ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಸಂದಿಗ್ಧತೆಯಲ್ಲಿ 8 ವಿಶೇಷ ಪ್ಯಾಕೇಜ್ ಘೋಷಣೆ

|
Google Oneindia Kannada News

ನವದೆಹಲಿ, ಜೂನ್ 28: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಿಂದ ತತ್ತರಿಸಿರುವ ಆರ್ಥಿಕತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆಗಳನ್ನು ಹೊರಡಿಸಿದ್ದಾರೆ.

Recommended Video

ಮತ್ತೊಂದು ಕೊರೊನ ಪ್ಯಾಕೇಜ್ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್ | Oneindia Kannada

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಆರ್ಥಕತೆಯನ್ನು ಸುಧಾರಿಸುವ ಉದ್ದೇಶದಿಂದ ಎಂಟು ಪ್ರಮುಖ ಘೋಷಣೆಗಳನ್ನು ಹೊರಡಿಸಿದ್ದಾರೆ. ಕಳೆದ ಬಾರಿ ಕೇಂದ್ರ ಸರ್ಕಾರವು ಇದೇ ರೀತಿ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಅನ್ನು ಘೋಷಿಸಿತ್ತು.

'ಪಿಎಲ್ಐ ಯೋಜನೆ ಒಂದು ವರ್ಷ ವಿಸ್ತರಣೆ': ವಿತ್ತ ಸಚಿವೆ ಘೋಷಣೆ'ಪಿಎಲ್ಐ ಯೋಜನೆ ಒಂದು ವರ್ಷ ವಿಸ್ತರಣೆ': ವಿತ್ತ ಸಚಿವೆ ಘೋಷಣೆ

ಕೊವಿಡ್-19 ಪೀಡಿತ ಪ್ರದೇಶಗಳಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಮೇಲಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ತುರ್ತು ಕ್ರೆಡಿಟ್ ಗ್ಯಾರಂಟಿ ಸಾಲ ಯೋಜನೆಯನ್ನು ಘೋಷಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ ಪ್ರಮುಖ ಯೋಜನೆಗಳು ಮತ್ತು ಸುದ್ದಿಗೋಷ್ಠಿಯ ಪ್ರಮುಖ ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

8 Major Packages For Covid-19 Affected India: Minister Nirmala Sitharaman Announcement Highlights

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ಘೋಷಣೆ:

* ಜೂನ್ 30 ರಿಂದ 2022ರ ಮಾರ್ಚ್ 31ರವರೆಗೂ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ ವಿಸ್ತರಣೆ.

* ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ದುರ್ಬಲ ವರ್ಗದ ಕುಟುಂಬಕ್ಕೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ಉಚಿತ ಆಹಾರಧಾನ್ಯ ವಿತರಿಸುವುದಕ್ಕೆ 2,27,841 ಕೋಟಿ ರೂಪಾಯಿ ಮೀಸಲು.

* ಕೊವಿಡ್-19 ಪೀಡಿತ ವಲಯಗಳಿಗೆ 1.1 ಲಕ್ಷ ಕೋಟಿ ರೂಪಾಯಿ ಸಾಲ ಖಾತ್ರಿ ಯೋಜನೆ

5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಮೋದಿ ಸರ್ಕಾರ5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಮೋದಿ ಸರ್ಕಾರ

* 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ತುರ್ತು ಕ್ರೆಡಿಟ್ ಗ್ಯಾರಂಟಿ ಸಾಲ ಯೋಜನೆ

* ಆರೋಗ್ಯ ವಲಯದಲ್ಲಿ ಮೂಲಸೌಕರ್ಯಕ್ಕಾಗಿ 50,000 ಕೋಟಿ ರೂಪಾಯಿ ಘೋಷಣೆ

* ಅಲ್ಪಾವಧಿಯಲ್ಲಿ ಮಕ್ಕಳ ಆರೋಗ್ಯ ಮತ್ತು ನವಜಾತ ಶಿಶುಗಳ ಆರೋಗ್ಯ ವ್ಯವಸ್ಥೆಗಾಗಿ 23,220 ಕೋಟಿ ರೂಪಾಯಿ

* ತುರ್ತು ಕ್ರೆಡಿಟ್ ಗ್ಯಾರಂಟಿ ಸಾಲ ಯೋಜನೆ ಅಡಿ ಸಣ್ಣ ಹಣಕಾಸು ಸಂಸ್ಥೆಗಳ ಮೂಲಕ 25 ಲಕ್ಷ ಜನರಿಗೆ ಸಾಲ ಸೌಲಭ್ಯ

* 11,000 ಪ್ರವಾಸಿ ತಾಣಗಳ ಮಾರ್ಗದರ್ಶಕರು ಹಾಗೂ ಪ್ರವಾಸಿಗರ ಸಂಚಾರಿ ವಲಯದ ಕಾರ್ಮಿಕರಿಗೆ ಆರ್ಥಿಕ ನೆರವು. ನಿಗದಿತ ಷರತ್ತುಗಳ ಅಡಿಯಲ್ಲಿ ಶೇ.100ರಷ್ಟು ಸಾಲ ಸೌಲಭ್ಯ.

* 5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ಸೌಲಭ್ಯ

* ವಿದ್ಯುತ್ ವಿತರಣಾ ಯೋಜನೆ ಸುಧಾರಣೆಗೆ ಒಟ್ಟು ₹ 3.03 ಲಕ್ಷ ಕೋಟಿ ಘೋಷಿಸಲಾಗಿದೆ. ಮೂಲಸೌಕರ್ಯ ರಚನೆ, ವ್ಯವಸ್ಥೆಯ ಉನ್ನತೀಕರಣಕ್ಕಾಗಿ ಹಾಗೂ ಡಿಸ್ಕಾಮ್‌ಗಳಿಗೆ ಹಣಕಾಸಿನ ನೆರವು ನೀಡುವುದು

* ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ ಯೋಜನೆಯ ಅವಧಿಯನ್ನು 2025-26ರವರೆಗೆ ವಿಸ್ತರಣೆ

* ಹಣಕಾಸಿನ ಪುನರ್ರಚನೆ ಮತ್ತು ಹಣದ ಹೂಡಿಕೆಗೆ 77,45 ಕೋಟಿಗಳ ಪುನರುಜ್ಜೀವನ ಪ್ಯಾಕೇಜ್ ಘೋಷಿಸಲಾಗಿದೆ. ಸಾವಯವ ಕೃಷಿಗಾಗಿ ಈಶಾನ್ಯ ಕೇಂದ್ರವನ್ನು ಸ್ಥಾಪಿಸುವುದಕ್ಕೆ ಪ್ರಸ್ತಾಪಿಸಲಾಗಿದೆ ಹಾಗೂ ಉದ್ಯಮಿಗಳಿಗೆ ಈಕ್ವಿಟಿ ಹಣಕಾಸು ಸೌಲಭ್ಯವನ್ನು ಒದಗಿಸುತ್ತದೆ

* ಇತರೆ ವಲಯಗಳಿಗೆ 60,000 ಕೋಟಿ ರೂಪಾಯಿ ಘೋಷಣೆ.

English summary
8 Major Packages For Covid-19 Affected India: Finance Minister Nirmala Sitharaman Announcement Highlights Read Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X