ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

88 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಅವಮಾನಿಸಿದ ಶಿಕ್ಷಕರು

|
Google Oneindia Kannada News

ಅರುಣಾಚಲದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಅವಮಾನಕಾರವಾದ ಕೃತ್ಯವೊಂದು ಅಲ್ಲಿನ ಶಿಕ್ಷಕರಿಂದ ಆಗಿದೆ. ಆ ಶಾಲೆಯ ಮುಖ್ಯೋಪಾಧ್ಯಾಯರ ಬಗ್ಗೆ ಬಯ್ಗುಳವನ್ನು ಬರೆದಿದ್ದರು ಎಂಬ ಕಾರಣಕ್ಕೆ ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ, ಶಿಕ್ಷೆ ನೀಡಿದ ಘಟನೆ ವರದಿಯಾಗಿದೆ.

ಸಮವಸ್ತ್ರ ಧರಿಸಿಲ್ಲವೆಂದು ಕತ್ತರಿಯಿಂದ ಚರ್ಮ ಕತ್ತರಿಸಿದ ವ್ಯವಸ್ಥಾಪಕ!ಸಮವಸ್ತ್ರ ಧರಿಸಿಲ್ಲವೆಂದು ಕತ್ತರಿಯಿಂದ ಚರ್ಮ ಕತ್ತರಿಸಿದ ವ್ಯವಸ್ಥಾಪಕ!

ಹೀಗೆ ಒಟ್ಟು 88 ವಿದ್ಯಾರ್ಥಿನಿಯರಿಗೆ ಶಿಕ್ಷೆ ನೀಡಲಾಗಿದೆ. ತನಿ ಹಪ್ಪದಲ್ಲಿ (ನ್ಯೂ ಸಗಲೀ) ಹೀಗೆ ಅವಮಾನ ಮಾಡಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನವೆಂಬರ್ ಇಪ್ಪತ್ಮೂರನೇ ತಾರೀಕೇ ನಡೆದಿದ್ದು, ಅದಾಗಿ ನಾಲ್ಕು ದಿನದ ನಂತರ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರು ಸ್ಥಳೀಯ ವಿದ್ಯಾರ್ಥಿ ಸಂಘಟನೆಗೆ ಮಾಹಿ ನೀಡಿ, ದೂರು ದಾಖಲಿಸಿದ್ದಾರೆ.

Student

ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾರ್ಥಿನಿಯೊಬ್ಬಳಿಗೆ ಸಂಬಂಧಿಸಿದಂತೆ ಕೆಟ್ಟ ಶಬ್ದ ಬಳಸಿದ ಕಾಗದದ ಚೂರೊಂದು ಮೂವರು ಶಿಕ್ಷಕರಿಗೆ ದೊರೆತಿತ್ತು. ಆ ನಂತರ ಉಳಿದ ವಿದ್ಯಾರ್ಥಿಗಲ ಎದುರು 88 ವಿದ್ಯಾರ್ಥಿನಿಯರಿಗೆ ಬಟ್ಟೆ ತೆಗೆಯುವಂಥ ಶಿಕ್ಷೆ ನೀಡಿದ್ದಾರೆ. ವಿದ್ಯಾರ್ಥಿನಿಯರಿಗೆ ಈ ಶಿಕ್ಷೆ ನೀಡುವ ಮೊದಲು ವಿದ್ಯಾರ್ಥಿನಿಯರ ಪೋಷಕರ ಜತೆಗೆ ಕೂಡ ಮಾತನಾಡಿಲ್ಲ ಎಂದು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.

English summary
88 Students of a girls' school in Arunachal Pradesh were allegedly forced to undress by three teachers as a punishment for writing vulgar words against the head teacher.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X