9/11 ದಾಳಿಯ ಮಾಸ್ಟರ್ ಮೈಂಡ್ ಒಸಾಮ ಬಿನ್ ಲಾಡೆನ್

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 11: ಈ ದಿನ (ಸೆಪ್ಟೆಂಬರ್ 11) ಬಂದರೆ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿ ನೆನಪಾದ ರೀತಿಯಲ್ಲೇ ಒಸಾಮ ಬಿನ್ ಲಾಡೆನ್ ಹಾಗೂ ಆತ ಸ್ಥಾಪಿಸಿದ ಅಲ್ ಕೈದಾ ಸಂಘಟನೆ ನೆನಪಾಗುತ್ತದೆ. ಆ ದಾಳಿಯ ನಂತರ ಭಯೋತ್ಪಾದನೆ ಹಾಗೂ ಭಯೋತ್ಪಾದಕರ ವಿರುದ್ಧದ ದೃಷ್ಟಿಕೋನವೇ ಬದಲಾಯಿತು.

ಅಂಥ ಬದಲಾವಣೆಗೆ ಕಾರಣನಾದ, ಆ ನಂತರ ಅಮೆರಿಕ ಸೇನಾ ಪಡೆಯಿಂದ ಬೇಟೆಯಾದ ಒಸಾಮ ಬಿನ್ ಲಾಡೆನ್ ನ ಹಿನ್ನೆಲೆ, ಬದುಕು ಮತ್ತಿತರ ಮಾಹಿತಿಗಳನ್ನು ಇನ್ನೊಮ್ಮೆ ನೆನಪಿಸಿಕೊಳ್ಳುವ ಸಮಯವಿದು. ಲಾಡೆನ್ ಹುಟ್ಟಿದ್ದು ಮಾರ್ಚ್ 10, 1957ರಲ್ಲಿ. ಸೌದಿ ಅರೇಬಿಯಾದ ರಿಯಾದ್ ನಲ್ಲಿ.

ಅಮೆರಿಕ ಬೇಟೆಗೆ ಶೀಘ್ರವೇ ಸಜ್ಜಾಗಲಿದ್ದಾನೆ ಬಿನ್ ಲಾಡೆನ್ ಪುತ್ರ?

ಆತನ ಪೋಷಕರಿಗೆ ಐವತ್ತೆರಡು ಮಕ್ಕಳು. ಆ ಪೈಕಿ ಲಾಡೆನ್ ಹದಿನೇಳನೇಯವನು. ಆತನ ತಂದೆ ಮೊಹಮ್ಮದ್ ಅವಾದ್ ಬಿನ್ ಲಾಡೆನ್ ಆಗರ್ಭ ಶ್ರೀಮಂತರು. ಅವರಿಗಿದ್ದ ಕೆಲಸದೆಡೆಗಿನ ಶ್ರದ್ಧೆಯಿಂದ ಲಾಡೆನ್ ಪ್ರಭಾವಿತನಾಗಿದ್ದ. ಅಲ್ಲಿನ ರಾಜಕುಟುಂಬದ ಸದಸ್ಯರು ಮದೀನಾದಲ್ಲಿ ಕೆಲವು ವಿಸ್ತರಣೆ ಕೆಲಸಗಳ ಗುತ್ತಿಗೆ ನೀಡಿದ್ದರು.

ಸೌದಿಯ ಶ್ರೀಮಂತ ಕಟ್ಟಡ ನಿರ್ಮಾತೃವಿನ ಮಗ

ಸೌದಿಯ ಶ್ರೀಮಂತ ಕಟ್ಟಡ ನಿರ್ಮಾತೃವಿನ ಮಗ

ಸೌದಿಯ ಶ್ರೀಮಂತ ಕಟ್ಟಡ ನಿರ್ಮಾತೃವಿನ ಮಗ ಮುಂದೊಂದು ದಿನ ಜಗತ್ತಿನ ಅತಿ ದೊಡ್ಡ ವಾಣಿಜ್ಯ ಕಟ್ಟಡವನ್ನು ಧ್ವಂಸ ಮಾಡುತ್ತಾನೆ ಎಂಬುದು ಯಾರ ಊಹೆಯಲ್ಲೂ ಇರಲಿಲ್ಲ. ಲಾಡೆನ್ ನ ಸಹೋದರರು ಪಶ್ಚಿಮದಲ್ಲಿ ಶಿಕ್ಷಣ ಪಡೆದು, ತಂದೆಯ ಕಂಪೆನಿಗೆ ಸೇರ್ಪಡೆಯಾದರು. ಆದರೆ ಒಸಾಮ ತನ್ನ ಮನೆಯ ಹತ್ತಿರವೇ ಇರಲು ನಿರ್ಧರಿಸಿದ್ದ.

