ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಲಸಿಕೆ ಬಗ್ಗೆ ಭಯಬೇಡ: ವ್ಯಾಕ್ಸಿನ್‌ ಪಡೆದ ಬಳಿಕ ಸೋಂಕು ದೃಢಪಟ್ಟ ಅಧಿಕ ಜನರಲ್ಲಿ ಸೌಮ್ಯ ಲಕ್ಷಣ

|
Google Oneindia Kannada News

ನವದೆಹಲಿ, ಜೂ. 18: ಕೊರೊನಾ ಲಸಿಕೆ ಪಡೆದರೂ ಸೋಂಕು ತಗುಲಿದೆ. ಹಾಗಿರುವಾಗ ಕೊರೊನಾ ಲಸಿಕೆ ಪಡೆದು ಏನು ಪ್ರಯೋಜನ ಎಂದು ಹಲವು ನಾಗರಿಕರು ಹೇಳುತ್ತಿದ್ದಾರೆ. ಅಂತಹ ನಾಗರಿಕರಿಗೆ ಧೈರ್ಯ ತುಂಬುವ ಕಾರ್ಯವನ್ನು ಫೋರ್ಟಿಸ್ ಹೆಲ್ತ್‌ಕೇರ್ ಬಿಡುಗಡೆ ಮಾಡಿದ ಪುರಾವೆ ಆಧಾರಿತ ಅಧ್ಯಯನವು ಮಾಡಿದೆ.

ಈ ಅಧ್ಯಯನದ ಪ್ರಕಾರ ಎರಡೂ ಲಸಿಕೆ ಹಾಕಿಸಿಕೊಂಡ ಆರೋಗ್ಯ ಕಾರ್ಯಕರ್ತರಲ್ಲಿ ಶೇ.92 ರಷ್ಟು ಜನರಲ್ಲಿ ಸೌಮ್ಯವಾದ ಕೋವಿಡ್ ಲಕ್ಷಣಗಳು ಮಾತ್ರ ಕಂಡು ಬಂದಿದೆ. ಈ ಕೊರೊನಾ ಎರಡನೇ ಅಲೆಯ ತೀವ್ರತೆಯ ಸಂದರ್ಭದಲ್ಲಿಯೂ ಈ ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕು ತಗುಲಿದ ಹೆಚ್ಚಿನ ಮಂದಿ ಮನೆಯಲ್ಲಿಯೇ ಆರೈಕೆ ಪಡೆದು ಚೇತರಿಸಿಕೊಂಡಿದ್ದಾರೆ.

ಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರ

ಲಸಿಕೆಗಳ ಪಾತ್ರ ಮತ್ತು ಲಸಿಕೆ ಪಡೆದ ನಂತರದ ಕೋವಿಡ್ -19 ಸೋಂಕಿನ ತೀವ್ರತೆಯನ್ನು ಕಂಡುಕೊಳ್ಳಲು ಮಾಡಲಾದ ಈ ಅಧ್ಯಯನದ ಆವಿಷ್ಕಾರಗಳನ್ನು ಬಿಡುಗಡೆ ಮಾಡಲಾಗಿದ್ದು ಈ ಲಸಿಕೆ ಹಿಂಜರಿಕೆಯನ್ನು ಪರಿಹರಿಸುತ್ತದೆ ಮತ್ತು ಲಸಿಕೆ ಸಂಬಂಧಿಸಿದ ವದಂತಿಗಳನ್ನು ಕೂಡಾ ದೂರ ಮಾಡಲಿದೆ.

