ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರು ಮತಾಂತರ ಕಲ್ಪನೆಗೂ ಕರ್ನಾಟಕಕ್ಕೂ ಲಿಂಕ್ ಇದೆ!

By Mahesh
|
Google Oneindia Kannada News

ನಾಗಪುರ, ಡಿ.22: ಭಾರತ ಹಿಂದೂಗಳ ರಾಷ್ಟ್ರ ಎಂದು ಆರೆಸ್ಸೆಸ್ ಹಾಗೂ ವಿಎಚ್ ಪಿ ಮುಖ್ಯಸ್ಥರು ಹೇಳಿದ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡರಾದ ಎಂ.ಜಿ ವೈದ್ಯ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿರುವ ಮುಸ್ಲಿಮರ ಪೈಕಿ ಶೇ 99ರಷ್ಟು ಮಂದಿ ಹಿಂದೂಗಳಾಗಿದ್ರು, ಮರು ಮತಾಂತರ ಕಲ್ಪನೆಗೂ ಕರ್ನಾಟಕದ ಲಿಂಕ್ ಇದೆ ಎಂದಿದ್ದಾರೆ. ಈ ಮೂಲಕ ಮರು ಮತಾಂತರರವನ್ನು ಸಮರ್ಥಿಸಿಕೊಂಡಿದ್ದಾರೆ.

ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಎಂಜಿ ವೈದ್ಯ ಅವರು ದಿ ಏಷ್ಯನ್ ಏಜ್ ಜೊತೆ ಮಾತನಾಡುತ್ತಾ, ದೇಶದ ಜಾತ್ಯಾತೀತ ವ್ಯವಸ್ಥೆ ಸುಭದ್ರವಾಗಿರಬೇಕಾದರೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಬೇಕು. ಮರು ಮತಾಂತರ ಹೊಸ ವಿಧಾನವೇನಲ್ಲ 60ರ ದಶಕದಲ್ಲೇ ಇದು ಚಾಲ್ತಿಯಲ್ಲಿತ್ತು ಎಂದಿದ್ದಾರೆ. [ಭಾರತ ಹಿಂದೂಗಳ ರಾಷ್ಟ್ರ: ಭಾಗ್ವತ್ ಹೇಳಿಕೆಗೆ ವಿಎಚ್ ಪಿ ಬೆಂಬಲ]

RSS leader M.G. Vaidya

1964-65ರಲ್ಲಿ ಎಲ್ಲಾ ಶಂಕರಾಚಾರ್ಯರು, ಮಹಾಂತರು, ಸಂತರು, ಮಠಾಧಿಪತಿಗಳು ಕರ್ನಾಟಕದ ಉಡುಪಿಯಲ್ಲಿ ಸಭೆ ಸೇರಿ ಮರು ಮತಾಂತರ ಕಲ್ಪನೆಯನ್ನು ಹುಟ್ಟು ಹಾಕಿದರು. ಇದಕ್ಕೂ ಮುನ್ನ ಹಿಂದೂ ಧರ್ಮದಲ್ಲಿ ಮತಾಂತರ ನಿಷೇಧಿಸಲಾಗಿತ್ತು. ಅದರೆ, ಹಿಂದೂಗಳ ಸಂಖ್ಯೆ ಹೆಚ್ಚಳಕ್ಕೆ ಕಾನೂನಿನ ಅಡಿಯಲ್ಲೇ ಕಾರ್ಯ ನಿರ್ವಹಿಸಲು ಈ ಹೊಸ ವಿಧಾನವನ್ನು ಅನುಸರಿಸಲು ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದರು ಎಂದು ವೈದ್ಯ ಅವರು ವಿವರಿಸಿದ್ದಾರೆ.

ಇದೇ ಮೊದಲ ಬಾರಿಗೆ ಮತಾಂತರ ಅಥವಾ ಮರು ಮತಾಂತರದ ಬಗ್ಗೆ ಹಿಂದೂ ಸಂಘಟನೆಗಳ ಸೇರಿ ಒಮ್ಮತದ ನಿರ್ಣಯಕ್ಕೆ ಬರಲಾಯಿತು. ಧರ್ಮದ ಪುನರುತ್ಥಾನ ನಮ್ಮ ಗುರಿಯಾಗಿತ್ತು.

