ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.92ರಷ್ಟು ನೋಂದಾಯಿತ ಅಸಂಘಟಿತ ವಲಯದ ಕೆಲಸಗಾರರ ಆದಾಯವೆಷ್ಟು?

|
Google Oneindia Kannada News

ನವದೆಹಲಿ, ನವೆಂಬರ್ 18: ಇ- ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತರಾದ ಸುಮಾರು ಶೇಕಡಾ 92 ರಷ್ಟು ಅನೌಪಚಾರಿಕ ವಲಯದ ಕೆಲಸಗಾರರ ತಿಂಗಳ ಆದಾಯ ರೂ. 10,000 ಅಥವಾ ಅದಕ್ಕಿಂತ ಕಡಿಮೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೊಸ ಮಾಹಿತಿ ಪ್ರಕಾರ ಇದರಲ್ಲಿ ನೋಂದಣಿಯಾದವರಲ್ಲಿ ಶೇಕಡಾ 72 ರಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗೆ ಸೇರಿದವರಾಗಿದ್ದಾರೆ.

ಕೋವಿಡ್ 2ನೇ ಅಲೆಗೆ ಕೆಲಸ ಕಳೆದುಕೊಂಡವರೆಷ್ಟು ಗೊತ್ತಾ? ಆಘಾತ ಹುಟ್ಟಿಸುತ್ತೆ ಅಂಕಿಅಂಶಕೋವಿಡ್ 2ನೇ ಅಲೆಗೆ ಕೆಲಸ ಕಳೆದುಕೊಂಡವರೆಷ್ಟು ಗೊತ್ತಾ? ಆಘಾತ ಹುಟ್ಟಿಸುತ್ತೆ ಅಂಕಿಅಂಶ

ನೋಂದಣಿಯಾದ ಶೇ. 86.58 ರಷ್ಟು ಕೆಲಸಗಾರರು ಪೋರ್ಟಲ್ ನಲ್ಲಿ ಬ್ಯಾಂಕ್ ಅಕೌಂಟ್ ವಿವರ ನೀಡಿದ್ದಾರೆ. ಇನ್ನೂ ವಯಸ್ಸಿನ ಆಧಾರದ ಮೇಲೆ ನೋಡುವುದಾದರೆ ನೋಂದಣಿಯಾದ ಶೇ. 61.4 ರಷ್ಟು ಕೆಲಸಗಾರರು 18 ರಿಂದ 40 ವರ್ಷದವರಾಗಿದ್ದಾರೆ ಶೇ. 22.24 ಮಂದಿ 40 ರಿಂದ 50 ವರ್ಷದವರಾಗಿದ್ದಾರೆ.

92 Per Cent Registered Informal Workers Income At Rs 10,000 Or Below

ಶೇ. 12.59 ರಷ್ಟು ಮಂದಿ 50 ಕ್ಕೂ ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಶೇ. 3.77 ರಷ್ಟು ಕೆಲಸಗಾರರು 16 ರಿಂದ 18 ವರ್ಷದ ನಡುವಿನ ವಯಸ್ಸಿನವರಾಗಿದ್ದಾರೆ.

ಶೇ. 51.66 ರಷ್ಟು ಮಂದಿ ಮಹಿಳೆಯರು, ಶೇ. 48.34 ರಷ್ಟು ಪುರುಷರಾಗಿದ್ದಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ , ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿಯಾಗಿದ್ದಾರೆ.

ಇ- ಶ್ರಮ್ ಪೋರ್ಟಲ್ ದೇಶದಲ್ಲಿನ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಅಭಿವೃದ್ಧಿಯಲ್ಲಿ ನೆರವಾಗಲಿದೆ. ದೇಶದಲ್ಲಿನ ಸುಮಾರು 38 ಕೋಟಿ ಅಸಂಘಟಿತ ಕೆಲಸಗಾರರಿಗೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ತಲುಪಿಸುವ ಗುರಿಯೊಂದಿಗೆ ಆಗಸ್ಟ್ 26, 2021 ರಂದು ಇ- ಶ್ರಮ್ ಪೋರ್ಟಲ್ ಗೆ ಚಾಲನೆ ನೀಡಲಾಗಿತ್ತು.

ನೋಂದಣಿಯಾದ ಅನೌಪಚಾರಿಕ ಕೆಲಸಗಾರರಲ್ಲಿ ಶೇಕಡಾ 92.37 ರಷ್ಟು ಮಂದಿಯ ತಿಂಗಳ ಆದಾಯ 10 ಸಾವಿರ ಅಥವಾ ಅದಕ್ಕಿಂತ ಕಡಿಮೆಯಾಗಿದ್ದರೆ, ಶೇ. 5.58 ರಷ್ಟು ಮಂದಿಯ ತಿಂಗಳ ಆದಾಯ ರೂ. 10,001 ರಿಂದ 15,000 ಆಗಿದೆ. ಶೇ 40.44 ರಷ್ಟು ಒಬಿಸಿ, ಶೇ.23.76 ರಷ್ಟು ಎಸ್ ಸಿ ಮತ್ತು ಶೇ. 8.38 ರಷ್ಟು ಎಸ್ ಟಿ ಸೇರಿದಂತೆ ಶೇ 72.58 ರಷ್ಟು ನೋಂದಾಯಿತ ಕಾರ್ಮಿಕರು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗಿಂತ ಹಿಂದೆ ಇರುವುದು ತಿಳಿದುಬಂದಿದೆ ಸಾಮಾನ್ಯ ವರ್ಗದ ಕೆಲಸಗಾರರ ಸಂಖ್ಯೆ ಶೇ. 27.41 ರಷ್ಟಿದೆ.

