ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.80 ರಷ್ಟು ಔಷಧಗಳ ಬೆಲೆ ಶೀಘ್ರ ಇಳಿಕೆ ಸಾಧ್ಯತೆ

|
Google Oneindia Kannada News

Recommended Video

ಫಾರ್ಮಾ ಕಂಪನಿಗಳ ವ್ಯವಹಾರಕ್ಕೆ ಇನ್ಮುಂದೆ ಕಡಿವಾಣ ಹಾಕಲಿರುವ ಕೇಂದ್ರ | Oneindia Kannada

ನವದೆಹಲಿ, ನವೆಂಬರ್ 28: ಶೀಘ್ರದಲ್ಲೇ ಶೇ.80ರಷ್ಟು ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಮನಸ್ಸಿಗೆ ಬಂದಂತೆ ಲಾಭಕ್ಕೆ ಔಷಧಗಳನ್ನು ಮಾರಾಟ ಮಾಡುತ್ತಿದ್ದ ಫಾರ್ಮಾ ಕಂಪನಿಗಳ ವ್ಯವಹಾರಕ್ಕೆ ಇನ್ನುಮುಂದೆ ಕಡಿವಾಣ ಬೀಳಲಿದೆ.

ಕ್ಯಾನ್ಸರ್ ಗೆ ಔಷಧ ಕಂಡುಹಿಡಿದ ಮೈಸೂರಿನ ಪ್ರೊ.ರಂಗಪ್ಪ ನೇತೃತ್ವದ ತಂಡಕ್ಯಾನ್ಸರ್ ಗೆ ಔಷಧ ಕಂಡುಹಿಡಿದ ಮೈಸೂರಿನ ಪ್ರೊ.ರಂಗಪ್ಪ ನೇತೃತ್ವದ ತಂಡ

ಬೆಲೆ ನಿಯಂತ್ರಣ ಪರಿಧಿಯಿಂದ ಹೊರಗಿರುವ ಔಷಧಗಳ ಗರಿಷ್ಠ ಶೇ.30ರಷ್ಟು ಮಾತ್ರ ಲಾಭ ನಿಗದಿಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ದೇಶೀಯ ಔಷಧ ಉದ್ಯಮ ಒಪ್ಪಿಗೆ ನೀಡಿದೆ.

80 Percent Of the Drug Prices Is Likely To Drop

ಬೆಎಲೆ ನಿಯಂತ್ರಣ ವ್ಯಾಪ್ತಿಯಲ್ಲಿರುವ ಔಷಧ ಸೇರಿದಂತೆ ಎಲ್ಲಾ ರೀತಿಯ ಔಷಧಗಳಿಗೆ ಶೇ.100ರಷ್ಟು ಲಾಭ ನಿಗದಿಗೊಳಿಸುವ ಪ್ರಸ್ತಾವವೂ ಸಭೆಯಲ್ಲಿ ಚರ್ಚೆಯಾಗಿತ್ತು. ಇದರಿಂದಾಗಿ ಮುಂದಿನ ದಿನಗಳಲ್ಲಿ ಶೇ.80ರಷ್ಟು ಔಷಧಗಳ ಬೆಲೆ ಇಳಿಕೆಯಾಗಲಿದೆ.

ಔಷಧ ನಿಯಂತ್ರಣ ಪ್ರಾಧಿಕಾರ ಹಾಗೂ ಔಷಧ ಉದ್ಯಮದ ಪ್ರತಿನಿಧಿಗಳೊಂದಿಗೆ ಕಳೆದ ವಾರ ನಡೆದ ಸಭೆಯಲ್ಲಿ ಗರಿಷ್ಠ 30ರಷ್ಟು ಮಾತ್ರ ಲಾಭಕ್ಕೆ ಔಷಧಗಳನ್ನು ಮಾರಾಟ ಮಾಡಬೇಕು ಎಂಬ ವಿಚಾರಕ್ಕೆ ಒಪ್ಪಿಗೆ ದೊರೆತಿತ್ತು.

ಶೇ.30ರಷ್ಟು ಲಾಭದ ಮಿತಿಯಲ್ಲಿ ಚಿಲ್ಲರೆ ವ್ಯಾಪಾರಗಳಿಗೆ ಶೇ.20ರಷ್ಟು ಹಾಗೂ ಸಗಟು ವ್ಯಾಪಾರಿಗಳಿಗೆ ಶೇ.10ರಷ್ಟು ಪಾಲು ಸಿಗಲಿದೆ.

English summary
80 Percent Of the Drug Prices Is Likely To Drop Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X