ಪ್ರತಿ ನಿರ್ಧಾರವೂ ಇಸ್ಲಾಂನಿಂದ ಪ್ರಭಾವಿತವಾಗಿತ್ತು

ಪ್ರತಿ ನಿರ್ಧಾರವೂ ಇಸ್ಲಾಂನಿಂದ ಪ್ರಭಾವಿತವಾಗಿತ್ತು

ಜಿಡ್ಡಾದಲ್ಲಿ ಆತನ ಶಾಲೆ ಶಿಕ್ಷಣ ಅಭ್ಯಾಸ ಆಯಿತು. ಚಿಕ್ಕ ವಯಸ್ಸಿಗೆ ಮದುವೆಯಾದ. ಇತರ ಸೌದಿ ಪುರುಷರ ಹಾಗೆ ಮುಸ್ಲಿಂ ಬ್ರದರ್ ಹುಡ್ ಸೇರಿದ. ಇಸ್ಲಾಂ ಅನ್ನೋದು ಆತನ ಪಾಲಿಗೆ ಧರ್ಮವಷ್ಟೇ ಆಗಿರಲಿಲ್ಲ. ಆತನ ಜೀವನದ ಪ್ರತಿ ನಿರ್ಧಾರವೂ ಇಸ್ಲಾಂನಿಂದ ಪ್ರಭಾವಿತವಾಗಿತ್ತು.

ಮಾರ್ಗದರ್ಶಕ ಅಬ್ದುಲ್ಲಾ ಅಜಮ್ ಜತೆಗೆ ಆಫ್ಘಾನಿಸ್ತಾನಕ್ಕೆ

ಮಾರ್ಗದರ್ಶಕ ಅಬ್ದುಲ್ಲಾ ಅಜಮ್ ಜತೆಗೆ ಆಫ್ಘಾನಿಸ್ತಾನಕ್ಕೆ

ಅದು 1979ರ ಸಮಯ. ಸೋವಿಯತ್ ವಿರುದ್ಧದ ಯುದ್ಧ ನಡೆಯುತ್ತಿದ್ದ ಆಫ್ಘಾನಿಸ್ತಾನಕ್ಕೆ ತನ್ನ ಮಾರ್ಗದರ್ಶಕ ಅಬ್ದುಲ್ಲಾ ಅಜಮ್ ಜತೆಗೆ ತೆರಳಿದೆ. ಇಡೀ ಜಗತ್ತು ಇಸ್ಲಾಮಿಕ್ ರಾಷ್ಟ್ರ ಎಂದಾಗಬೇಕು ಎಂಬ ಕಾರಣಕ್ಕೆ ಮುಸ್ಲಿಮರು 'ಜಿಹಾದ್'ನಲ್ಲಿ ಪಾಲ್ಗೊಳ್ಳಬೇಕು ಎಂಬುದು ಅಜಮ್ ನ ನಂಬಿಕೆಯಾಗಿತ್ತು.

ಮಧ್ಯಪ್ರಾಚ್ಯದ ಯುವಕರನ್ನು ಆಫ್ಘಾನ್ ಯುದ್ಧಕ್ಕೆ ಸೆಳೆಯತೊಡಗಿದರು

ಮಧ್ಯಪ್ರಾಚ್ಯದ ಯುವಕರನ್ನು ಆಫ್ಘಾನ್ ಯುದ್ಧಕ್ಕೆ ಸೆಳೆಯತೊಡಗಿದರು

ಅಜಮ್ ಹಾಗೂ ಲಾಡೆನ್ ಇಬ್ಬರೂ ಸೇರಿ ತಮ್ಮ ಸಂಪರ್ಕಗಳ ಮೂಲಕ ಮಧ್ಯಪ್ರಾಚ್ಯದ ಯುವಕರನ್ನು ಆಫ್ಘಾನ್ ಯುದ್ಧಕ್ಕೆ ಸೆಳೆಯತೊಡಗಿದರು. ಆ ಹೊತ್ತಿಗೆ ಅವರದೇ ಆದ ಮಖ್ತಬ್ ಅಲ್-ಖಿದ್ಮತ್ ಎಂಬುದೊಂದು ಸಂಘಟನೆ ಮಾಡಿಕೊಂಡಿದ್ದರು. ಆ ಮೂಲಕ ಜಾಗತಿಕ ಮಟ್ಟದಲ್ಲಿ ನೇಮಕ ಜಾಲವನ್ನು ಶುರು ಮಾಡಿಕೊಂಡರು. ಬ್ರೂಕ್ಲಿನ್ ನ ಹೃದಯ ಭಾಗದಲ್ಲೇ ಅವರದೊಂದು ಕಚೇರಿ ಇತ್ತು.

1988ರಲ್ಲಿ ಅಲ್ ಕೈದಾ ಆರಂಭ

1988ರಲ್ಲಿ ಅಲ್ ಕೈದಾ ಆರಂಭ

ಆದರೆ, ಮಿಲಿಟರಿ ರೀತಿ ಅಭಿಯಾನ ನಡೆಸುವ ಹೊರತಾಗಿ ಒಸಾಮನಿಗೆ ಭಯೋತ್ಪಾದನೆ ಕೃತ್ಯಗಳನ್ನು ಸಾಂಕೇತಿಕವಾಗಿ ಸಂಘಟಿಸುವುದರಲ್ಲಿ ನಂಬಿಕೆ ಇತ್ತು. ಆ ಕಾರಣಕ್ಕೆ ಆತ 1988ರಲ್ಲಿ ಅಲ್ ಕೈದಾ ಆರಂಭಿಸಿದ. ಈ ನಿರ್ಧಾರದ ನಂತರ ಸೌದಿಯ ರಾಜ ಕುಟುಂಬ ಆತನನ್ನು ಸುಮ್ಮನಾಗಿಸಲು ಬಹಳ ಪ್ರಯತ್ನ ಪಟ್ಟಿತು.

