ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಆರು ತಿಂಗಳಲ್ಲಿಯೇ ಗರಿಷ್ಠ ದೈನಂದಿನ ಕೋವಿಡ್ ಪ್ರಕರಣ ದಾಖಲು

|
Google Oneindia Kannada News

ನವದೆಹಲಿ, ಏಪ್ರಿಲ್ 3: ದೇಶದಲ್ಲಿ ಶನಿವಾರ ದಾಖಲಾದ ದೈನಂದಿನ ಕೋವಿಡ್-19 ಪ್ರಕರಣ ಕಳೆದ ಆರು ತಿಂಗಳಲ್ಲಿಯೇ ಅತ್ಯಧಿಕವಾಗಿದೆ. ಸೆಪ್ಟೆಂಬರ್ 20ರಂದು ದೇಶದಲ್ಲಿ 92,605 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಅದರ ಬಳಿಕ ಶನಿವಾರ ದಾಖಲಾದ 89,129 ಪ್ರಕರಣಗಳು ಅತ್ಯಧಿಕವೆನಿಸಿದೆ. ಕಳೆದ ಕೆಲವು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ದಾಖಲಾದ ಪ್ರಕರಣಗಳನ್ನೂ ಮೀರಿಸುವ ಭೀತಿ ಉಂಟಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 89,129 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. 44,202 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು ಸಾವಿನ ಪ್ರಮಾಣದಲ್ಲಿಯೂ ಭಾರಿ ಏರಿಕೆಯಾಗಿದ್ದು, 714 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

'ಭಾರತ ಕೋವಿಡ್-19 ಲಸಿಕೆ ರಫ್ತಿನ ಮೇಲೆ ನಿಷೇಧ ಹೇರಿಲ್ಲ''ಭಾರತ ಕೋವಿಡ್-19 ಲಸಿಕೆ ರಫ್ತಿನ ಮೇಲೆ ನಿಷೇಧ ಹೇರಿಲ್ಲ'

ದೇಶದಲ್ಲಿ ಇದುವರೆಗೂ ಒಟ್ಟು 1,23,92,260 ಪ್ರಕರಣಗಳು ವರದಿಯಾಗಿವೆ. ಒಟ್ಟು 1,15,69,241 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 6,58,909 ಸಕ್ರಿಯ ಪ್ರಕರಣಗಳಿವೆ. ಒಟ್ಟು 1,64,110 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೂ ಒಟ್ಟು 7,30,54,295 ಡೋಸ್ ಲಸಿಕೆಗಳನ್ನು ನೀಡಲಾಗಿದೆ.

89,129 Fresh Covid-19 Cases, 714 Deaths Reported, Highest Daily Cases Since September

ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಏಪ್ರಿಲ್ 9ರವರೆಗೂ ಪುಣೆಯಲ್ಲಿನ ಎಲ್ಲ ಧಾರ್ಮಿಕ ಕೇಂದ್ರಗಳನ್ನೂ ಮುಚ್ಚಲು ಅದೇಶಿಸಲಾಗಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 47,827 ಹೊಸ ಪ್ರಕರಣ ಮತ್ತು 202 ಸಾವು ವರದಿಯಾಗಿವೆ. ಕರ್ನಾಟಕದಲ್ಲಿ 4,991 ಹೊಸ ಪ್ರಕರಣಗಳು ವರದಿಯಾಗಿದೆ.

English summary
89,129 fresh Covid-19 cases, 714 deaths reported in India, highest daily cases since September 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X