ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ರಾಜ್ಯದಲ್ಲಿ ಆರ್‌ ಮೌಲ್ಯ ಏರಿಕೆ, 'ಕೋವಿಡ್‌ 2 ನೇ ಅಲೆ ಮುಗಿದಿಲ್ಲ': ವಿ.ಕೆ. ಪೌಲ್‌ ಎಚ್ಚರಿಕೆ

|
Google Oneindia Kannada News

ನವದೆಹಲಿ, ಆ.04: ದೇಶದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗವು "ಇನ್ನೂ ಉಲ್ಬಣಗೊಳ್ಳುತ್ತಿದೆ" ಮತ್ತು ಎಂಟು ರಾಜ್ಯಗಳು ಆರ್-ಫ್ಯಾಕ್ಟರ್‌ನಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಎಂಟು ರಾಜ್ಯದಲ್ಲಿ ಆರ್‌-ಮೌಲ್ಯ ಹೆಚ್ಚಳವು "ಮಹತ್ವದ ಸಮಸ್ಯೆ" ಎಂದು ಗುರುತಿಸಿದೆ.

44 ಜಿಲ್ಲೆಗಳಲ್ಲಿ ಅಧಿಕ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಪಾಸಿಟಿವ್‌ ವರದಿ ಮಾಡಿದೆ. ಈ ಎಲ್ಲಾ ಬೆಳವಣಿಗೆ ನೋಡುವಾಗ "ಡೆಲ್ಟಾ ಚಾಲಿತ ಎರಡನೇ ಕೋವಿಡ್‌ ಅಲೆಯು ಇನ್ನೂ ಕೊನೆಯಾಗಿಲ್ಲ," ಎಂದು ಸರ್ಕಾರದ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ, ನೀತಿ ಆಯೋಗ ಸದಸ್ಯ ಡಾ. ವಿ. ಕೆ. ಪೌಲ್ ಎಚ್ಚರಿಸಿದ್ದಾರೆ.

ಜುಲೈ ಕೋವಿಡ್‌ ಲಸಿಕೆ ಗುರಿ ತಲುಪಿದ ಭಾರತ ಆಗಸ್ಟ್‌ನ 25 ಕೋಟಿ ಗುರಿ ತಪ್ಪುತ್ತಾ?ಜುಲೈ ಕೋವಿಡ್‌ ಲಸಿಕೆ ಗುರಿ ತಲುಪಿದ ಭಾರತ ಆಗಸ್ಟ್‌ನ 25 ಕೋಟಿ ಗುರಿ ತಪ್ಪುತ್ತಾ?

ದೇಶದಲ್ಲಿ ಮೂರನೇ ಕೋವಿಡ್‌ ಅಲೆಯ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿರುವ ನಡುವೆ ಸರ್ಕಾರದ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥರಾದ ಡಾ. ವಿ. ಕೆ. ಪೌಲ್‌ನ ಈ ಹೇಳಿಕೆಯು ಹೆಚ್ಚಿನ ಮಹತ್ವ ಪಡೆದಿದೆ. ಕೇಂದ್ರ ಸರ್ಕಾರದ ಪ್ರಕಾರ ಕಳೆದ ನಾಲ್ಕು ವಾರಗಳಲ್ಲಿ ಹದಿನೆಂಟು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪ್ರರಕಣಗಳ ಹೆಚ್ಚಳ ಕಂಡು ಬಂದಿದೆ.