ಭಾರತದ ಮುಸ್ಲಿಮರು ಯಾರು?: ಭಾರತದಲ್ಲಿ ನೆಲೆಸಿರುವ ಮುಸ್ಲಿಮರು ಯಾರು? ಶೇ 99 ರಷ್ಟು ಮುಸ್ಲಿಮರು ಹಿಂದೂಗಳೇ ಆಗಿದ್ದರು. ಅವರೆಲ್ಲ ಹೇಗೆ ಮತಾಂತರಗೊಂಡರು ಎಂಬುದು ಇತಿಹಾಸಗಳ ಪುಟ ತೆರೆದರೆ ತಿಳಿಯುತ್ತದೆ. ನಾವು ಈಗ ಮಾಡುತ್ತಿರುವುದು ಮರು ಮತಾಂತರ ಅಥವಾ ಘರ್ ವಾಪಸಿ. ಆಗ್ರಾದಲ್ಲಿ ನಡೆದ ಬೃಹತ್ ಮರು ಮತಾಂತರವನ್ನು ಸಮರ್ಥಿಸಿಕೊಳ್ಳಲೇಬೇಕಿದೆ. ಅದರೆ, ಅನಗತ್ಯ ಪ್ರಚಾರ ನೀಡಿ ಜನರಲ್ಲಿ ಗೊಂದಲ ಮೂಡಿಸಲಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಸ್ಲಾಂ ಯಾರು ಉಳಿಸಬಲ್ಲರು?: ಭಾರತದಲ್ಲಿರುವ ಮುಸ್ಲಿಮರಿಂದ ಮಾತ್ರ ಇಸ್ಲಾಂ ಧರ್ಮ ಉಳಿಸಬಲ್ಲರು. ಪಾಕಿಸ್ತಾನದಲ್ಲಿ ಶಿಯಾ ಹಾಗೂ ಅಹ್ಮದೀಯರನ್ನು ಹೇಗೆ ತುಚ್ಛವಾಗಿ ಕಾಣಲಾಗುತ್ತಿದೆ ಎಂಬುದು ತಿಳಿದಿರಲಿ. ನಮ್ಮಲ್ಲಿರುವ ಮುಸ್ಲಿಮರು ಕಾಲಕ್ಕೆ ತಕ್ಕಂತೆ ಬದಲಾಗುವ ಮನಸ್ಥಿತಿ ಹೊಂದಿದ್ದಾರೆ. ಧರ್ಮ ವೈವಿಧ್ಯತೆಯನ್ನು ನಂಬಿದ್ದಾರೆ ಹೀಗಾಗಿ ಎಲ್ಲಾ ಧರ್ಮಗಳನ್ನು ಗೌರವಿಸುವ ತನ್ನ ಧರ್ಮವನ್ನು ಉಳಿಸುವ ಶಕ್ತಿ ನಮ್ಮ ದೇಶದ ಮುಸ್ಲಿಮರಿಗೆ ಮಾತ್ರ ಇದೆ ಎಂದು 92 ವರ್ಷ ವಯಸ್ಸಿನ ಆರೆಸ್ಸೆಸ್ ನ ಮಾಜಿ ವಕ್ತಾರರಾಗಿದ್ದ ವೈದ್ಯ ಅವರು ಹೇಳಿದ್ದಾರೆ.

ಈ ನಡುವೆ ಅನ್ಯಧರ್ಮಗಳಿಂದ ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡುವುದರಲ್ಲಿ ಏನೂ ತಪ್ಪಿಲ್ಲ, ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವಾಗ ಮೌನವಾಗಿದ್ದದ್ದೇಕೆ ಎಂದು ಶಿವಸೇನೆ ಪ್ರಶ್ನಿಸಿದೆ.

English summary
Rashtriya Swayamsevak Sangh’s senior ideologue M.G. Vaidya claimed that 99 per cent of Muslims in India were Hindus. Defending the ‘ghar vapsi’ initiative of the Sangh Parivar which started in 1964-65 Udipi, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X