ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರ ನಿರೀಕ್ಷೆ ಹುಸಿಗೊಳಿಸಿದ ನರೇಂದ್ರ ಮೋದಿ ಸರ್ಕಾರ

|
Google Oneindia Kannada News

ಮೋದಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಟ ವೇತನ ಏರಿಕೆ ಮಾಡುವ ನಿರೀಕ್ಷೆಯಿತ್ತು. ಆದರೆ, ಸರ್ಕಾರಿ ನೌಕರರ ನಿರೀಕ್ಷೆ ಸುಳ್ಳಾಗಿದೆ.

ಕನಿಷ್ಟ ವೇತನವನ್ನು 21 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡುವ ಸಾಧ್ಯತೆ ಕಂಡು ಬಂದಿತ್ತು. ಈ ಬಗ್ಗೆ ಬಜೆಟ್ ನಲ್ಲಿ ಘೋಷಣೆ ನಿರೀಕ್ಷೆಯಿತ್ತು. ಆದರೆ, ಕಾರ್ಮಿಕರ ಪಿಂಚಣಿ, ವೃತ್ತಿ ಪರರ ತೆರಿಗೆದಾರರಿಗೆ ಸಮಾಧಾನಕರ ಸುದ್ದಿಯನ್ನು ಮಾತ್ರ ಸರ್ಕಾರ ನೀಡಿದೆ.

ತುಟ್ಟಿಭತ್ಯೆ ಹೆಚ್ಚಳದ ನಂತರ ಸರ್ಕಾರಿ ನೌಕರರ ನಿರೀಕ್ಷೆಯೇನು?ತುಟ್ಟಿಭತ್ಯೆ ಹೆಚ್ಚಳದ ನಂತರ ಸರ್ಕಾರಿ ನೌಕರರ ನಿರೀಕ್ಷೆಯೇನು?

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ವೇತನ ಆಯೋಗದ ಶಿಫಾರಸ್ಸಿನ ಬಗ್ಗೆ ನಿರ್ಣಯ ಕೈಗೊಳ್ಳುವ ನಿರೀಕ್ಷೆಯೂ ಹುಸಿಯಾಗಿದೆ, ಕಳೆದ ವಾರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ 30ಕ್ಕೂ ಅಧಿಕ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆದರೆ, ಸರ್ಕಾರಿ ನೌಕರರ ಬೇಡಿಕೆ ಹಾಗೆ ಉಳಿದಿದೆ.

ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಕೊಡುಗೆ; ಡಿಎ ಏರಿಕೆಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಕೊಡುಗೆ; ಡಿಎ ಏರಿಕೆ

ಬೇಡಿಕೆಗೆ ಅನುಸಾರವಾಗಿ ಮೂಲ ವೇತನವನ್ನು ಏರಿಕೆ ಮಾಡುವುದು ಹಾಗೂ ಫಿಟ್ಮೆಂಟ್ ಫಾರ್ಮುಲಾ ಅವರನ್ನು ಮೂಲವೇತನದ ಮೂರು ಪಟ್ಟು ಏರಿಕೆ ಮಾಡುವಂತೆ ಬೇಡಿಕೆ ಇದ್ದೇ ಇದೆ.

ಸರ್ಕಾರದಿಂದ ಬೇಡಿಕೆ ಈಡೇರಿಸಲು ಆಗಿಲ್ಲ

ಸರ್ಕಾರದಿಂದ ಬೇಡಿಕೆ ಈಡೇರಿಸಲು ಆಗಿಲ್ಲ

ಕೇಂದ್ರ ಸರ್ಕಾರಿ ನೌಕರರು 6ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಫಿಟ್ಮೆಂಟ್ ಫಾರ್ಮ್ಯೂಲಾದಂತೆ ಮೂಲ ವೇತನದ 2.57ರಂತೆ ವೇತನ ಪಡೆಯುತ್ತಿದ್ದಾರೆ. ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ, ಈ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೊಳ್ಳಲಿದ್ದು, ಯಾವುದೇ ಘೋಷಣೆಗೆ ಅವಕಾಶವಿರುವುದಿಲ್ಲ

