ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ತನಿಖೆಗೆ ನಿರಾಕರಿಸಿದ ದೇಶದ 9 ರಾಜ್ಯಗಳ ಪಟ್ಟಿ

|
Google Oneindia Kannada News

ನವದೆಹಲಿ, ಮಾರ್ಚ್ 24; ಕೇಂದ್ರ ತನಿಖಾ ದಳ ( ಸಿಬಿಐ) ಪ್ರಕರಣಗಳ ತನಿಖೆಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು 9 ರಾಜ್ಯಗಳು ಹಿಂಪಡೆದಿವೆ. ರಾಜ್ಯಸಭೆಗೆ ಸರ್ಕಾರ ಈ ಕುರಿತು ಮಾಹಿತಿ ನೀಡಿದೆ.

ಗುರುವಾರ ರಾಜ್ಯಸಭೆ ಕಲಾಪದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಕುರಿತು ಮಾಹಿತಿ ನೀಡಿದರು. 2015 ರಿಂದ 2022ರ ತನಕ 9 ರಾಜ್ಯಗಳು ಸಾಮಾನ್ಯ ಒಪ್ಪಿಗೆಯನ್ನು ವಾಪಸ್ ಪಡೆದಿವೆ.

ಮಿಜೋರಾಂ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಜಾರ್ಖಂಡ್‌, ಪಂಜಾಬ್, ಮೇಘಾಲಯ ರಾಜ್ಯಗಳು ಒಪ್ಪಿಗೆಯನ್ನು ವಾಪಸ್ ಪಡೆದಿವೆ ಎಂದು ರಾಜ್ಯಸಭೆಗೆ ಸರ್ಕಾರ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.

ಎನ್ಎಸ್ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್ ಬಂಧಿಸಿದ ಸಿಬಿಐಎನ್ಎಸ್ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್ ಬಂಧಿಸಿದ ಸಿಬಿಐ

9 States Withdrawn General Consent To CBI To Probe Case

ಸುಪ್ರೀಂಕೋರ್ಟ್‌ಗೆ ಮಾಹಿತಿ; ಸಿಬಿಐ 2021ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ಗೆ ಮಾಹಿತಿಯೊಂದನ್ನು ನೀಡಿತ್ತು. ಅದರಲ್ಲಿ ಸಿಬಿಐ ತನಿಖೆಗೆ ಈ ಹಿಂದೆ ನೀಡಿದ್ದ ಅನುಮೋದನೆಯನ್ನು ರಾಜ್ಯಗಳು ವಾಪಸ್ ಪಡೆದಿವೆ. ಇದರಿಂದಾಗಿ 150 ಮನವಿಗಳು ರಾಜ್ಯದ ಮುಂದೆ ಬಾಕಿ ಇದೆ ಎಂದು ಹೇಳಿತ್ತು.

23,000 ಕೋಟಿ ವಂಚನೆ: ಎಬಿಜಿ ಶಿಪ್‌ಯಾರ್ಡ್‌ನ ಮೇಲಾಧಿಕಾರಿಗಳಿಗೆ ಸಿಬಿಐ ಲುಕ್‌ಔಟ್ ನೋಟಿಸ್ 23,000 ಕೋಟಿ ವಂಚನೆ: ಎಬಿಜಿ ಶಿಪ್‌ಯಾರ್ಡ್‌ನ ಮೇಲಾಧಿಕಾರಿಗಳಿಗೆ ಸಿಬಿಐ ಲುಕ್‌ಔಟ್ ನೋಟಿಸ್

ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ-1946 ಸೆಕ್ಷನ್ 6ರ ಅಡಿ ರಾಜ್ಯದ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಕೇಂದ್ರಿಯ ತನಿಖಾ ದಳ (ಸಿಬಿಐ)ಗೆ ನೀಡಿದ ಅನುಮತಿಯನ್ನು ವಾಪಸ್ ಪಡೆಯಲು ಅವಕಾಶವಿದೆ.

 ಅಂಕಿತ್ ಬಯೋ ಫ್ಯೂಯಲ್ ಕಂಪನಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲು ಅಂಕಿತ್ ಬಯೋ ಫ್ಯೂಯಲ್ ಕಂಪನಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲು

ಡಿಎಸ್‌ಪಿಇ ಕಾಯ್ದೆಯ ಸೆಕ್ಷನ್ 6ರ ಅನ್ವಯ ದೆಹಲಿಯ ವಿಶೇಷ ಪೊಲೀಸ್ ದಳದ ಸದಸ್ಯರು ರಾಜ್ಯ ಸರ್ಕಾರದ ಅನುಮತಿ ಪಡೆಯದೇ ರಾಜ್ಯದ ಯಾವುದೇ ಮೂಲೆಯಲ್ಲೂ ಕಾಯ್ದೆಯ ಅನ್ವಯ ತಮ್ಮ ಅಧಿಕಾರ ವ್ಯಾಪ್ತಿಯನ್ನು ಬಳಸಲಾಗದು.

Recommended Video

Dr Sudhakar ಆಯೋಜಿಸಿದ್ದ ಔಚಣಕ್ಕೆ BJPಯವರೇ ಇಲ್ವ | Oneindia Kannada

ಈ ಕಾಯ್ದೆಯ ಅನ್ವಯ ರಾಜ್ಯದಲ್ಲಿ ಸಿಬಿಐ ತನಿಖೆ ನಡೆಸಲು ಆಯಾ ರಾಜ್ಯಗಳ ಒಪ್ಪಿಗೆ ಅಗತ್ಯ. ಸಿಬಿಐ ಕೇಂದ್ರಾಡಳಿತ ಪ್ರದೇಶ, ಕೇಂದ್ರದ ಸಂಸ್ಥೆಗಳನ್ನು ತನಿಖೆ ಮಾಡಬಹುದು.

English summary
In a written reply to Rajya Sabha union government said that 9 states have withdrawn general consent to the CBI to investigate cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X