ ವಿ ಸದಾನಂದ ಗೌಡ

ಅಧಿಕಾರದ ಅವಧಿ : 26.05.2014 to 09.11.2014

ಪಕ್ಷ : ಬಿಜೆಪಿ

ಸುರೇಶ್ ಪ್ರಭು

ಸುರೇಶ್ ಪ್ರಭು

ಅಧಿಕಾರದ ಅವಧಿ : 10.11.2014 ರಿಂದ ಇಲ್ಲಿ ತನಕ

ಹಾಲಿ ಸಚಿವರು

ಪಕ್ಷ : ಬಿಜೆಪಿ

English summary
From Mamata Banerjee to Suresh Prabhu : Between 26-05-2009 to till date, the Railway Ministry of India has seen 8 Cabinet Ministers in a span of 6 years. A look at ministers, party`s and their tenure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X