ಯೆಮೆನ್ ನ ಆಡೆನ್ ನಲ್ಲಿರುವ ಹೋಟೆಲ್ ಮೇಲೆ ಮೊದಲ ದಾಳಿ

ಯೆಮೆನ್ ನ ಆಡೆನ್ ನಲ್ಲಿರುವ ಹೋಟೆಲ್ ಮೇಲೆ ಮೊದಲ ದಾಳಿ

ಆತನ ಪಾಸ್ ಪೋರ್ಟ್ ನ ಕೂಡ ವಶಪಡಿಸಿಕೊಂಡಿತು. ಇದರಿಂದ ಮತ್ತಷ್ಟು ಕೆರಳಿದ ಅವನು ಮೊದಲ ಬಾಂಬ್ ದಾಳಿಯನ್ನು ಯೆಮೆನ್ ನ ಆಡೆನ್ ನಲ್ಲಿರುವ ಹೋಟೆಲ್ ಮೇಲೆ ನಡೆಸಿದ. ಸೋಮಾಲಿಯಾಕ್ಕೆ ತೆರಳುವ ಮಾರ್ಗ ಮಧ್ಯೆ ಅಮೆರಿಕದ ಶಾಂತಿ ಪಡೆ ಉಳಿದುಕೊಂಡಿದ್ದ ಸ್ಥಳ ಅದಾಗಿತ್ತು. ಆ ದಾಳಿಯಲ್ಲಿ ಯಾವುದೇ ಸೈನಿಕರು ಸಾವನ್ನಪ್ಪಲಿಲ್ಲ ಎಂದು ವರದಿಯಾಯಿತು.

ದೊಡ್ಡ ವಾಣಿಜ್ಯ ಕೇಂದ್ರದ ಕುತ್ತಿಗೆಗೆ ಡಿಕ್ಕಿ

ದೊಡ್ಡ ವಾಣಿಜ್ಯ ಕೇಂದ್ರದ ಕುತ್ತಿಗೆಗೆ ಡಿಕ್ಕಿ

ಸೆಪ್ಟೆಂಬರ್ 11, 2001ರಲ್ಲಿ ಎರಡು ಪ್ರಯಾಣಿಕ ವಿಮಾನಗಳು ವರ್ಲ್ಡ್ ಟ್ರೇಡ್ ಸೆಂಟರ್ ಎಂಬ ಅಮೆರಿಕದಲ್ಲಿರುವ ಅತಿ ದೊಡ್ಡ ವಾಣಿಜ್ಯ ಕೇಂದ್ರದ ಕುತ್ತಿಗೆಗೆ ಡಿಕ್ಕಿ ಹೊಡೆದವು. ಅದರ ಪರಿಣಾಮವಾಗಿ ಕೆಲವೇ ಗಂಟೆಗಳಲ್ಲಿ ಅವಳಿ ಕಟ್ಟಡಗಳು ನೆಲಕ್ಕುರುಳಿದವು. ಅದಾಗಿ ಕೆಲವೇ ಗಂಟೆಗೆ ಆಗಿನ ಅಮೆರಿಕ ಅಧ್ಯಕ್ಷ ಹೇಳಿಕೆ ಕೊಟ್ಟರು. ಇದು ಭಯೋತ್ಪಾದನಾ ಕೃತ್ಯ. ತಪ್ಪಿತಸ್ಥರನ್ನು ಶಿಕ್ಷಿಸುತ್ತೇವೆ ಎಂದರು.

ಅಬೋಟಾಬಾದ್ ನಲ್ಲಿ ಒಸಾಮ ಬಿನ್ ಲಾಡೆನ್ ಫಿನಿಷ್

ಅಬೋಟಾಬಾದ್ ನಲ್ಲಿ ಒಸಾಮ ಬಿನ್ ಲಾಡೆನ್ ಫಿನಿಷ್

ಅಂತಿಮವಾಗಿ ಮೇ 2, 2011ರಂದು ಅಮೆರಿಕದ ನೇವಿ ಸೀಲ್ಸ್ ತಂಡವು ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಒಸಾಮ ಬಿನ್ ಲಾಡೆನ್ ನ ಹೊಡೆದು ಮುಗಿಸಿತು.ಆತನ ಶವವನ್ನು ಸಮುದ್ರದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾಗಿ ಮಾಹಿತಿ ನೀಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Osama Bin Laden- founder of Al Qaeda, master mind of 9/11 America world trade centre. Today (September 11) attack anniversary. On this occasion here is the life histrory of Osama Bin Laden.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