ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅರೇಂಜ್ಡ್ ಮದುವೆಗಳಲ್ಲಿ ಶೇ.96ರಷ್ಟು ಯುವತಿಯರು ತಿರಸ್ಕೃತಗೊಳ್ಳಲು ಕಾರಣವೇನು?

|
Google Oneindia Kannada News

ನವದೆಹಲಿ,ಫೆಬ್ರವರಿ 26:ಭಾರತದಲ್ಲಿ ನಡೆಯುತ್ತಿರುವ ಅರೇಂಜ್ಡ್ ಮದುವೆಗಳಲ್ಲಿ ಶೇ.96ರಷ್ಟು ಯುವತಿಯರು ತಮ್ಮ ಮುಖದ ಬಣ್ಣದಿಂದಾಗಿ ತಿರಸ್ಕೃತಗೊಳ್ಳುತ್ತಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ವಧು ನೋಡಲು ಬೆಳ್ಳಗಿರಬೇಕು, ಸುಂದರವಾಗಿರಬೇಕು ಎಂಬುದು ಅರೇಂಜ್ಡ್ ಮದುವೆಗಳಲ್ಲಿ ವರನ ಕಡೆಯವರು ಕೇಳುವ ಮೊದಲ ಬೇಡಿಕೆಯಾಗಿದೆ.

ಸರಳ ವಿವಾಹದ ಸಪ್ತಪದಿ ಯೋಜನೆ ಯಶಸ್ವಿ; ಶ್ರೀನಿವಾಸ ಪೂಜಾರಿ ಸರಳ ವಿವಾಹದ ಸಪ್ತಪದಿ ಯೋಜನೆ ಯಶಸ್ವಿ; ಶ್ರೀನಿವಾಸ ಪೂಜಾರಿ

ತೆಳ್ಳಗಿರಬೇಕು,ಎತ್ತರವಿರಬೇಕು,ಬೆಳ್ಳಗೆ ಇರಬೇಕು ಎನ್ನುವ ಬೇಡಿಕೆಯನ್ನು ಮೊದಲು ಮುಂದಿಡುತ್ತಾರೆ.'ಇಂಡಿಯನ್ ಬ್ಯೂಟಿ ಟೆಸ್ಟ್ ಸ್ಟಡಿ' ಒಟ್ಟು 1057 ಮಂದಿ ಯುವತಿಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು,ಶೇ.78ರಷ್ಟು ಯುವತಿಯರು ನೋಡಲು ರೂಪವಂತರಲ್ಲ ಎನ್ನುವ ಕಾರಣಕ್ಕೆ ತಿರಸ್ಕೃತಗೊಂಡಿರುವುದಾಗಿ ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಭಾರತದಲ್ಲ ಶೇ.90ರಷ್ಟು ಮದುವೆ ಅರೇಂಜ್ಡ್‌ ಆಗಿದೆ.

90% Indian Women Face Rejection Due To Looks While Matchmaking For Arranged Marriage

ಯಾವುದೇ ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳು, ದಲ್ಲಾಳಿಗಳು ಯಾರ ಬಳಿಯೇ ಆದರೂ ಮೊದಲು ಹುಡುಗಿ ಬಿಳಿ ಇರಬೇಕು, ನೋಡಲು ಸುಂದರವಾಗಿರಬೇಕು, ಉದ್ದ ಕೂದಲಿರಬೇಕು, ಮೂಗು ಉದ್ದವಿರಬೇಕು, ಮುಖ ವಿ ಆಕಾರದಲ್ಲಿ ಖಂಡಿತವಾಗಿಯೂ ಇರುವುದು ಬೇಡ ಎಂದು ಹೇಳುತ್ತಾರೆ.

ಗಿಡ್ಡ ಕೂದಲಿದ್ದರೂ ಒಪ್ಪಿಕೊಂಡು 1 ಸಾವಿರದಲ್ಲಿ ಒಂದೋ ಎರಡೋ ಮದುವೆ ನಡೆಯಬಹುದು.ಆದರೆ ಶಾದಿ.ಕಾಮ್ ಸಿಇಒ ಅನುಪಮ್ ಮಿತ್ತಲ್ ಮಾತನಾಡಿ, ಮದುವೆ ಎನ್ನುವುದು ಜನ್ಮ ಜನ್ಮದ ಅನುಬಂಧ ಅದು ಬ್ಯೂಟಿ ಸ್ಪರ್ಧೆಯಲ್ಲ. ಇಂತಹ ಬೇಡಿಕೆಗಳಿಂದಾಗಿ ಶೇ.58ರಷ್ಟು ಯುವತಿಯರು ತೂಕ ಕಡಿಮೆ ಮಾಡಲು ಜಿಮ್‌ಗೆ ನೋಂದಣಿ ಮಾಡಿಸಿದ್ದಾರೆ ಎಂದರು.

English summary
The quest for a ‘gori’ (fair) bride has been one of the most enduring and demeaning aspects of the arranged marriage process. The pressure to conform to the ‘slim / tall / fair’ parameter leaves many women with permanent body image issues, finds a recent study by a beauty brand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X