ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರ್ 2.0 ಚೊಚ್ಚಲ ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ನಿರಾಶೆ?

|
Google Oneindia Kannada News

ನವದೆಹಲಿ, ಜೂನ್ 24: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವ ಬಿಜೆಪಿ ಸರ್ಕಾರ ತನ್ನ ಚೊಚ್ಚಲ ಬಜೆಟ್ ಮಂಡನೆ ಸಜ್ಜಾಗಿದೆ. ಜೂನ್ 17ರಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದು, 17ನೇ ಲೋಕಸಭೆಯ ಈ ಅಧಿವೇಶನದಲ್ಲೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೊಚ್ಚಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.

ಕೇಂದ್ರ ಸರಕಾರಿ ನೌಕರರ ಭತ್ಯೆ 5 ಪಟ್ಟು ಹೆಚ್ಚಳ, ನರೇಂದ್ರ ಮೋದಿ ಸರ್ಕಾರದ ಬಂಪರ್ ಕೊಡುಗೆಕೇಂದ್ರ ಸರಕಾರಿ ನೌಕರರ ಭತ್ಯೆ 5 ಪಟ್ಟು ಹೆಚ್ಚಳ, ನರೇಂದ್ರ ಮೋದಿ ಸರ್ಕಾರದ ಬಂಪರ್ ಕೊಡುಗೆ

ಜುಲೈ 05ರಂದು ಮಂಡನೆಯಾಗಲಿರುವ ಆಯವ್ಯಯ ಪತ್ರದಲ್ಲಿ ಸರ್ಕಾರಿ ನೌಕರರಿಗೆ ಏನು ಸಿಗಲಿದೆ? ಬಹುಕಾಲದ ಬೇಡಿಕೆಗಳಿಗೆ ಮೋದಿ ಸರ್ಕಾರ ಈ ಬಾರಿಯಾದರೂ ಮನ್ನಣೆ ನೀಡುವುದೆ ಎಂಬ ಪ್ರಶ್ನೆ ಎದ್ದಿದೆ. ಆದರೆ, ಈ ಸಮಯಕ್ಕೆ ಸಿಕ್ಕ ಮಾಹಿತಿಯಂತೆ, ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಲು ಇನ್ನಷ್ಟು ಕಾಲ ಕಾಯುವುದು ಅನಿವಾರ್ಯ ಎಂಬ ಸುದ್ದಿ ಬಂದಿದೆ.

7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?

ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನವನ್ನು 18,000ರು ನಿಂದ 26,000 ರು ಗೇರಿಸುವಂತೆ ಕೋರಲಾಗಿದೆ.

2 ಸಾವಿರ ರು ಏರಿಕೆ ಸಾಧ್ಯತೆ ಬಗ್ಗೆ ಸುಳಿವು ಸಿಕ್ಕಿದೆ

2 ಸಾವಿರ ರು ಏರಿಕೆ ಸಾಧ್ಯತೆ ಬಗ್ಗೆ ಸುಳಿವು ಸಿಕ್ಕಿದೆ

ಕಳೆದ ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇತ್ತು.

ಆದರೆ, ಈ ಬಗ್ಗೆ ಯಾವುದೇ ಘೋಷಣೆಯಾಗಲಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೊಂಡು ಯಾವುದೇ ಘೋಷಣೆಗೆ ಅವಕಾಶ ಸಿಗಲಿಲ್ಲ. ಹೀಗಾಗಿ, ಮೂಲ ವೇತನದಲ್ಲಿ ಎಷ್ಟು ಪ್ರಮಾಣ ಏರಿಕೆ ಬೇಡಿಕೆ ಹಾಗೆ ಉಳಿದಿದೆ. ಆದರೆ, ಒಟ್ಟಾರೆ ವೇತನದಲ್ಲಿ 2 ಸಾವಿರ ರು ಏರಿಕೆ ಸಾಧ್ಯತೆ ಬಗ್ಗೆ ಸುಳಿವು ಸಿಕ್ಕಿದೆ.

