ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮೋಸ್ ಸೋರಿಕೆ : ಮಹಿಳೆ ಜತೆ ಗೆಳೆತನ, ವೇತನದ ಬಲೆಯಲ್ಲಿ ನಿಶಾಂತ್

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ದೇಶದ ಪ್ರಮುಖ ಅಸ್ತ್ರ ಬ್ರಹ್ಮೋಸ್ ಕ್ಷಿಪಣಿಯ ಮಾಹಿತಿಯನ್ನು ಸೋರಿಕೆ ಮಾಡಿ ಕೋಟ್ಯಂತರ ರುಪಾಯಿ ಗಳಿಸುವ ಸಂಚು ಹಾಕಿದ್ದ ಯುವ ವಿಜ್ಞಾನಿ ನಿಶಾಂತ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ನಾಗ್ಪುರದ ಡಿಆರ್ ಡಿಒ ಬ್ರಹ್ಮೋಸ್ ಘಟಕದಲ್ಲಿ ಜ್ಯೂನಿಯರ್ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಿಶಾಂತ್ ಅಗರವಾಲ್ ಮೇಲೆ ಗುರುತರ ಆರೋಪಗಳಿವೆ. ಪಾಕಿಸ್ತಾನದ ಐಎಸ್ಐ ಜತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ನಾಗ್ಪುರ ಕೋರ್ಟ್ ಸದ್ಯ ಬಂಧಿತ ನಿಶಾಂತನನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳ(ಎಟಿಎಸ್) ವಶಕ್ಕೆ ನೀಡಿದೆ.

ಪ್ರತಿಭಾವಂತ ಅಗರವಾಲ್ ನಿಂದ ಗೇಮಿಂಗ್ ಕೋಡ್ ಬಳಸಿ ರಹಸ್ಯ ರವಾನೆ ಪ್ರತಿಭಾವಂತ ಅಗರವಾಲ್ ನಿಂದ ಗೇಮಿಂಗ್ ಕೋಡ್ ಬಳಸಿ ರಹಸ್ಯ ರವಾನೆ

ಕೆನಡಾದ ಮಹಿಳೆಯ ಗೆಳೆತನ: ಕೆನಡಾ ಮೂಲದ ಸೆಜಲ್ ಕಪೂರ್ ಎಂಬ ಮಹಿಳೆ ಜತೆ ನಿಶಾಂತ್ ಗೆ ಗೆಳೆತನ ಉಂಟಾಗಿತ್ತು. ಲಿಂಕ್ಡಿನ್ ಮೂಲಕ ಮೊದಲಿಗೆ ನಿಶಾಂತ್ ಗೆ ಆಕೆಯಿಂದ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ನಂತರ ಫೇಸ್ ಬುಕ್ ನಲ್ಲಿ ಇಬ್ಬರ ಚಾಟಿಂಗ್ ನಿರಂತರವಾಗಿ ಸಾಗುತ್ತದೆ. ಕೆಲವು ಸೂಕ್ಷ್ಯಮಾಹಿತಿಗಳ ಬಗ್ಗೆ ಹೇಳಿದ್ದ. ನಿಶಾಂತ್ ಗೆ ಕೆನಡಾದಲ್ಲಿ ಉದ್ಯೋಗ, ಸರಿ ಸುಮಾರು 30,000 ಡಾಲರ್ ಪ್ರತಿ ತಿಂಗಳು ಸಂಬಳದ ಆಫರ್ ಬಂದಿತ್ತು.

A $30k per month job in Canada: Nishant Agarwal to share data with ISI

ಪಾಕಿಸ್ತಾನಕ್ಕೆ ಕ್ಷಿಪಣಿ ರಹಸ್ಯ ಮಾರಾಟ, ಡಿಆರ್ ಡಿಒ ಸಿಬ್ಬಂದಿ ಬಂಧನಪಾಕಿಸ್ತಾನಕ್ಕೆ ಕ್ಷಿಪಣಿ ರಹಸ್ಯ ಮಾರಾಟ, ಡಿಆರ್ ಡಿಒ ಸಿಬ್ಬಂದಿ ಬಂಧನ

ಸೆಜಲ್ ಕಪೂರ್ ಅಲ್ಲದೆ ಮತ್ತೊಬ್ಬ ಮಹಿಳೆ ಜತೆ ನಿಶಾಂತ್, ಫೇಸ್ ಬುಕ್ ನಲ್ಲಿ ಚಾಟಿಂಗ್ ನಡೆಸಿದ್ದ. ಆಕೆ ಹೆಸರು ನೇಹಾ ಶರ್ಮ ಎಂದಿದ್ದು, ಪಾಕಿಸ್ತಾನದಲ್ಲಿ ಐಪಿ ಅಡ್ರೆಸ್ ಟ್ರೇಸ್ ಆಗಿದೆ. ಈ ಇಬ್ಬರು ಮಹಿಳೆಯರ ಐಡಿಗಳು ನಿಜವಾದ ಐಡಿಗಳೆ ಎಂಬುದರ ಬಗ್ಗೆ ಇನ್ನಷ್ಟೇ ಬೆಳಕು ಚೆಲ್ಲಬೇಕಿದೆ.

English summary
Nishant Agarwal, a junior scientist working in DRDO's Nagpur lab, who was arrested on charges of alleged spying by Uttar Pradesh ATS, was reportedly lured with a job offer of $30,000 per month in Canada. According to a report in Times of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X