ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್‌ನ 83 ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಪ್ರಸಕ್ತ ಸಾಲಿನ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಕಾರ್ಯಾಲಯದ 1500 ಉದ್ಯೋಗಿಗಳ ಪೈಕಿ 83 ಮಂದಿ ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ.

ಸೆ. 7ರಂದು ಸಂಸತ್ ಆವರಣದಲ್ಲಿ ಪರೀಕ್ಷೆ ಶಿಬಿರ ಆಯೋಜಿಸಲಾಗಿತ್ತು. ಇದಾಗಿ ಒಂದು ವಾರದ ಬಳಿಕ ಸೆ. 14ರಂದು ಸಂಸತ್ ಅಧಿವೇಶನ ಪ್ರಾರಂಭವಾಗಿತ್ತು. ಸೆ. 7ಕ್ಕೂ ಮುನ್ನ ರಾಜ್ಯಸಭೆಯ 25 ಉದ್ಯೋಗಿಗಳಲ್ಲಿ ಮಾತ್ರ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಆದರೆ ಸಂಸತ್ ಅಧಿವೇಶನ ಶುರುವಾದ ಬಳಿಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಎಂಟೇ ದಿನದಲ್ಲಿ ಏರಿಕೆಯಾಗಿದೆ.

ವಿಪಕ್ಷಗಳ ಬಹಿಷ್ಕಾರದ ನಡುವೆ ರಾಜ್ಯಸಭೆ ಕಲಾಪ ಅಂತ್ಯ: 3 ಕಾರ್ಮಿಕ ಮಸೂದೆಗಳ ಅಂಗೀಕಾರವಿಪಕ್ಷಗಳ ಬಹಿಷ್ಕಾರದ ನಡುವೆ ರಾಜ್ಯಸಭೆ ಕಲಾಪ ಅಂತ್ಯ: 3 ಕಾರ್ಮಿಕ ಮಸೂದೆಗಳ ಅಂಗೀಕಾರ

ಅಧಿವೇಶನದ ಸಂದರ್ಭದಲ್ಲಿ ಸಂಸತ್ ಭವನದ ಒಳಗೆ ಬರುವ ಮಾಧ್ಯಮದ ಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿತ್ತು.

83 Employees Of Parliament Test Positive For Coronavirus

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮತ್ತು ಇತರೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು, ಕೊರೊನಾ ಸೋಂಕಿಗೆ ಒಳಗಾದ ಎಲ್ಲ 83 ಉದ್ಯೋಗಿಗಳಿಗೆ ಎಲ್ಲ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಆಡಳಿತ ವಿಭಾಗಕ್ಕೆ ಸೂಚನೆ ನೀಡಿದರು.

ಕೊರೊನಾ ಇದ್ದರೂ ವಿಧಾನಸಭೆ ಕಲಾಪಕ್ಕೆ ಬಂದರಾ ಪ್ರಿಯಾಂಕ್ ಖರ್ಗೆ?ಕೊರೊನಾ ಇದ್ದರೂ ವಿಧಾನಸಭೆ ಕಲಾಪಕ್ಕೆ ಬಂದರಾ ಪ್ರಿಯಾಂಕ್ ಖರ್ಗೆ?

Recommended Video

Karnataka ಮತ್ತೊಮ್ಮೆ Lockdown ಆಗಲಿದೆಯೇ ? ಕಂಪ್ಲೀಟ್ ವಿವರ | Oneindia Kannada

ಸಂಸತ್ ಅಧಿವೇಶನ ಪ್ರಾರಂಭವಾದ ಬಳಿಕ ರಾಜ್ಯಸಭೆ ಹಾಗೂ ಲೋಕಸಭೆಯ 30ಕ್ಕೂ ಹೆಚ್ಚು ಸಂಸದರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ.

English summary
83 employees of parliament tested positive for covid-19 during monsoon session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X