ಭರ್ಜರಿ ನಿರೀಕ್ಷೆ ಇಟ್ಟುಕೊಳ್ಳಬೇಡಿ

ಭರ್ಜರಿ ನಿರೀಕ್ಷೆ ಇಟ್ಟುಕೊಳ್ಳಬೇಡಿ

ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೊದಲ ಬಜೆಟ್ ನಲ್ಲಿ ಜನಪ್ರಿಯ ಯೋಜನೆ, ಕೊಡುಗೆಗಳಿಗಿಂತ ಭಾರತದ ಆರ್ಥಿಕ ಪ್ರಗತಿಯನ್ನು ಸುಸ್ಥಿತಿಗೆ ತರಲು ಕ್ರಮಗಳನ್ನು ಘೋಷಿಸಲಿದೆ. 2018-19ರಲ್ಲಿ ಜಿಡಿಪಿ ದರ 6.8ರಷ್ಟಿತ್ತು. ಕಳೆದ ಐದು ವರ್ಷಗಳಲ್ಲೇ ಕಡಿಮೆ ಪ್ರಮಾಣಕ್ಕೆ ಕುಸಿದಿತ್ತು. ಸರ್ಕಾರ ಖರ್ಚು ವೆಚ್ಚ ಸಮಿತಿ ನೀಡಿದ ವರದಿ ಅನುಸಾರ ಅಲ್ಪ ಪ್ರಮಾಣದಲ್ಲಿ ಕೊಡುಗೆ ನೀಡಬಹುದು ಎನ್ನಲಾಗಿದೆ. ಕೇಂದ್ರ ಸರ್ಕಾರಿ ನೌಕರರ ಬೇಡಿಕೆಯ ಪಟ್ಟಿ ದೊಡ್ಡದಿದ್ದು, ಮೊದಲಿಗೆ ವೇತನ ಏರಿಕೆಯನ್ನು ಪರಿಗಣಿಸುವ ಸೂಚನೆ ಸಿಕ್ಕಿದೆ.ಆದರೆ, ನಿರೀಕ್ಷೆಯಂತೆ 8 ಸಾವಿರ ರು ವೇತನ ಏರಿಕೆ ಬದಲಿಗೆ 2 ಸಾವಿರ ರು ಏರಿಕೆ ಮಾತ್ರ ಸಿಗುವ ಸುಳಿವು ಸಿಕ್ಕಿದೆ.

9 ಲಕ್ಷ ನೌಕರರಿಗೆ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ 9 ಲಕ್ಷ ನೌಕರರಿಗೆ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ

ಕನಿಷ್ಠ ವೇತನ ಏರಿಕೆ ಬೇಡಿಕೆ

ಕನಿಷ್ಠ ವೇತನ ಏರಿಕೆ ಬೇಡಿಕೆ

ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು. ಅಂದರೆ, 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ. ಆದರೆ, ಲಭ್ಯ ಮಾಹಿತಿಯಂತೆ aykroyd ಫಾರ್ಮ್ಯೂಲಾದಂತೆ ಧೀರ್ಘಾವಧಿಗೆ ಜಾರಿಗೊಳಿಸಬಹುದು.

***

ನಿವೃತ್ತಿ ವಯಸ್ಸು ಏರಿಕೆ

ನಿವೃತ್ತಿ ವಯಸ್ಸು ಏರಿಕೆ

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ. ಆದರೆ, ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಗೊಂದಲ ಮುಂದುವರೆದಿದೆ

ತುಟ್ಟಿ ಭತ್ಯೆ ಹೆಚ್ಚಳ ಪ್ರಮಾಣ ಏರಿಕೆ

ತುಟ್ಟಿ ಭತ್ಯೆ ಹೆಚ್ಚಳ ಪ್ರಮಾಣ ಏರಿಕೆ

ಕೇಂದ್ರ ಸಂಪುಟವು 3% ತುಟ್ಟಿ ಭತ್ಯೆ (ಡಿಎ) ಹೆಚ್ಚಳದ ಘೋಷಣೆ ಮಾಡಿದ್ದು, ಸರ್ಕಾರಿ ನೌಕರರಿಗೆ ಕೊಂಚ ಸಂತಸ ತಂದಿದೆ. ಜನವರಿ 1, 2019ರಿಂದಲೇ ಇದು ಪೂರ್ವಾನ್ವಯ ಆಗಲಿದೆ. ಈ ನಿರ್ಧಾರದಿಂದ ಕಳೆದ ಕೇಂದ್ರ ಸರಕಾರದ ಮೇಲೆ 9000 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬಿದ್ದಿತ್ತು. ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. 3% ತುಟ್ಟಿ ಭತ್ಯೆ ಹೆಚ್ಚಳ ಮಾಡಿರುವುದರಿಂದ ಡಿಎ ಹಾಗೂ ತುಟ್ಟಿ ದರ (ಡಿಆರ್) ನಿವೃತ್ತಿಯಾದವರಿಗೆ ಶೇ 12ರಷ್ಟು ತಲುಪಲಿದೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಆದರೆ, ಶೇ 4ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿದೆ.

English summary
The Union Budget 2019 would be a much awaited one for the Central Government employees who are expecting some good news on the 7th Pay Commission. Sources tell Oneindia that the possibility of some big news on the issue is bleak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X