ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

99 ವೈದ್ಯರ ಸಾವು: ಕೊರೊನಾ ವಾರಿಯರ್ಸ್‌ಗೆ IMA ರೆಡ್‌ ಅಲರ್ಟ್!

|
Google Oneindia Kannada News

ಬೆಂಗಳೂರು, ಜು. 16: ಕೊರೊನಾ ವೈರಸ್ ದೇಶದಲ್ಲಿ ಅಂಕೆಗೆ ಸಿಗದಂತೆ ಹರಡುತ್ತಿದೆ. ಕೊರೊನಾ ವೈರಸ್ ಹಿಮ್ಮೆಟ್ಟಿಸಲು ಮುಂಚೂಣಿ ಯೋಧರಂತೆ ಕೆಲಸ ಮಾಡುತ್ತಿರುವ ವೈದ್ಯರನ್ನೇ ಇದೀಗ ಕೋವಿಡ್-19 ಟಾರ್ಗೆಟ್ ಮಾಡುತ್ತಿದೆ.

Recommended Video

Plasma ದಾನ ಮಾಡಿದರೆ 5000 ಕೊಡ್ತೀವಿ - Karnataka Government | Oneindia Kannada

ದೇಶದಲ್ಲಿ ಈ ವರೆಗೆ 9,70,169 ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ 24,929 ಮೃತಪಟ್ಟಿದ್ದು, 6,13,735 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸೋಂಕಿತರು ಗುಣಮುಖರಾಗಲು ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ಕೊಡುವಾಗ ಸೋಂಕಿಗೆ ತುತ್ತಾಗಿ ಮೃತ ಪಟ್ಟಿರುವ ವೈದ್ಯರ ಸಂಖ್ಯೆ 99. ಹೀಗಾಗಿ ಭಾರತೀಯ ವೈದ್ಯಕೀಯ ಸಂಘ (IMA) ವೈದ್ಯರಿಗೆ ರೆಡ್‌ ಅಲರ್ಟ್ ಘೋಷಣೆ ಮಾಡಿದೆ. ಸೋಂಕಿನಿಂದ ಈವರೆಗೆ ಮೃತಪಟ್ಟಿರುವ ವೈದ್ಯರ ವಿವರವಾದ ವರದಿಯನ್ನು ಐಎಂಎ ಮೊದಲ ಬಾರಿ ಬಿಡುಗಡೆ ಮಾಡಿದೆ. ಸಂಪೂರ್ಣ ವಿವರ ಮುಂದಿದೆ.

99 ವೈದ್ಯರ ಸಾವು

99 ವೈದ್ಯರ ಸಾವು

ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದ 99 ವೈದ್ಯರ ಪ್ರಾಣವನ್ನು ಕಳೆದು ಕೊಂಡಿದ್ದಾರೆಂದು ಭಾರತೀಯ ವೈದ್ಯಕೀಯ ಸಂಘ (IMA) ತನ್ನ ವರದಿಯಲ್ಲಿ ತಿಳಿಸಿದೆ. ದೇಶದ ವೈದ್ಯಕೀಯ ವೃತ್ತಿಪರರ ಮೇಲೆ ಸೋಂಕಿನ ಪ್ರಭಾವದ ಮೊದಲ ವರದಿಯನ್ನು ಬಹಿರಂಗಪಡಿಸಿದ್ದು, ಆತಂಕಕಾರಿ ವಿಷಯಗಳು ಬಹಿರಂಗವಾಗಿವೆ.

ಭಾರತದಲ್ಲಿ 99 ಜನ ವೈದ್ಯರು ಕೊರೊನಾದಿಂದ ಸಾವುಭಾರತದಲ್ಲಿ 99 ಜನ ವೈದ್ಯರು ಕೊರೊನಾದಿಂದ ಸಾವು

ದೇಶಾದ್ಯಂತ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ 1302 ವೈದ್ಯರು ಕೋವಿಡ್-ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ 586 ಸಾಮಾನ್ಯ ವೈದ್ಯರು, 566 ನಿವಾಸಿ ವೈದ್ಯರು ಹಾಗೂ 150 ಹೌಸ್ ಸರ್ಜನ್‌ಗಳು ಸೇರಿದ್ದಾರೆ. ಈ ಎಲ್ಲ ವೈದ್ಯರು ತಮ್ಮ ಕೋವಿಡ್ ಸೋಂಕಿತ ರೋಗಿಗಳಿಂದಲೇ ಸೋಂಕಿಗೆ ತುತ್ತಾಗಿದ್ದರು ಎಂದು ಐಎಂಎ ವರದಿಯಲ್ಲಿ ಹೇಳಿದೆ.