ಕೇವಲ ಒಂದು ಶೇಕಡ ಮಂದಿಗೆ ತೀವ್ರ ಅನಾರೋಗ್ಯ

ಕೇವಲ ಒಂದು ಶೇಕಡ ಮಂದಿಗೆ ತೀವ್ರ ಅನಾರೋಗ್ಯ

ಕೋವಿಡ್‌ ಲಸಿಕೆ ಪಡೆದ ಬಳಿಕ ಕೊರೊನಾ ಪಾಸಿಟಿವ್‌ ಆದ ಆರೋಗ್ಯ ಕಾರ್ಯಕರ್ತರಲ್ಲಿ (ಎಚ್‌ಸಿಡಬ್ಲ್ಯು) ಪೈಕಿ ಕೇವಲ ಒಂದು ಶೇಕಡ ಮಂದಿಗೆ ಮಾತ್ರ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಅಧ್ಯಯನವು ತಿಳಿಸಿದೆ. ಒಂದು ಶೇಕಡ ಮಂದಿಗೆ ಐಸಿಯು ಆರೈಕೆ / ವೆಂಟಿಲೇಟರ್ ಬೆಂಬಲ ಅಗತ್ಯವಾಗಿದೆ. ಈ ವರ್ಷದ ಜನವರಿ ಮತ್ತು ಮೇ ನಡುವೆ ಮೊದಲ ಮತ್ತು ಎರಡನೆಯ ಪ್ರಮಾಣದ ಲಸಿಕೆಗಳನ್ನು ಪಡೆದ ಸುಮಾರು 16,000 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನ ಮಾಡಲಾಗಿದೆ. ಈ ಅವಧಿಯು ಎರಡನೇ ಕೊರೊನಾ ಅಲೆಯ ಸಂದರ್ಭವಾಗಿದ್ದು ಭಾರತದಲ್ಲಿ ಪ್ರತಿದಿನ 3.5 ರಿಂದ 4 ಲಕ್ಷ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿತ್ತು.

ಲಸಿಕೆ SARS-CoV-2 ವೈರಸ್ ವಿರುದ್ಧ ರಕ್ಷಣೆ

ಲಸಿಕೆ SARS-CoV-2 ವೈರಸ್ ವಿರುದ್ಧ ರಕ್ಷಣೆ

''ಕೋವಿಡ್ -19 ವಿರುದ್ದ ಭಾರತದಲ್ಲಿ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿ ಮತ್ತು SARS-CoV-2 ವೈರಸ್ ವಿರುದ್ಧ ರಕ್ಷಣೆ ನೀಡುತ್ತದೆ,'' ಎಂದು ಅಧ್ಯಯನವು ಹೇಳಿದೆ. ಎರಡು-ಡೋಸ್ ಲಸಿಕೆಯ (ಸಂಪೂರ್ಣವಾಗಿ ಲಸಿಕೆ ಹಾಕಿದ) ಮೊದಲ ಮತ್ತು ಎರಡನೆಯ ಪ್ರಮಾಣವನ್ನು ಪಡೆದ ಕನಿಷ್ಠ 92 ಶೇಕಡಾ ಆರೋಗ್ಯ ಕಾರ್ಯಕರ್ತರು (16,000) ಐಸಿಯು ಆರೈಕೆಯ ಅಗತ್ಯವಿರುವ ಯಾವುದೇ ತೀವ್ರ ಲಕ್ಷಣಗಳನ್ನು ಎದುರಿಸಿಲ್ಲ. ಎರಡೂ ಪ್ರಮಾಣವನ್ನು ಪಡೆದ ನಂತರ, ಕೇವಲ ಆರು ಶೇಕಡಾ ಸಿಬ್ಬಂದಿ ಮಾತ್ರ ಸೋಂಕಿಗೆ ಒಳಗಾಗಿದ್ದರು. ಏಳು ಶೇಕಡಾ ಮಂದಿ ಆಮ್ಲಜನಕದ ಬೆಂಬಲ ಅಗತ್ಯವಿರುವ ಮಧ್ಯಮ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರು. ಕೇವಲ ಒಂದು ಶೇಕಡಾ ಮಾತ್ರ ಐಸಿಯು ಆರೈಕೆ ಬೇಕಾದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಅಂಕಿ ಅಂಶಗಳು ತೋರಿಸುತ್ತವೆ.

ದೇಶದಲ್ಲೇ ಮೊದಲ ಬಾರಿಗೆ ಈ ನಗರದಲ್ಲಿ ಮನೆ ಬಾಗಿಲಿಗೆ ಕೊರೊನಾ ಲಸಿಕೆದೇಶದಲ್ಲೇ ಮೊದಲ ಬಾರಿಗೆ ಈ ನಗರದಲ್ಲಿ ಮನೆ ಬಾಗಿಲಿಗೆ ಕೊರೊನಾ ಲಸಿಕೆ