8 States Show Rise In R-Factor, Covid second wave is still not over warned VK Paul

"ಡೆಲ್ಟಾ ರೂಪಾಂತರವು ಒಂದು ಪ್ರಬಲ ಸಮಸ್ಯೆಯಾಗಿದೆ. ಕೋವಿಡ್‌ ಸಾಂಕ್ರಾಮಿಕ ರೋಗವು ಇನ್ನೂ ಉಲ್ಬಣಗೊಳ್ಳುತ್ತಿದೆ ಮತ್ತು ನಮ್ಮ ದೇಶದಲ್ಲಿ ಎರಡನೇ ಅಲೆಯು ಮುಂದುವರಿದಿದೆ," ಎಂದು ಡಾ ಪೌಲ್‌ ಹೇಳಿದರು. ವೈರಸ್‌ನ ಆರ್-ಫ್ಯಾಕ್ಟರ್ ಅಥವಾ ಕೊರೊನಾ ವೈರಸ್‌ನ ಹರಡುವಿಕೆ ದರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

"ಆರ್ ಸಂಖ್ಯೆಯು 0.6 ಅಥವಾ ಅದಕ್ಕಿಂತ ಕಡಿಮೆ ಇರಬೇಕು ಎಂಬುದನ್ನು ದಯವಿಟ್ಟು ನೆನಪಿಡಿ. ಅದು 1 ಕ್ಕಿಂತ ಹೆಚ್ಚಿದ್ದರೆ, ಇದು ಗಮನಾರ್ಹ ಸಮಸ್ಯೆ ಎಂದು ತೋರಿಸುತ್ತದೆ ಮತ್ತು ಕೊರೊನಾ ವೈರಸ್ ಹರಡಲು ಅಧಿಕ ಕಾರಣವಾಗುತ್ತದೆ," ಎಂದು ಡಾ. ವಿ. ಕೆ. ಪೌಲ್ ಹೇಳಿದರು.

ಕೋವಿಡ್‌ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆಕೋವಿಡ್‌ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆ

"ಹಿಂದಿನ ವಾರಕ್ಕಿಂತ ಹೆಚ್ಚಿನ ಕೋವಿಡ್‌ ಪಾಸಿಟಿವ್‌ ಹೊಂದಿರುವ ಜಿಲ್ಲೆಗಳ ಸಂಖ್ಯೆ ಕಡಿಮೆಯಾಗಿದೆ. ಹಾಗೆಯೇ ಪ್ರತಿ ರಾಜ್ಯದಲ್ಲೂ, ಹೆಚ್ಚಿನ ಕೋವಿಡ್‌ ಪ್ರರಕಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹಿಂದಿನ ವಾರಕ್ಕಿಂತ ಕಡಿಮೆಯಾಗಿದೆ. ಆದರೆ ಈಗ ಹೊಸ ರಾಜ್ಯಗಳಲ್ಲಿ ಈ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಹೆಚ್ಚಿನ ಜಿಲ್ಲೆಗಳಲ್ಲಿ ಕಂಡು ಬರುತ್ತಿದೆ," ಎಂದು ಡಾ. ವಿ. ಕೆ. ಪೌಲ್ ಮಾಹಿತಿ ನೀಡಿದರು.

8 States Show Rise In R-Factor, Covid second wave is still not over warned VK Paul

"ಆರ್‌ ಮೌಲ್ಯ ಒಂದಕ್ಕಿಂತ ಹೆಚ್ಚಾದಾಗ, ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಕೋವಿಡ್‌ ಪ್ರಕರಣಗಳ ಹೆಚ್ಚಳ ನಿಯಂತ್ರಿಸುವ ಅಗತ್ಯವಿದೆ ಎಂಬ ಸೂಚನೆ. ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಭಾರತವು ಸರಾಸರಿ 1.2 ರ ಆರ್ ಮೌಲ್ಯವನ್ನು ಹೊಂದಿವೆ. ಇದರರ್ಥ ಒಬ್ಬ ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಜನರಿಗೆ ಸೋಂಕನ್ನು ಹರಡಲು ಕಾರಣವಾಗುತ್ತಾನೆ," ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ವಿವರಿಸಿದರು.

 ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು? ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?

ಏನಿದು ಆರ್‌ ಮೌಲ್ಯ?