ಕಿರಿಯ ವಯಸ್ಸಿನ ವೈದ್ಯರು

ಕಿರಿಯ ವಯಸ್ಸಿನ ವೈದ್ಯರು

ಮೃತ ವೈದ್ಯರ ವಯಸ್ಸು ಕೂಡ ವೈದ್ಯ ವೃತ್ತಿಯಲ್ಲಿರುವವ ಆತಂಕ ಹೆಚ್ಚಾಗಲು ಕಾರಣವಾಗಿದೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಮೃತಪಟ್ಟ 73 ವೈದ್ಯರು 50 ವರ್ಷಗಳಿಗಿಂತ ಮೇಲ್ಪಟ್ಟವರು, 19 ಮಂದಿ 35-50 ವಯಸ್ಸಿನವರು ಮತ್ತು 7 ಮಂದಿ 35 ವರ್ಷದೊಳಗಿನವರು ಎಂಬುದು ಆತಂಕಕಾರಿ ವಿಷಯ.

ಜೊತೆಗೆ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡುವಾಗ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವ ವೈದ್ಯರ ಸಾವಿನ ಪ್ರಮಾಣ, ದೇಶದ ಒಟ್ಟು ಸೋಂಕಿತರ ಸಾವಿನ ಪ್ರಮಾಣಕ್ಕಿಂತ ಹೆಚ್ಚಿದೆ.

ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿ ಮೃತ ಪಟ್ಟಿರುವ ಜನರ ಪ್ರಮಾಣ ಶೇಕಡಾ 2.6 ರಷ್ಟಿದೆ. ಅದೇ ಸೋಂಕಿಗೆ ತುತ್ತಾಗಿದ್ದ 1,302 ವೈದ್ಯರಲ್ಲಿ 99 ವೈದ್ಯರು ಮೃತಪಟ್ಟಿದ್ದಾರೆ. ಹೀಗಾಗಿ ವೈದ್ಯರ ಸಾವಿನ ಪ್ರಮಾಣ ಶೇಕಡಾ 7.6ರಷ್ಟಿದೆ ಎಂದು ವರದಿಯಿಂದ ಬಹಿರಂಗವಾಗಿದೆ. ಹೀಗಾಗಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡುವಾಗ ಎಚ್ಚರಿಕೆ ವಹಿಸಿ ಎಂದು ವೈದ್ಯರಿಗೆ ಐಎಂಎ ಸೂಚಿಸಿದೆ.

ಹೆಚ್ಚಿರುವ ಸಾಧ್ಯತೆ

ಹೆಚ್ಚಿರುವ ಸಾಧ್ಯತೆ

ಕೊರೊನಾ ವೈಸರ್ ಸೋಂಕಿನಿಂದ ಮೃತಪಟ್ಟಿರುವ ವೈದ್ಯರ ನಿಜವಾದ ಸಂಖ್ಯೆ ಇನ್ನೂ ಮೂರು ಪಟ್ಟು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಯಾಕೆಂದರೆ IMA ಸಂಗ್ರಹಿಸಿದ ಮಾಹಿತಿಯು, ಅದರ 3.25 ಲಕ್ಷ ಸದಸ್ಯರನ್ನು ಮಾತ್ರ ಒಳಗೊಂಡಿದೆ, ಅವರಲ್ಲಿ ಕೇವಲ ಶೇಕಡಾ 10 ರಷ್ಟು ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದಂತೆ ದೇಶದಲ್ಲಿ ಒಟ್ಟು 11 ಲಕ್ಷ ನೋಂದಾಯಿತ ವೈದ್ಯರಿದ್ದಾರೆ. ಅವರಲ್ಲಿ ಸದ್ಯ ಐಎಂಎ ವರದಿ ಕೊಟ್ಟಿರುವುದು ಸಂಘದಲ್ಲಿ ನೋಂದಾಯಿಸಿಕೊಂಡಿರುವ ವೈದ್ಯರ ವಿವರ ಮಾತ್ರ ಎಂಬುದು ಗಮನಿಸಬೇಕಾದ ಅಂಶ.

ಕೈ ಮೀರುತ್ತಿರುವ ಕೊರೊನಾ, ವಿಶ್ವವ್ಯಾಪಿ ಲಾಕ್‌ಡೌನ್ ಸದ್ದುಕೈ ಮೀರುತ್ತಿರುವ ಕೊರೊನಾ, ವಿಶ್ವವ್ಯಾಪಿ ಲಾಕ್‌ಡೌನ್ ಸದ್ದು

