ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ತಿಂಗಳಿನಲ್ಲಿ ಮೋದಿ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಬಂಪರ್

|
Google Oneindia Kannada News

Recommended Video

Govt May Hike Central Govt employees Salaries soon | Oneindia Kannada

ನವದೆಹಲಿ, ಅಕ್ಟೋಬರ್ 29: ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 5% ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಕೆಲ ವರ್ಗದ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನ ಬೋನಸ್ ಹಾಗೂ ಸಾರಿಗೆ ಭತ್ಯೆ(TA) ಲಭ್ಯವಾಗಿದೆ. ಈಗ ನವೆಂಬರ್ ತಿಂಗಳಿನಲ್ಲಿ ಬಂಪರ್ ಕೊಡುಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಒನ್ಇಂಡಿಯಾಕ್ಕೆ ಲಭ್ಯವಾದ ಮಾಹಿತಿಯಂತೆ, ಕೇಂದ್ರ ಸರ್ಕಾರಿ ನೌಕರರ ಸಂಬಳ ಏರಿಕೆ ಬಗ್ಗೆ ನವೆಂಬರ್ ತಿಂಗಳಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಅಧಿಕೃತ ಆದೇಶ ಹೊರಬರಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಅನುತ್ಪಾದನಾ ಮಿಲಿತ ಬೋನಸ್(Non Product linked) ನೀಡಲಾಗಿದೆ.

7ನೇ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರಿಗೆ ಡಿಎ ಪ್ಲಸ್ ಟಿಎ7ನೇ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರಿಗೆ ಡಿಎ ಪ್ಲಸ್ ಟಿಎ

ಕೇಂದ್ರ ಸರ್ಕಾರಿ ನೌಕರರಿಗೆ ಸಾರಿಗೆ ಭತ್ಯೆ (Travel Allowance) ಕೂಡಾ ನೀಡಲಾಗುತ್ತಿದೆ. ಟಿಎ ಮೌಲ್ಯ ಸೇರಿಸಿದ ಬಳಿಕ ಸಂಬಳ 810 ರು ನಿಂದ 4,320ರುಗೇರಲಿದೆ. ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಶೇ3ರಷ್ಟು ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ ಹೊಂದಿದ್ದ ನೌಕರರಿಗೆ ಈಗ ಶೇ 5ರಷ್ಟು ತುಟ್ಟಿಭತ್ಯೆ ಸಿಗಲಿದೆ

7th Pay Commission: Pay hike coming in November for CG employees

ಶೇ3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದಾಗ ಡಿಎ ಹಾಗೂ ತುಟ್ಟಿ ದರ (ಡಿಆರ್) ನಿವೃತ್ತಿಯಾದವರಿಗೆ ಶೇ 12ರಷ್ಟು ತಲುಪಿದೆ. ಈಗ ಡಿಆರ್ ಶೇ17ರಷ್ಟಾಗಲಿದೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ.

ಸರ್ಕಾರಿ ನೌಕರರ ಬೇಡಿಕೆಗಳು ಇನ್ನು ಕಡಿಮೆಯಾಗಿಲ್ಲ. ಪ್ರಮುಖ ಬೇಡಿಕೆಗಳು ಈಡೇರಿಲ್ಲ. ಬೇಡಿಕೆಗೆ ಅನುಸಾರವಾಗಿ ಮೂಲ ವೇತನವನ್ನು ಏರಿಕೆ ಮಾಡುವುದು ಹಾಗೂ ಫಿಟ್ಮೆಂಟ್ ಫಾರ್ಮುಲಾ ಅವರನ್ನು ಮೂಲವೇತನದ ಮೂರು ಪಟ್ಟು ಏರಿಕೆ ಮಾಡುವಂತೆ ಬೇಡಿಕೆ ಇದ್ದೇ ಇದೆ.

ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ. ಹೀಗಾಗಿ ಕನಿಷ್ಠ ವೇತನ 21 ಸಾವಿರ ರು ನಿಂದ 26 ಸಾವಿರ ರು ತನಕ ಏರಿಕೆ ಮಾಡುವ ಸಾಧ್ಯತೆಯಿದೆ.

English summary
The Government is expected to take a major decision on the 7th Pay Commission soon. Reports suggest that the government is seriously contemplating hiking the salaries of Central Government employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X