ಇತ್ತೀಚಿನ ಮಾಹಿತಿ ಪ್ರಕಾರ, 8.01 ಕೋಟಿ ಅನೌಪಚಾರಿಕ ವಲಯದ ಕೆಲಸಗಾರರು ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿಯಾಗಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಸಾಮಾಜಿಕವಾಗಿ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದು, ಬಡತನ ಸ್ಥಿತಿಯಲ್ಲಿಯೇ ಬದುಕುತ್ತಿರುವುದು ಕಂಡುಬಂದಿದೆ.

ಇ-ಶ್ರಮ್‌ ಪೋರ್ಟಲ್‌ನಲ್ಲಿ ನೋಂದಣಿ ಉಚಿತವಾಗಿದ್ದು, ನೋಂದಣಿಯ ನಂತರ ಫಲಾನುಭವಿಗಳು ಸ್ಥಳದಲ್ಲಿಯೇ ಗುರುತಿನ ಚೀಟಿ ಪಡೆಯಬಹುದಾಗಿದೆ.

ಇ-ಶ್ರಮ್‌ ಯೋಜನೆಯಡಿ ನೋಂದಣಿಗೆ ಕಟ್ಟಡ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರು, ಮೀನುಗಾರರು, ಕೃಷಿ ಸಂಗೋಪನಾಕಾರರು, ನೇಕಾರರು, ಬಡಗಿಗಳು, ಆಶಾ ಕಾರ್ಯಕರ್ತೆಯರು, ಛಾಯಾಚಿತ್ರಗ್ರಾಹಕರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆಕೆಲಸದವರು, ಪತ್ರಿಕೆ ಮಾರಾಟಗಾರರು, ನರೇಗಾ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ತರು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್‌ಲೈನ್‌ ಸೇವಾ ಕಾರ್ಮಿಕರು, ಟೈಲರ್‌ಗಳು, ಹೋಟೆಲ್‌, ಬೇಕರಿ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಒಟ್ಟಾರೆ 156 ವರ್ಗಗಳ 16-59 ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು.

ನೋಂದಣಿ ವಿಧಾನ ಮತ್ತು ಬೇಕಾಗುವ ದಾಖಲೆಗಳ ಬಗ್ಗೆ ಇ-ಶ್ರಮ್‌ ಪೋರ್ಟಲ್‌ ನಲ್ಲಿ ಸ್ವಯಂ ಅಥವಾ ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಕೊಂಡು ಯುಎನ್‌ ಗುರುತಿನ ಚೀಟಿ ಪಡೆಯಬಹುದಾಗಿದೆ. ನೋಂದಣಿಗೆ ಆಧಾರ್‌ ಕಾರ್ಡ್‌, ಆಧಾರ್‌ ಸಂಖ್ಯೆಗೆ ಜೋಡಣೆಯಾದ ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆ ವಿವರಗಳಿರಬೇಕು.

ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಮನೆಗೆಲಸದವರು, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ವಲಯದ 38 ಕೋಟಿ ಕಾರ್ಮಿಕರ ನೋಂದಣಿ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಇದೇ ಕಾರಣಕ್ಕೆ ಇ-ಶ್ರಮ ಪೋರ್ಟಲ್ ಪ್ರಾರಂಭಿಸಿದ್ದು, ಇದರಲ್ಲಿ ಕಾರ್ಮಿಕರು ತಮ್ಮ ಹೆಸರು ಮತ್ತು ಮಾಹಿತಿ ನೋಂದಾಯಿಸಬಹುದು. ಹೀಗೆ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ವಿಶಿಷ್ಟ ಗುರುತು ಸಂಖ್ಯೆ ಹೊಂದಿರೋ ಇ-ಶ್ರಮ ಕಾರ್ಡ್ ನೀಡಲಾಗುತ್ತದೆ.

-ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಅಡಿಯಲ್ಲಿ 2 ಲಕ್ಷ ರೂ. ಅಪಘಾತ ವಿಮಾ ಕವರೇಜ್ ಪಡೆಯುತ್ತಾರೆ. ಕಾರ್ಮಿಕ ಆಕಸ್ಮಿಕವಾಗಿ ಮರಣ ಹೊಂದಿದ್ರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದ್ರೆ 2 ಲಕ್ಷ ರೂ. ಸಿಗಲಿದೆ.

-ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರೋ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ನೋಂದಾಯಿತ ಕಾರ್ಮಿಕ ಅರ್ಹನಾಗಿದ್ದಾನೆ.

Recommended Video

ಬಿಜೆಪಿ ಗೆ ವಾರ್ನಿಂಗ್ ಕೊಟ್ಟ ಡಿಕೆ ಶಿವಕುಮಾರ್ | Oneindia Kannada

-ತುರ್ತು ಸಂದರ್ಭ ಹಾಗೂ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಇ-ಶ್ರಮ ಕಾರ್ಡ್ ಹೊಂದಿರೋರು ಎಲ್ಲ ರೀತಿಯ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ.

English summary
Over 92 per cent of the eight crore informal sector workers registered on the e-Shram portal have a monthly income of Rs 10,000 or below and 72 per cent of the enrolled workforce.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X