ಬಜೆಟ್ ಬಿಗ್ ನ್ಯೂಸ್ : ಡಿಎ ಹೆಚ್ಚಳ ಖಚಿತ, ಸಂಬಳ ಏರಿಕೆ ಇಲ್ಲ
Recommended Video
2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಜ್ಜಾಗಿದ್ದಾರೆ. ಈ ನಡುವೆ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಸರ್ಕಾರಿ ನೌಕರರಿಗೆ ಈ ಬಾರಿಯೂ ನಿರಾಶೆ ಕಾದಿದೆ ಎಂಬ ಆಘಾತಕಾರಿ ಸುದ್ದಿ ಬಂದಿದೆ. ಲಭ್ಯ ಮಾಹಿತಿ ಪ್ರಕಾರ, ಸಂಬಳ ಏರಿಕೆ ಕುರಿತಂತೆ ಈ ಬಾರಿ ಬಜೆಟ್ ನಲ್ಲಿ ಯಾವುದೇ ಘೋಷಣೆ ನಿರೀಕ್ಷಿಸುವಂತಿಲ್ಲ. ಬದಲಿಗೆ ಶುಭ ಸುದ್ದಿಯೆಂದರೆ ಡಿಎ ಹೆಚ್ಚಳ, ಆದರೆ ಅದು ನಿರೀಕ್ಷಿತ.
ಕೇಂದ್ರ ಸರ್ಕಾರಿ ನೌಕರರಿಗೆ 8 ಸಾವಿರ ರು ಸಂಬಳ ಏರಿಕೆ?
ರಾಷ್ಟ್ರೀಯ ಕನಿಷ್ಠ ವೇತನ (National minimum floor wage) ಬದಲಾವಣೆಗೆ ಸೂಚಿಸಿರುವ ಸಲಹಾ ಮಂಡಳಿಯ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ28ರಷ್ಟು ಏರಿಕೆಯಾಗಲಿದೆ. ಇದನ್ನು ರಾಜ್ಯ ಸರ್ಕಾರಿ ನೌಕರರಿಗೂ ಹಂತ ಹಂತವಾಗಿ ಜಾರಿಗೊಳಿಸಲು ಸೂಚಿಸಲಾಗಿದೆ.
7ನೇ ವೇತನ ಆಯೋಗದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ, ಭತ್ಯೆ, ಕೆಲಸದ ಅವಧಿ, ರಜಾ ದಿನ ನಿಗದಿ ಮಾಡುವಂತೆ ಬೇಡಿಕೆ ಇದ್ದೆ ಇದೆ. ಮಾರ್ಚ್ ತಿಂಗಳಿನಲ್ಲಿ ಶೇ 4ರಷ್ಟು ತುಟ್ಟಿಭತ್ಯೆ ಸಿಗುವ ಸಾಧ್ಯತೆಯಿದೆ. ಡಿಎ ಶೇ 17ರಷ್ಟು ಪ್ರಮಾಣದಲ್ಲಿ ಸಿಗಬಹುದು. ಆದರೆ, ಡಿಎ ಪ್ರಮಾಣ ಶೇ 4ಕ್ಕೇರಿದರೆ ತುಟ್ಟಿ ದರ ಶೇ 21ಕ್ಕೇರಲಿದೆ.
ಮೂಲ ವೇತನ ಏರಿಕೆ ನಿರೀಕ್ಷೆ ಇಲ್ಲ
ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಜುಲೈ 2018ರ ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆ ಇನ್ನೂ ಈಡೇರಿಲ್ಲ. ಕನಿಷ್ಠ ವೇತನ 21 ಸಾವಿರ ರು ನಿಂದ 26 ಸಾವಿರ ರು ತನಕ ಏರಿಕೆ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದ್ದರೂ ಈ ಬಾರಿ ಬಜೆಟ್ ನಲ್ಲಿ ಘೋಷಣೆಯಾಗುವುದಿಲ್ಲ.
ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಣೆ
ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಜುಲೈ 2018ರ ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಯಾವುದೇ ಸೂಚನೆ ಇಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ ಸಾರಿಗೆ ಭತ್ಯೆ (Travel Allowance) ಕೂಡಾ ನೀಡಲಾಗುತ್ತಿದೆ. ಟಿಎ ಮೌಲ್ಯ ಸೇರಿಸಿದ ಬಳಿಕ ಸಂಬಳ 810 ರು ನಿಂದ 4,320ರುಗೇರಲಿದೆ. ಒಟ್ಟಾರೆ 720 ರು ನಿಂದ 10,000 ರು ತನಕ ಸಂಬಳ ಏರಿಕೆ ನಿರೀಕ್ಷೆಯಿದೆ.
ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿತ್ತು. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲಿ ತನಕ ಬಂದಿಲ್ಲ. ಈ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆಯಿದೆ.
ಶೇ 4 ರಷ್ಟು ಡಿಎ ಹೆಚ್ಚಳ ಖಚಿತವಾಗಿದೆ.
ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಶೇ3ರಷ್ಟು ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ ಹೊಂದಿದ್ದ ನೌಕರರಿಗೆ ಈಗ ಶೇ 5ರಷ್ಟು ತುಟ್ಟಿಭತ್ಯೆ ಸಿಗಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಅನುತ್ಪಾದನಾ ಮಿಲಿತ ಬೋನಸ್(Non Product linked) ನೀಡಲಾಗಿದೆ. ಜನವರಿ 2020 ರಿಂದ ಜೂನ್ 2020 ರ ಅವಧಿಗೆ ಶೇ 4 ರಷ್ಟು ಡಿಎ ಹೆಚ್ಚಳ ಖಚಿತವಾಗಿದೆ.
ಹಣದುಬ್ಬರದ ಪರಿಣಾಮ ಡಿಎ ಪ್ರಮಾಣ ತಗ್ಗಿದೆ
ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ5 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿತ್ತು. ಆದರೆ, ಇದೆಲ್ಲವನ್ನು ಮೀರಿ ಮುಂದಿನ ಅವಧಿ ಜನವರಿ 2020ಕ್ಕೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಡಿಎ ಪ್ರಮಾಣ ಶೇ 17 ರಿಂದ ಶೇ21ಕ್ಕೇರಿಕೆಯಾಗಲಿದ್ದು, ಇದರಿಂದ 1.1 ಕೋಟಿ ಉದ್ಯೋಗಿ ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ.