ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಭೂ ಕುಸಿತ: 8 ಸಾವು

|
Google Oneindia Kannada News

ಕೋಯಿಕ್ಕೋಡ್, ಜೂನ್ 15: ಕೇರಳದ ಕಟ್ಟಿಪರ ಎಂಬಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದಾರೆ.

ಇನ್ನೂ ಆರು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಸಂಚಾರಕ್ಕೆ ತೆರೆದುಕೊಂಡ ಚಾರ್ಮಾಡಿ ಘಾಟ್, ಭಾರೀ ವಾಹನಕ್ಕಿಲ್ಲ ಅನುಮತಿಸಂಚಾರಕ್ಕೆ ತೆರೆದುಕೊಂಡ ಚಾರ್ಮಾಡಿ ಘಾಟ್, ಭಾರೀ ವಾಹನಕ್ಕಿಲ್ಲ ಅನುಮತಿ

ಕೋಯಿಕ್ಕೋಡ್ ಜಿಲ್ಲೆಯ ಕರಿಂಚೊಲಾ, ಪುಳ್ಳರನ್ಪರ ಮತ್ತು ಚಮಾಲ್ ಪ್ರದೇಶಗಳಲ್ಲಿಯೂ ಭೂ ಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

 8 killed in Kerala landside

ನದಿಗಳಲ್ಲಿ ನೀರು ಅಪಾಯ ಮಟ್ಟವನ್ನು ಉಕ್ಕಿ ಹರಿಯುತ್ತಿರುವುದರ ಪರಿಣಾಮ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಲ್ಲಿನ ಆಶ್ರಯ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಮುಂಗಾರು ಆರಂಭವಾದಾಗಿನಿಂದಲೂ ಕೇರಳದ ಅನೇಕ ಭಾಗಗಳಲ್ಲಿ ವಿಪರೀತ ಗಾಳಿ ಮಳೆಯಾಗುತ್ತಿದ್ದು, ಭಾರಿ ಪ್ರಮಾಣದ ಅನಾಹುತಗಳನ್ನು ಸೃಷ್ಟಿಸಿದೆ.

ಭಾರೀ ಮಳೆಗೆ ಸಾಕ್ಷಿಯಾಗಲಿವೆ ಅಸ್ಸಾಂ ಮತ್ತು ಮೇಘಾಲಯಭಾರೀ ಮಳೆಗೆ ಸಾಕ್ಷಿಯಾಗಲಿವೆ ಅಸ್ಸಾಂ ಮತ್ತು ಮೇಘಾಲಯ

ರಾಜ್ಯದ ವಿವಿಧಡೆ ಮಳೆ ಅಬ್ಬರದಿಂದ ಉಂಟಾದ ಅವಘಡಗಳಲ್ಲಿ ಕಳೆದ ವಾರ 13 ಮಂದಿ ಬಲಿಯಾಗಿದ್ದರು. ಇಡುಕ್ಕಿ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಮಳೆಯ ತೀವ್ರತೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

English summary
8 People Have killed in the landslide in Kattipara, Kerala due to heavy rain. Six more people are still missed and search operations are continued to find them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X