ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಹಾವಿನ ಹೊಟ್ಟೆಯಲ್ಲಿದ್ದದ್ದೇನು? ವೈರಲ್ ವಿಡಿಯೋ

|
Google Oneindia Kannada News

ನವದೆಹಲಿ, ಜನವರಿ 10: ಹೊಟ್ಟೆಯನ್ನು ತುಂಬಿಸಿಕೊಂಡ ನಾಗರಹಾವು ತೆವಳಿ ಮುಂದೆ ಸಾಗಲು ಒದ್ದಾಡುತ್ತಿದೆ. ಭಾರಿ ಗಾತ್ರದ ಹೊಟ್ಟೆಯನ್ನು ನೋಡಿದಾಗ ಅದು ದೊಡ್ಡ ಪ್ರಾಣಿಯನ್ನು ನುಂಗಿದೆ ಎಂದೇ ಭಾಸವಾಗುತ್ತದೆ. ನುಂಗಿದ್ದನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲ ಎಂಬುದನ್ನು ಅರಿತ ಹಾವು ಹೆಣಗಾಡಿ ಅದನ್ನು ಹೊರಹಾಕುತ್ತದೆ.

48 ಸೆಕೆಂಡುಗಳ ಈ ವಿಡಿಯೋ ಆರಂಭದಲ್ಲಿ ಕುತೂಹಲ ಕೆರಳಿಸಿದರೂ ಕೊನೆಯಲ್ಲಿ ಮನಕಲಕುತ್ತದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರಾಣಿ ಪಕ್ಷಿಗಳ ಜೀವಕ್ಕೆ ಎರವಾಗುತ್ತಿದ್ದೇವೆ ಎಂಬ ಖೇದವೂ ಆಗುತ್ತದೆ. ಹಾಗೆಯೇ ಈ ವಿಚಾರದಲ್ಲಿ ಮನುಷ್ಯರು ಬದಲಿಸಿಕೊಳ್ಳಬೇಕಾದ ಮನಸ್ಥಿತಿಯನ್ನು ಕೂಡ ನೆನಪಿಸುತ್ತದೆ.

ಕೇರಳ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೆಕೇರಳ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೆ

ಎರಡು ಲೀಟರ್ ಗಾತ್ರದ ತಂಪು ಪಾನೀಯದ ಬಾಟಲಿಯನ್ನು ಆಹಾರವೆಂದು ನುಂಗಿದ್ದ ನಾಗರಹಾವಿನ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯಲ್ಲಿರುವ ಅಧಿಕಾರಿ ಪ್ರವೀಣ್ ಕಾಸ್ವಾನ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವುದು ಗೊತ್ತಾಗಿಲ್ಲ.

A Big Plastic Bottle In Cobras Stomach Disturbing Viral Video Of Snake

ಉರಗ ಸಂರಕ್ಷಕರೊಬ್ಬರು ಕೋಲಿನಿಂದ ಹಾವನ್ನು ಚಲನಶೀಲವಾಗಿ ಇರುವಂತೆ ಮಾಡುತ್ತಾರೆ. ನೋವಿನಿಂದ ನರಳಾಡುವ ಹಾವು ಪ್ರಯಾಸಪಟ್ಟು ದೊಡ್ಡ ನೀರಿನ ಬಾಟಲಿಯನ್ನು ಹೊರಗೆ ಕಕ್ಕುತ್ತದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ. ಸುಮಾರು 30 ಸಾವಿರ ಬಾರಿ ವೀಕ್ಷಣೆಗೆ ಒಳಗಾಗಿದೆ.

ಪ್ಲಾಸ್ಟಿಕ್‌ ನಿರ್ಮೂಲನೆಗೆ ಮೈಸೂರು ಮೃಗಾಲಯ ವಿನೂತನ ಉಪಾಯಪ್ಲಾಸ್ಟಿಕ್‌ ನಿರ್ಮೂಲನೆಗೆ ಮೈಸೂರು ಮೃಗಾಲಯ ವಿನೂತನ ಉಪಾಯ

'ಪ್ಲಾಸ್ಟಿಕ್ ವಿಚಾರಕ್ಕೆ ಬಂದಾಗ ಎಸೆಯುವಂತಹದ್ದು ಎನ್ನುವುದು ಯಾವುದೂ ಇಲ್ಲ. ಏಕಬಳಕೆಯ ಪ್ಲಾಸ್ಟಿಕ್ ಬಾಟಲಿಗಳು ಹೇಗೆ ವನ್ಯಜೀವಿಗಳು ಮತ್ತು ಇತರೆ ಪ್ರಬೇಧಗಳಿಗೆ ಹಾನಿ ಮಾಡುತ್ತಿವೆ ನೋಡಿ. ವಿಡಿಯೋ ನಿಮ್ಮ ಮನಸ್ಸನ್ನು ಘಾಸಿ ಮಾಡಬಹುದು' ಎಂದು ಪ್ರವೀಣ್ ಕಾಸ್ವಾನ್ ಹೇಳಿದ್ದಾರೆ.

ಈ ಹಸುವಿನ ಹೊಟ್ಟೆಯಲ್ಲಿದ್ದದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್!ಈ ಹಸುವಿನ ಹೊಟ್ಟೆಯಲ್ಲಿದ್ದದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್!

ಇದು ನಾಗರಹಾವು. ಅದಕ್ಕೆ ತಾನು ತಿಂದಿದ್ದನ್ನು ಹೊರಗೆ ಹಾಕುವ ಸಾಮರ್ಥ್ಯವಿದೆ. ಆದರೆ ಇತರೆ ಪ್ರಾಣಿಗಳಿಗೆ ಈ ಶಕ್ತಿ ಇಲ್ಲ. ಅವು ನೋವಿನಿಂದ ಸಾಯುತ್ತವೆ ಎಂದು ಅವರು ತಿಳಿಸಿದ್ದಾರೆ.

English summary
IFS officer Praveen Kaswan shared a disturbing video of cobra struggles regurgitate a plastic bottle wedged in its stomach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X