ಸೋಂಕಿನ ತೀವ್ರತೆ ಕಡಿಮೆ ಮಾಡುವ ಲಸಿಕೆ

ಸೋಂಕಿನ ತೀವ್ರತೆ ಕಡಿಮೆ ಮಾಡುವ ಲಸಿಕೆ

ಈ ಅಧ್ಯಯನಗಳು ಲಸಿಕೆ ಪಡೆಯುವ ಮತ್ತೊಂದು ಪ್ರಮುಖ ಪ್ರಯೋಜನವನ್ನು ಸೂಚಿಸುತ್ತವೆ. ಲಸಿಕೆಯಿಂದಾಗಿ ಸೋಂಕಿನ ಅಪಾಯವನ್ನು ಕಡಿಮೆ ಮಾಡುವ ಮತ್ತು ತೀವ್ರತೆಯನ್ನು ಕಡಿಮೆ ಮಾಡುವ ನೇರ ಪರಿಣಾಮಗಳ ಜೊತೆಗೆ, ಲಸಿಕೆಗಳು ಹರಡುವಿಕೆಯ ಕಡಿಮೆಯಾಗುತ್ತದೆ. ಲಸಿಕೆ ಇತರರಿಗೆ ಸೋಂಕು ಹರಡುವುದನ್ನು ತಡೆಯುತ್ತದೆ. ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಹೆಚ್‌ಇ) ನಡೆಸಿದ ಹೊಸ ಅಧ್ಯಯನವು ಕೋವಿಡ್ -19 ಲಸಿಕೆಯ ಒಂದು ಪ್ರಮಾಣ (ಫಿಜರ್-ಬಯೋಎನ್‌ಟೆಕ್ ಅಥವಾ ಅಸ್ಟ್ರಾಜೆನೆಕಾ ಲಸಿಕೆ) ಮನೆಯಲ್ಲಿ ಕೊರೊನಾ ಪ್ರಸರಣವನ್ನು ಶೇಕಡಾ 50 ರಷ್ಟು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.

ಫೋರ್ಟಿಸ್ ಹೆಲ್ತ್‌ಕೇರ್‌ನ ಮುಖ್ಯಸ್ಥ ಡಾ. ಬಿಷ್ಣು ಪಾನಿಗ್ರಾಹಿ ಹೇಳಿದಿಷ್ಟು...

ಫೋರ್ಟಿಸ್ ಹೆಲ್ತ್‌ಕೇರ್‌ನ ಮುಖ್ಯಸ್ಥ ಡಾ. ಬಿಷ್ಣು ಪಾನಿಗ್ರಾಹಿ ಹೇಳಿದಿಷ್ಟು...

ಅಧ್ಯಯನದ ಆವಿಷ್ಕಾರಗಳ ಕುರಿತು ಪ್ರತಿಕ್ರಿಯಿಸಿದ, ವೈದ್ಯಕೀಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಗಳ ಫೋರ್ಟಿಸ್ ಹೆಲ್ತ್‌ಕೇರ್‌ನ ಮುಖ್ಯಸ್ಥ ಡಾ. ಬಿಷ್ಣು ಪಾನಿಗ್ರಾಹಿ, ''ಕೋವಿಡ್ -19 ಗಾಗಿ ಭಾರತದಲ್ಲಿ ಲಭ್ಯವಿರುವ ಲಸಿಕೆಗಳು ವೈರಸ್ ವಿರುದ್ಧವೂ ರಕ್ಷಣೆ ನೀಡುತ್ತದೆ ಎಂಬ ಪ್ರಮುಖ ಅಂಶಗಳನ್ನು ಅಧ್ಯಯನವು ಸ್ಪಷ್ಟವಾಗಿ ತಿಳಿಸುತ್ತದೆ. ವೈರಸ್ ಸೋಂಕಿಗೆ ಹೆಚ್ಚು ಒಳಗಾಗುವವ ಆರೋಗ್ಯ ಕಾರ್ಯಕರ್ತರಲ್ಲೂ ಈ ಲಸಿಕೆಗಳು ವೈರಸ್ ವಿರುದ್ಧದ ರಕ್ಷಣೆ ನೀಡಿದೆ. ಭಾರತವು ಉತ್ತಮವಾದ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ, ಆದರೆ ಈಗ ನಿಜವಾಗಿಯೂ ಬೇಕಾಗಿರುವುದು ತಳಮಟ್ಟದವರೆಗೂ ಲಸಿಕೆಯನ್ನು ವಿತರಣೆಯನ್ನು ಮಾಡುವುದು. ಜೀವನ ಮತ್ತು ಜೀವನೋಪಾಯ ಎರಡನ್ನೂ ರಕ್ಷಿಸುವ ಎಲ್ಲಾ ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ,'' ಎಂದು ಅಭಿಪ್ರಾಯಿಸಿದ್ದಾರೆ.

ಖಾಸಗಿ ಆಸ್ಪತ್ರೆಗೆ 1.29 ಕೋಟಿ ಲಸಿಕೆ ದೊರೆತರೂ 22 ಲಕ್ಷ ಮಾತ್ರ ಬಳಕೆ!ಖಾಸಗಿ ಆಸ್ಪತ್ರೆಗೆ 1.29 ಕೋಟಿ ಲಸಿಕೆ ದೊರೆತರೂ 22 ಲಕ್ಷ ಮಾತ್ರ ಬಳಕೆ!

Recommended Video

Weather forecast ಧಾರಾಕಾರ ಮಳೆ ಜನ ಜೀವನ ಅಸ್ತವ್ಯಸ್ತ !! | Oneindia Kannada
ಲಸಿಕೆ ಪಡೆದ ಬಳಿಕ ಕೋವಿಡ್‌ ಬಂದ ಆರೋಗ್ಯ ಕಾರ್ಯಕರ್ತರೆಷ್ಟು?

ಲಸಿಕೆ ಪಡೆದ ಬಳಿಕ ಕೋವಿಡ್‌ ಬಂದ ಆರೋಗ್ಯ ಕಾರ್ಯಕರ್ತರೆಷ್ಟು?

ವರದಿಯಲ್ಲಿನ ಮಾಹಿತಿಯ ಪ್ರಕಾರ, 12,248 ಆರೋಗ್ಯ ಕಾರ್ಯಕರ್ತರಲ್ಲಿ, 7,170 (ಶೇಕಡಾ 58.5) ಜನರು ಕೋವಿಡ್ -19 ಲಸಿಕೆಯ ಮೊದಲ ಪ್ರಮಾಣವನ್ನು ಪಡೆದಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ 3,650 (ಶೇಕಡಾ 29.8) ಎರಡನೇ ಪ್ರಮಾಣವನ್ನು ಪಡೆದಿದ್ದಾರೆ. ಏತನ್ಮಧ್ಯೆ, ಕನಿಷ್ಠ 5,078 ಆರೋಗ್ಯ ಕಾರ್ಯಕರ್ತರು (ಶೇಕಡಾ 41.5) ಇನ್ನೂ ಲಸಿಕೆ ಪಡೆದಿಲ್ಲ. ವ್ಯಾಕ್ಸಿನೇಷನ್ ಕಾರ್ಯಕ್ರಮದ ಪ್ರಾರಂಭದಿಂದ ಈವರೆಗೆ ಕನಿಷ್ಠ 506 ಆರೋಗ್ಯ ಕಾರ್ಯಕರ್ತರು SARS-CoV-2 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಲಸಿಕೆಯ ಮೊದಲ ಪ್ರಮಾಣವನ್ನು ಪಡೆದ 7,170 ಜನರಲ್ಲಿ, 184 (ಶೇಕಡಾ 2.6) ಆರೋಗ್ಯ ಕಾರ್ಯಕರ್ತರಿಗೆ ಪಾಸಿಟಿವ್‌ ಆಗಿದೆ. ಮೊದಲ ಡೋಸ್ ಪಡೆದ ದಿನ ಹಾಗೂ ಕೊರೊನಾ ದೃಢಪಟ್ಟ ದಿನದ ನಡುವೆ ಸರಾಸರಿ ದಿನ 44 ದಿನಗಳು ಆಗಿದೆ. 3,650 ಆರೋಗ್ಯ ಕಾರ್ಯಕರ್ತರಲ್ಲಿ ಒಟ್ಟು 72 (ಶೇಕಡಾ 2) ಎರಡನೇ ಡೋಸ್ ನಂತರ ಪಾಸಿಟಿವ್‌ ಆಗಿದೆ. ಎರಡನೇ ಡೋಸ್ ಪಡೆದ ದಿನ ಹಾಗೂ ಕೊರೊನಾ ದೃಢಪಟ್ಟ ದಿನದ ನಡುವೆ ಸರಾಸರಿ ದಿನ 20 ದಿನಗಳು ಆಗಿದೆ.

(ಒನ್‌ಇಂಡಿಯಾ ಸುದ್ದಿ)

English summary
In a reassurance to many who have received the Covid-19 vaccination, an evidence-based study released by Fortis Healthcare highlights that 92 per cent of fully vaccinated healthcare workers, amongst those who acquired Covid-19 infection post-vaccination, developed only mild Covid-19 infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X