ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

55 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಏರಿಕೆ

|
Google Oneindia Kannada News

ನವದೆಹಲಿ, ಮೇ 04 : ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ನಿರೀಕ್ಷಿಸುತ್ತಿರುವ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಬುಧವಾರ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿಯನ್ನು ಹೆಚ್ಚಳವಾಗುವಂತೆ ಶಿಫಾರಸನ್ನು ಅಂಗೀಕರಿಸಲಾಗಿದೆ. ಇದರಿಂದಾಗಿ 55 ಲಕ್ಷ ಕೇಂದ್ರ ನೌಕರರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಆದರೆ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 1,76,071 ಕೋಟಿ ರೂಪಾಯಿ ಹೊರೆ ಬೀಳಲಿದೆ.[7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?]

ನ್ಯಾಯಮೂರ್ತಿ ಎ.ಕೆ. ಮಾಥುರ್ ನೇತೃತ್ವದ 7 ನೇ ವೇತನ ಆಯೋಗವು 900 ಪುಟಗಳ ವರದಿಯನ್ನು 2015 ರ ನವೆಂಬರ್​ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಸಲ್ಲಿಸಿತ್ತು.

ಜನವರಿ 1, 2016ರಿಂದ ಅನ್ವಯ

ಜನವರಿ 1, 2016ರಿಂದ ಅನ್ವಯ

ಕೇಂದ್ರ ಸಂಪುಟ ಸಭೆಯು ಬುಧವಾರ ಸಮ್ಮತಿಸಿದ 7ನೇ ವೇತನ ಆಯೋಗ ಸುಮಾರು 55 ಲಕ್ಷ ನೌಕರರಿಗೆ ಜನವರಿ 1, 2016ರಿಂದ ಅನ್ವಯವಾಗಲಿದೆ. ಈ ಏಳನೇ ವೇತನ ಆಯೋಗದಿಂದ ರಕ್ಷಣ ಇಲಾಖೆಗೆ ಹೆಚ್ಚಿನ ಅನುಕೂಲರವಾಗಲಿದೆ.

ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ?

ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ?

7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿರುವುದರಿಂದ 2016-17ರ ಆರ್ಥಿಕ ವರ್ಷದಲ್ಲಿ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 1,76,071 ಕೋಟಿ ರೂಪಾಯಿ ಹೊರೆ ಬೀಳಲಿದೆ.

7ನೇ ವೇತನ ಆಯೋಗದ ಶಿಫಾರಸುಗಳೇನು?

7ನೇ ವೇತನ ಆಯೋಗದ ಶಿಫಾರಸುಗಳೇನು?

ಸುಮಾರು 18 ಹಂತದ ವೇತನ ಮ್ಯಾಟ್ರಿಕ್ ಹೊಂದಿರುವ ಈ ಶಿಫಾರಸ್ಸಿನ ಮೂಲಕ ಹಳೆ ಪಿಂಚಣಿದಾರರು ಹಾಗೂ ಈಗಷ್ಟೇ ನಿವೃತ್ತಿಯಾದ ಪಿಂಚಣಿದಾರರ ನಡುವಿನ ವೇತನ ತಾರತಮ್ಯವನ್ನು ಸರಿಪಡಿಸಲಾಗಿದೆ. ಒಟ್ಟಾರೆ ಶೇ 23.55ರಷ್ಟು ವೇತನ ಏರಿಕೆ ಸಿಕ್ಕಿದೆ.ವೇತನ ಶೇ 16, ಭತ್ಯೆ ಶೇ 63ರಷ್ಟುಹಾಗೂ ಪಿಂಚಣಿ ಸುಮಾರು ಶೇ 24ರಷ್ಟು ಏರಿಕೆಯಾಗಲಿದೆ.

ಪಿ ಕೆ ಸಿನ್ಹಾ ನೇತೃತ್ವ

ಪಿ ಕೆ ಸಿನ್ಹಾ ನೇತೃತ್ವ

ವರದಿಯ ಪರಿಶೀಲನೆಗೆ ಸಂಪುಟ ಕಾರ್ಯದರ್ಶಿ ಪಿ ಕೆ ಸಿನ್ಹಾ ನೇತೃತ್ವದಲ್ಲಿ ಉನ್ನತಾಧಿಕಾರ ಸಲಹಾ ಸಮಿತಿ ರಚಿಸಲಾಗಿತ್ತು. ಸಿನ್ಹಾರ ವೇತನ ಸಲಹಾ ಸಮಿತಿ ಸಲ್ಲಿಸಿದ ವರದಿ ಆಧರಿಸಿ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ಕುರಿತು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಿ ಬಳಿಕ ಒಪ್ಪಿಗೆ ನೀಡಿತು.

ರಕ್ಷಣಾ ಇಲಾಖೆಗೆ ಅನುಕೂಲ

ರಕ್ಷಣಾ ಇಲಾಖೆಗೆ ಅನುಕೂಲ

ಕೇಂದ್ರ ಸಚಿವ ಸಂಪುಟದ 7ನೇ ವೇತನ ಆಯೋಗದ ಶಿಫಾರಸನ್ನು ಅಂಗೀಕರಿಸಿದ್ದರಿಂದ ಭಾರತೀಯ ಸೇನೆಗೆ ಹೆಚ್ಚಿನ ಅನುಕೂಲವಾಗಿದೆ. ಆರ್ಮಿಯವರಿಗೆ ಪ್ರಸ್ತುತ 21,000 ಸಾವಿರ ವೇತನ ಸಿಗುತ್ತಿತ್ತು. ಇನ್ಮುಂದೆ ಅದು 31,500 ರೂಪಾಯಿಗೆ ಏರಿಕೆಯಾಗಲಿದೆ.

English summary
Over 55 lakh central government pensioners will benefit after the Union Cabinet approved the new pension plan under the 7th Pay Commission. The Cabinet on Wednesday approved modifications in the 7th Central Pay Commission recommendations on pay and pensionary benefits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X