ನೌಕರರರ ವೇತನ ಏರಿಕೆ ಬಗ್ಗೆ ಯಾವುದೇ ಹೇಳಿಕೆ ಇಲ್ಲ

ನೌಕರರರ ವೇತನ ಏರಿಕೆ ಬಗ್ಗೆ ಯಾವುದೇ ಹೇಳಿಕೆ ಇಲ್ಲ

ಕೆಳ ಹಂತದ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕನಿಷ್ಟ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತಿದೆ. 7 ನೇ ವೇತನ ಆಯೋಗ ಮಾಡಿರುವ ಶಿಫಾರಸ್ಸು ಮೀರಿ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಭರವಸೆ ನೀಡಿದ್ದರು. ಸಂಬಳದಾರ ಮಧ್ಯಮ ವರ್ಗದವರಿಗೆ ಬಜೆಟ್ 2018ರಲ್ಲಿ ಅರುಣ್ ಜೇಟ್ಲಿ ಏನು ಕೊಟ್ಟಿಲ್ಲ ಎಂಬ ದೊಡ್ಡ ಆರೋಪ ಕೇಳಿ ಬಂದಿತ್ತು. ಇದನ್ನು ಸರಿದೂಗಿಸಲು ಮೋದಿ ಸರ್ಕಾರವು ಈ ಬಾರಿ ಸಂಬಳದಾರರಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಆದರೆ, ಕೇಂದ್ರ ಸರ್ಕಾರಿ ನೌಕರರರ ವೇತನ ಏರಿಕೆ ಬಗ್ಗೆ ಯಾವುದೇ ಹೇಳಿಕೆ ಇಲ್ಲ.

ಕನಿಷ್ಟ ವೇತನ ಏರಿಕೆಯಾಗಿಲ್ಲ

ಕನಿಷ್ಟ ವೇತನ ಏರಿಕೆಯಾಗಿಲ್ಲ

ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು. ಅಂದರೆ, 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

ಕೇಂದ್ರ ಸಂಪುಟವು 3% ತುಟ್ಟಿ ಭತ್ಯೆ (ಡಿಎ) ಹೆಚ್ಚಳದ ಘೋಷಣೆ ಮಾಡಿದ್ದು, ಸರ್ಕಾರಿ ನೌಕರರಿಗೆ ಕೊಂಚ ಸಂತಸ ತಂದಿದೆ. ಜನವರಿ 1, 2019ರಿಂದಲೇ ಇದು ಪೂರ್ವಾನ್ವಯ ಆಗಲಿದೆ. ಈ ನಿರ್ಧಾರದಿಂದ ಕೇಂದ್ರ ಸರಕಾರದ ಮೇಲೆ 9000 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. 3% ತುಟ್ಟಿ ಭತ್ಯೆ ಹೆಚ್ಚಳ ಮಾಡಿರುವುದರಿಂದ ಡಿಎ ಹಾಗೂ ತುಟ್ಟಿ ದರ (ಡಿಆರ್) ನಿವೃತ್ತಿಯಾದವರಿಗೆ ಶೇ 12ರಷ್ಟು ತಲುಪಲಿದೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ.

ಸಂಬಳ ಏರಿಕೆಗೆ ಕಾದಿದ್ದವರಿಗೆ ತುಟ್ಟಿ ಭತ್ಯೆ ಹೆಚ್ಚಿಸಿದ ಮೋದಿಸಂಬಳ ಏರಿಕೆಗೆ ಕಾದಿದ್ದವರಿಗೆ ತುಟ್ಟಿ ಭತ್ಯೆ ಹೆಚ್ಚಿಸಿದ ಮೋದಿ

English summary
The last Cabinet meeting before the elections was held on Thursday and there was some very bad news for the Central Government employees where the 7th Pay Commission was concerned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X