ವರದಿ ಆಗಿರುವುದಕ್ಕಿಂತ ಮೂರು ಪಟ್ಟು ಹೆಚ್ಚು ವೈದ್ಯರು ಸೋಂಕಿನಿಂದ ಮೃತಪಟ್ಟಿದ್ದಾರೆಂದು ಅಂದಾಜಿಸಲಾಗಿದೆ. ಯಾಕೆಂದರೆ ಹೆಚ್ಚಿನ ಕೋವಿಡ್ ಸೋಂಕಿತರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ವೈದ್ಯರೂ IMA ನಲ್ಲಿ ಹೆಸರು ನೋಂದಾಯಿಸಿಲ್ಲ. ಹೀಗಾಗಿ ಅವರ ವಿವರ ನಮ್ಮಲ್ಲಿ ಇಲ್ಲ. ವೈದ್ಯರ ಮರಣ ಪ್ರಮಾಣ ಇನ್ನೂ ಹೆಚ್ಚಾಗಿದೆ ಎಂದು ಐಎಂಎ ಹಿರಿಯ ಸದಸ್ಯ ಡಾ. ರವಿ ವಾಂಖೇಡ್ಕರ್ ಅವರು ರಾಷ್ಟ್ರೀಯ ದೈನಿಕವೊಂದಕ್ಕೆ ಮಾಹಿತಿ ಕೊಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯ ಆಯುಷ್ ವೈದ್ಯರು ಸಹ ಸೋಂಕಿಗೆ ಒಳಗಾದ ನಂತರ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

IMA ರೆಡ್‌ ಅಲರ್ಟ್

IMA ರೆಡ್‌ ಅಲರ್ಟ್

ವೈದ್ಯರ ಸಾವಿನ ಕುರಿತಂತೆ ಐಎಂಎ ವೈದ್ಯರು ಮತ್ತು ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ರೆಡ್ ಅಲರ್ಟ್ ಹೇಳಿದೆ. ಕೊರೊನಾ ವೈರಸ್ ಸೋಂಕಿತರ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ವೈದ್ಯರು ಮತ್ತು ಆಸ್ಪತ್ರೆಗಳಿಂದ ಪ್ರಾರಂಭವಾಗಬೇಕು. ಸಾಕಷ್ಟು ಸಂಖ್ಯೆಯ ವೈದ್ಯರು ಈಗಾಗಲೇ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ವೈದ್ಯರು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ, ಅವರ ಕುಟುಂಬಗಳು, ಅವರ ಸಹೋದ್ಯೋಗಿಗಳು ಮತ್ತು ಸಿಬ್ಬಂದಿ ಸುರಕ್ಷತೆಗೆ ಗಮನ ಕೊಡಬೇಕು. ಇದೀಗ ವೈದ್ಯಕೀಯ ಸಂಸ್ಥೆಗಳ ಹಿರಿಯ ವೈದ್ಯರು ತಮ್ಮ ಸುಪರ್ದಿಯ ವೈದ್ಯರನ್ನು ನೋಡಿಕೊಳ್ಳುವಲ್ಲಿ ಜವಾಬ್ದಾರಿ ಹೆಚ್ಚಾಗಿದೆ ಎಂದು IMA ಸಲಹೆ ಕೊಟ್ಟಿದೆ.

ವೈಜ್ಞಾನಿಕ ತಪಾಸಣೆ, ಜೊತೆಗೆ ಗುಣಮಟ್ಟದ ಪಿಪಿಇ ಕಿಟ್‌ ಒದಗಿಸುವುದು, ದೈಹಿಕ ಅಂತರದ ಚಿಕಿತ್ಸೆ ಕೊಡಬೇಕು. ಪ್ರತಿದಿನ ಸರಿಯಾಗಿ ಸ್ಯಾನಿಟೈಸ್ ಮಾಡಬೇಕು. ಜೊತೆಗೆ ಆಪರೇಷನ್ ಥಿಯೇಟರ್‌ಗಳು, ಕಾರ್ಮಿಕ ಕೊಠಡಿಗಳು, ಪ್ರಯೋಗಾಲಯಗಳಲ್ಲಿ ಕೋವಿಡ್ ಸಮಯದ ಪ್ರಟೊಕಾಲ್‌ನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

ಐಸಿಯುಗಳು ಮತ್ತು ಕ್ರಿಟಿಕಲ್ ಕೇರ್ ಯುನಿಟ್‌ಗಳಲ್ಲಿ ಪ್ರೋಟೋಕಾಲ್‌ಗಳನ್ನು ಖಡ್ಡಾಯ ಪಾಲನೆ ಮಾಡಬೇಕು ಎಂದು ರೆಡ್‌ ಅಲರ್ಟ್‌ನಲ್ಲಿ ಘೊಷಣೆ ಮಾಡಿದೆ.

English summary
The Indian Medical Association report says that the lives of 99 doctors who were treating Covid-19 patients have been lost their life. The first report of the impact of the infection on medical professionals in the country has revealed worrisome matters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X