ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 24 ಗಂಟೆಯಲ್ಲಿ 95,735 ಹೊಸ ಕೋವಿಡ್ ಪ್ರಕರಣ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಭಾರತದಲ್ಲಿ 24 ಗಂಟೆಯಲ್ಲಿ 95,735 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 1,172 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 44,65,864ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 919018. ಇದುವರೆಗೂ 3471784 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 75,062 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ.

ಭಾರತದ ಈ ಜಿಲ್ಲೆಯಲ್ಲಿ 2 ಲಕ್ಷ ಕೋವಿಡ್ ಸೋಂಕಿತರು! ಭಾರತದ ಈ ಜಿಲ್ಲೆಯಲ್ಲಿ 2 ಲಕ್ಷ ಕೋವಿಡ್ ಸೋಂಕಿತರು!

95,735 New COVID-19 Cases & 1,172 Deaths Reported In India, In The Last 24 Hours

ಇದುವರೆಗೂ ದೇಶದಲ್ಲಿ 5,29,34,433 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಐಸಿಎಂಆರ್ ಹೇಳಿದೆ. ಸೆಪ್ಟೆಂಬರ್ 9ರಂದು 11,29,756 ಮಾದರಿಗಳ ಪರೀಕ್ಷೆ ಮಾಡಲಾಗಿದೆ.

ಕರ್ನಾಟಕ; ಕೋವಿಡ್‌ನಿಂದ 44 ಪೊಲೀಸ್ ಸಿಬ್ಬಂದಿ ಸಾವು ಕರ್ನಾಟಕ; ಕೋವಿಡ್‌ನಿಂದ 44 ಪೊಲೀಸ್ ಸಿಬ್ಬಂದಿ ಸಾವು

ಟಾಪ್ ರಾಜ್ಯಗಳು : ಕೋವಿಡ್ ಸೋಂಕಿತರು ಹೆಚ್ಚು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9,67,349. ಸಕ್ರಿಯ ಪ್ರಕರಣಗಳ ಸಂಖ್ಯೆ 2,52,734.

ಕರ್ನಾಟಕದಲ್ಲಿ 4 ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕು ಕರ್ನಾಟಕದಲ್ಲಿ 4 ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕು

ಆಂಧ್ರ ಪ್ರದೇಶ ಸೋಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,27,512. ಸಕ್ರಿಯ ಪ್ರಕರಣಗಳು 97,271.

ತಮಿಳುನಾಡಿನಲ್ಲಿ 4,80,524, ಕರ್ನಾಟಕದಲ್ಲಿ 4,21,730, ಉತ್ತರ ಪ್ರದೇಶದಲ್ಲಿ 2,85,041 ಸೋಂಕಿತರು ಇದ್ದಾರೆ. ದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,01,174.

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

ವಿಶ್ವದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಲ್ಲಿ ಅಮೆರಿಕ (6,549,475) ಸೋಂಕಿತರು ಇದ್ದಾರೆ. ಭಾರತದಲ್ಲಿ 4,465,863 ಸೋಂಕಿತರು ಇದ್ದಾರೆ. ಬ್ರೆಜಿಲ್ 3ನೇ ಸ್ಥಾನದಲ್ಲಿದ್ದು ಒಟ್ಟು ಸೋಂಕಿತರ ಸಂಖ್ಯೆ 4,199,332.

English summary
Indian reported 95,735 new COVID 19 cases and 1,172 deaths in the last 24 hours. The total case tally stands at 44,65,864. 919018 active cases and 75,062 deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X