ಕೋವಿಡ್‌ ವೈರಸ್ ಹರಡುವಿಕೆಯನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು ವಿಶ್ವಾದ್ಯಂತ ಬಳಸಲಾಗುವ ಅಂಕಿಅಂಶ 'ಆರ್' ಮೌಲ್ಯ ಎಂದು ಕರೆಯಲಾಗುತ್ತದೆ. ಇದು ಓರ್ವ ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿಯಿಂದ ಎಷ್ಟು ಜನರಿಗೆ ಕೋವಿಡ್‌ ಸೋಂಕು ತಗಲುತ್ತದೆ ಎಂಬುದರ ಅಳತೆಯಾಗಿದೆ. 2.0 ರ 'ಆರ್' ಎಂದರೆ ಕೋವಿಡ್ -19 ಹೊಂದಿರುವ ಒಬ್ಬ ವ್ಯಕ್ತಿಯು ಸರಾಸರಿ ಇಬ್ಬರಿಗೆ ಸೋಂಕು ತಗಲುತ್ತದೆ ಎಂದು ಸೂಚಿಸುತ್ತದೆ. ಆ ಎರಡು ಕೋವಿಡ್‌ ಸೋಂಕಿತರು ಮತ್ತೆ ಇಬ್ಬರಿಗೆ ಕೋವಿಡ್‌ ಸೋಂಕು ಹರಡುತ್ತಾರೆ. (ಸರಾಸರಿ ನಾಲ್ಕು ಜನರಿಗೆ ರೋಗವನ್ನು ಹರಡುತ್ತದೆ). ಕೊರೊನಾ ಸಾಂಕ್ರಾಮಿಕ ರೋಗದಲ್ಲಿ, 'ಆರ್' ಮೌಲ್ಯ 1.0 ಕ್ಕಿಂತ ಕಡಿಮೆ ಇರಬೇಕಾಗಿದೆ. ಇದು ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸುತ್ತದೆ ಎಂದು ಖಚಿತಪಡಿಸುತ್ತದೆ. ಏಕೆಂದರೆ ಈ 1.0 ಕ್ಕಿಂತ ಕಡಿಮೆ ಆರ್‌ ಮೌಲ್ಯವು ಹೆಚ್ಚಿನ ಜನರಿಗೆ ಸೋಂಕು ತಗಲುವುದಿಲ್ಲ ಎಂಬುವುದರ ಸೂಚಕವಾಗಿದೆ.

8 States Show Rise In R-Factor, Covid second wave is still not over warned VK Paul

ಕರ್ನಾಟಕದಲ್ಲೂ ಆರ್‌ ಮೌಲ್ಯ ಹೆಚ್ಚಳ

ಆರ್ ಮೌಲ್ಯ ಒಂದಕ್ಕಿಂತ ಹೆಚ್ಚು ಇರುವ ರಾಜ್ಯಗಳು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ತಮಿಳುನಾಡು, ಮಿಜೋರಾಂ, ಕರ್ನಾಟಕ, ಪುದುಚೇರಿ ಮತ್ತು ಕೇರಳ ಆಗಿದೆ. ಆಂಧ್ರಪ್ರದೇಶ ಮತ್ತು ದೇಶದಲ್ಲಿ ಈ ಹಿಂದೆ ಅಧಿಕ ಪ್ರಕರಣ ದಾಖಲಿಸುತ್ತಿದ್ದ ಮಹಾರಾಷ್ಟ್ರದಲ್ಲಿ ಮಾತ್ರ ದೈನಂದಿನ ಕೋವಿಡ್‌ ಪ್ರರಕಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಂಡು ಬರುತ್ತಿದೆ. ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಹರಿಯಾಣ, ಗೋವಾ, ದೆಹಲಿ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳ ಆರ್‌ ಮೌಲ್ಯ 1 ರಲ್ಲಿದೆ.

(ಒನ್‌ಇಂಡಿಯಾ ಸುದ್ದಿ)

English summary
8 States Show Rise In R-Factor, Covid second wave is still not over warned VK Paul. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X