ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತ್ತ ಚಂಡಮಾರುತ, ಅತ್ತ ಅಂಡಮಾನ್‌ನಲ್ಲಿ ಕಂಪಿಸಿದ ಭೂಮಿ

|
Google Oneindia Kannada News

ನವದೆಹಲಿ, ನವೆಂಬರ್, 09: ಪಾಕಿಸ್ತಾನವನ್ನು ನಡುಗಿಸಿದ್ದ ಭೂಕಂಪ ಇದೀಗ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಕಾಣಿಸಿಕೊಂಡಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಭಾನುವಾರ ರಾತ್ರಿ ಸರಣಿ ಭೂಕಂಪ ಸಂಭವಿಸಿದ ವರದಿಯಾಗಿದೆ.

ಎಂಟು ಗಂಟೆಗಳ ಅವಧಿಯಲ್ಲಿ ಭೂಮಿ ಎಂಟು ಸಲ ಕಂಪಿಸಿದೆ. ಆದರೆ ಭೂ ವಿಜ್ಞಾನ ಇಲಾಖೆ ಸುನಾಮಿಯ ಎಚ್ಚರಿಕೆಯನ್ನು ನೀಡಿಲ್ಲ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಚಂಡಮಾರುತಗಳು ಅಬ್ಬರಿಸಲು ಆರಂಭಿಸಿವೆ. ರೋನು ಚಂಡಮಾರುತ ತಮಿಳುನಾಡಲ್ಲಿ ಅಬ್ಬರಿಸುತ್ತಿದೆ.[ಪಾಕಿಸ್ತಾನದಲ್ಲಿ ಭಾರೀ ಭೂಕಂಪ, ಉತ್ತರ ಭಾರತ ಗಡಗಡ]

earthquake

ಇಂಡೊನೇಷ್ಯಾದ ಸುಮಾತ್ರ ದ್ವೀಪದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.7 ರಷ್ಟು ತೀವ್ರತೆ ದಾಖಲಾಗಿದೆ. ಅಂಡಮಾನ್‌ ದ್ವೀಪದಲ್ಲಿ ಮೊದಲ ಗರಿಷ್ಠ ಪ್ರಮಾಣದಲ್ಲಿ ಕಂಪಿಸಿರುವ ಭೂಮಿ 5.2 ರಷಷ್ಟು ದಾಖಲಾಗಿತ್ತು. ಇದಾದ ಮೇಲೆ ಮತ್ತೆ ಭೂಮಿ ಕಂಪಿಸಿದೆ.[ಬೆಂಗಳೂರು ಭೂಕಂಪದ ಆತಂಕದಿಂದ ಮುಕ್ತವಲ್ಲ!]

ಆದರೆ ಮಧ್ಯರಾತ್ರಿ ಭೂಮಿಯ ಭೂಮಿ ನಡುಗಿದೆ. ಯಾವುದೇ ಸಾವು ನೋವುಗಳು ಸಂಭವಿಸಿದ ವರದಿಯಾಗಿಲ್ಲ. ಕಳೆದ ವಾರ ಹಿಂದುಕುಶ್ ಪರ್ವತದ ಬಳಿ ಕಂಪಿಸಿದ್ದ ಭೂಮಿ ಅಪಘಾನಿಸ್ತಾನ ಮತ್ತು ಉತ್ತರ ಪಾಕಿಸ್ತಾನವನ್ನು ನಡುಗಿಸಿತ್ತು. ಉತ್ತರ ಭಾರತದ ಅನೇಕ ರಾಜ್ಯಗಳು ಭೂ ಕಂಪದ ಪ್ರಭಾವಕ್ಕೆ ಒಳಗಾಗಿದ್ದವು.

English summary
Eight earthquakes, including two major ones, struck the Andaman and Nicobar islands in a span of eight hours on Sunday, with each measuring around five or more on the Richter Scale, but there was no tsunami alert. Another earthquake not far from the archipelago hit North Sumatra island in Indonesia, measuring 5.7 on the Richter scale at 3:04 PM and at a depth of 10 kms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X