ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

90 ಪಾಕಿಸ್ತಾನಿ ಹಿಂದೂಗಳಿಗೆ ಭಾರತೀಯ ಪೌರತ್ವ

By Sachhidananda Acharya
|
Google Oneindia Kannada News

ಅಹಮದಾಬಾದ್, ಜೂನ್ 22: ಪಾಕಿಸ್ತಾನದಿಂದ ವರ್ಷದ ಹಿಂದೆ ವಲಸೆ ಬಂದು ಅಹಮದಾಬಾದ್ ನಲ್ಲಿ ನೆಲೆಸಿದ್ದ 90 ಹಿಂದೂಗಳಿಗೆ ಭಾರತೀಯ ಪೌರತ್ವ ನೀಡಲಾಗಿದೆ.

ಇಂದು ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿಕ್ರಾಂತ್ ಪಾಂಡೆ ಇವರಿಗೆಲ್ಲಾ ಭಾರತೀಯ ಪೌರತ್ವ ನೀಡಿದರು. ಸಿಟಿಜನ್ ಶಿಪ್ ಕಾಯ್ದೆ 1955ರ ಅನ್ವಯ ಪೌರತ್ವ ನೀಡಲಾಗಿದೆ.

ಪಾಕಿಸ್ತಾನದ ಮುಸ್ಲಿಮೇತರ ಮತದಲ್ಲಿ ಶೇ.30 ರಷ್ಟು ಹೆಚ್ಚಳಪಾಕಿಸ್ತಾನದ ಮುಸ್ಲಿಮೇತರ ಮತದಲ್ಲಿ ಶೇ.30 ರಷ್ಟು ಹೆಚ್ಚಳ

2016ರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಾದ ಹಿಂದೂ ಮತ್ತು ಸಿಖ್ಖರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ವಿಕೇಂದ್ರಿಕರಣಗೊಳಿಸಿತ್ತು. ಇದರ ಅನ್ವಯ ಅಹಮದಾಬಾದ್, ಕಛ್ ಮತ್ತು ಗಾಂಧಿನಗರದ ಜಿಲ್ಲಾಧಿಕಾರಿಗಳಿಗೆ ಪೌರತ್ವ ನೀಡುವ ಅಧಿಕಾರವನ್ನು ನೀಡಲಾಯಿತು.

90 Hindus from Pakistan get Indian citizenship

ಇಂದಿನ 90 ಜನ ಸೇರಿ 2016ರ ನಂತರ ಒಟ್ಟು 320 ಪಾಕಿಸ್ತಾನಿಯರಿಗೆ ಅಹಮದಾಬ್ ಜಿಲ್ಲಾಧಿಕಾರಿ ಭಾರತೀಯ ಪೌರತ್ವ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ಅತೀ ಹೆಚ್ಚು ಪಾಕಿಸ್ತಾನಿ ಹಿಂದೂಗಳಿಗೆ ಪೌರತ್ವ ನೀಡಿದ ಪಟ್ಟಿಯಲ್ಲಿ ಅಹಮದಾಬಾದ್ ಮೊದಲ ಸ್ಥಾನದಲ್ಲಿದೆ.

ಭಾರತೀಯ ಪೌರತ್ವ ಪಡೆದಿರುವ ಇವರೆಲ್ಲಾ ಮತದಾರರಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಪಾಸ್ಪೋರ್ಟ್, ಆಧಾರ್ ಕಾರ್ಡ್ ಗಳಿಗೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಭಾರತೀಯ ಪೌರತ್ವ ಪಡೆದುಕೊಂಡ ಪಾಕಿಸ್ತಾನಿ ಹಿಂದೂಗಳು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

English summary
As many as 90 Hindus from Pakistan, who had migrated to the city years ago, were awarded Indian citizenship by the district authorities at a function held here today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X