ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್ ಫಂಗಸ್ ಭೀತಿ: ಕರ್ನಾಟಕದಲ್ಲಿ 97 ಮಂದಿಗೆ ಅಂಟಿದ ಮಹಾಮಾರಿ!

|
Google Oneindia Kannada News

ನವದೆಹಲಿ, ಮೇ 18: ಕೊರೊನಾವೈರಸ್ ಸೋಂಕಿನ ಆತಂಕದ ನಡುವೆ ಕರ್ನಾಟಕದಲ್ಲಿ 97 ಮಂದಿಗೆ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರ ರೋಗ ತಗುಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

Recommended Video

Black Fungus ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ | Oneindia Kannada

ಬ್ಲ್ಯಾಕ್ ಫಂಗಸ್ ರೋಗ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಡುತ್ತಿದ್ದಂತೆ ಸರ್ಕಾರಕ್ಕೆ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಯಾವುದೇ ಕಾರಣಕ್ಕೂ ಈ ಸೋಂಕಿನ ವಿಷಯ ಮುಚ್ಚಿಡುವಂತಿಲ್ಲ ಎಂದು ಹೇಳಿದ್ದಾರೆ.

ಧೈರ್ಯವಾಗಿರಿ, ಬ್ಲ್ಯಾಕ್ ಫಂಗಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕಲ್ಲಧೈರ್ಯವಾಗಿರಿ, ಬ್ಲ್ಯಾಕ್ ಫಂಗಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕಲ್ಲ

ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಆಂಫೋತೆರಿಸಿನ್ ಇಂಜೆಕ್ಷನ್ ಬಳಸಲಾಗುತ್ತಿದೆ. ಒಬ್ಬ ರೋಗಿಗೆ 40 ರಿಂದ 60 ಬಾಟಲಿ ಲಸಿಕೆಯನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಇಂಜೆಕ್ಷನ್ 1050 ಬಾಟಲಿ ಪೈಕಿ 450 ಇಂಜೆಕ್ಷನ್ ಅನ್ನು ರಾಜ್ಯಕ್ಕೆ ರವಾನಿಸಲಾಗಿದೆ. 20,000 ಬಾಟಲಿ ಇಂಜೆಕ್ಷನ್ ಗಾಗಿ ರಾಜ್ಯ ಸರ್ಕಾರದಿಂದ ಆರ್ಡರ್ ಕೊಟ್ಟಿದ್ದೇವೆ. ಪ್ರಸ್ತುತ ಬ್ಲ್ಯಾಕ್ ಫಂಗಸ್ ರೋಗದಿಂದ ಬಳಲುತ್ತಿರುವ 97 ಮಂದಿ ರೋಗಿಗಳಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

ಬ್ಲ್ಯಾಕ್ ಫಂಗಸ್ ಅಂಟಿಕೊಳ್ಳುವುದರ ಹಿಂದಿನ ಭೀತಿ

ಬ್ಲ್ಯಾಕ್ ಫಂಗಸ್ ಅಂಟಿಕೊಳ್ಳುವುದರ ಹಿಂದಿನ ಭೀತಿ

ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ನೀಡುವ ಸ್ಟೀರಾಯ್ಡ್ ಔಷಧಿಯಿಂದಲೇ ಬ್ಲ್ಯಾಕ್ ಫಂಗಸ್ ಅಂಟಿಕೊಳ್ಳುವ ಅಪಾಯ ಹೆಚ್ಚಾಗಿದೆ. ಸ್ಟೀರಾಯ್ಡ್ ಔಷಧಿಯು ಕೊವಿಡ್-19 ಸೋಂಕಿತರ ಶ್ವಾಸಕೋಶಕ್ಕೆ ಸೋಂಕು ಹರಡದಂತೆ ತಡೆಯುವ ಶಕ್ತಿಯನ್ನು ಹೊಂದಿದೆ. ಇದರ ಜೊತೆಗೆ ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿಯ ಜೊತೆಗೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹೆಚ್ಚುವಂತೆ ಮಾಡುತ್ತದೆ. ಇದು ಡಯಾಬಿಟಿಸ್ ರೋಗಿಗಳು ಹಾಗೂ ಡಯಾಬಿಟಿಸ್ ಇಲ್ಲದ ರೋಗಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

ಬ್ಲ್ಯಾಕ್ ಫಂಗಸ್ ರೋಗ ಎಂದರೇನು?

ಬ್ಲ್ಯಾಕ್ ಫಂಗಸ್ ರೋಗ ಎಂದರೇನು?

ಶಿಲೀಂಧ್ರಗಳ ಒಂದು ಗುಂಪಿನ ಅಚ್ಚುಗಳಿಂದ ಅಂಟಿಕೊಳ್ಳುವ ರೋಗವನ್ನೇ ಬ್ಲ್ಯಾಕ್ ಫಂಗಸ್ ಎಂದು ಕರೆಯಲಾಗುತ್ತದೆ. ಈ ಅಚ್ಚುಗಳು ಪರಿಸರದಲ್ಲೇ ಇರಲಿವೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಥವಾ ದೇಹದ ಅನಾರೋಗ್ಯದ ವಿರುದ್ಧ ಹೋರಾಡುವುದಕ್ಕಾಗಿ ದೇಹವು ಸಹಿಸಿಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ಔಷಧಿಗಳನ್ನು ತೆಗೆದುಕೊಳ್ಳುವವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ರೋಗವು ಮೂಗು, ಶ್ವಾಸಕೋಶ ಅಥವಾ ಸೈನಸ್, ಕಣ್ಣುಗಳು ಮತ್ತು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬ್ಲ್ಯಾಕ್ ಫಂಗಸ್ ರೋಗದ ಲಕ್ಷಣ ಹೇಗಿರುತ್ತೆ?

ಬ್ಲ್ಯಾಕ್ ಫಂಗಸ್ ರೋಗದ ಲಕ್ಷಣ ಹೇಗಿರುತ್ತೆ?

* ಕಣ್ಣು ಮತ್ತು ಮೂಗಿನ ಸುತ್ತ ಕೆಂಪಾಗುವಿಕೆ ಮತ್ತು ನೋವು

* ಜ್ವರ

* ತಲೆನೋವು

* ಕೆಮ್ಮು

* ಉಸಿರಾಟದ ಸಮಸ್ಯೆ

* ರಕ್ತಸಿಕ್ತ ವಾಂತಿ

* ಮಾನಸಿಕ ಸ್ಥಿತಿ ಬದಲು

ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ಸಿಗುವುದು ಎಲ್ಲಿ?

ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ಸಿಗುವುದು ಎಲ್ಲಿ?

ರಾಜ್ಯದ ಹಲವು ಜಿಲ್ಲಾ ಕೇಂದ್ರಗಳು ಮತ್ತು ಮಹಾನಗರಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾವ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಆರಂಭಿಸಲಾಗುತ್ತದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ಸಚಿವರು ನೀಡಿರುವ ಮಾಹಿತಿ ಪ್ರಕಾರ ಆಸ್ಪತ್ರೆಗಳ ಪಟ್ಟಿ ಇಲ್ಲಿದೆ ನೋಡಿ.

ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆ ಕೇಂದ್ರಗಳ ಪಟ್ಟಿ:

* ಮೈಸೂರು ಮೆಡಿಕಲ್ ಕಾಲೇಜು

* ಶಿವಮೊಗ್ಗ ಮೆಡಿಕಲ್ ಕಾಲೇಜು

* ಜೆಐಎಂಎಸ್

* ಕೆಐಎಂಎಸ್

* ವೆನ್ ಲಾಕ್ ಜಿಲ್ಲಾಸ್ಪತ್ರೆ

*ಉಡುಪಿಯ ಕೆಎಂಸಿ ಆಸ್ಪತ್ರೆ

English summary
97 Cases Of Black Fungus Reported In Karnataka Since Covid-19 Outbreak: Dr K Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X