ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳನೇ ವೇತನ ಆಯೋಗದ ಪ್ರಕಾರ ಎಚ್ಆರ್ ಎ ಬಾಕಿ ಲೆಕ್ಕ ಹಾಕೋದು ಹೀಗೆ

ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಎಚ್ಆರ್ಎ ಎಷ್ಟು ಹೆಚ್ಚಾಗಲಿದೆ. ಒಟ್ಟು ಬಾಕಿ ಮೊತ್ತ ಎಷ್ಟು ಬರಬೇಕು..ಎಂಬುದರ ಲೆಕ್ಕಾಚಾರ ತಿಳಿಯಲು ಅನುಕೂಲವಾಗಲು ಇಲ್ಲಿ ಲಿಂಕ್ ಕೊಡಲಾಗಿದೆ. ಅದನ್ನು ಬಳಸಿ ಲೆಕ್ಕಾಚಾರ ತಿಳಿಯಬಹುದು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 10: ಏಳನೇ ವೇತನ ಆಯೋಗದಿಂದ ಒಟ್ಟು 196 ಭತ್ಯೆಗಳನ್ನು ಕೇಂದ್ರ ಸರಕಾರಕ್ಕೆ ಶಿಫರಸು ಮಾಡಲಾಗಿದೆ. ಅದರಲ್ಲಿ ಎಚ್ ಆರ್ಎ, ತುಟ್ಟಿ ಭತ್ಯೆ ಮತ್ತಿತರ ಭತ್ಯೆಗಳು ಒಳಗೊಂಡಿವೆ. ವೇತನ ಸಮಿತಿಯು ಭತ್ಯೆಗಳ ಬಗ್ಗೆ ಮಾಡಿರುವ ವರದಿಯು ಸಂಪುಟದ ಮುಂದೆ ಬರಲು ಇನ್ನೂ ಎರಡು ವಾರ ಇದೆ.

ನಿವೃತ್ತರು, ರಕ್ಷಣಾ ವಲಯದ ನಿವೃತ್ತರು, ಕುಟುಂಬ ಪಿಂಚಣಿ ಹಾಗೂ ರಕ್ಷಣಾ ವಲಯದ ಅಂಗವಿಕಲ ಪಿಂಚಣಿಗೆ ಸಂಬಂಧಿಸಿದ ಶಿಫಾರಸುಗಳಿಗೆ ಮೇ 4ರಂದು ಸಂಪುಟವು ಅಸ್ತು ಎಂದಿತ್ತು. 2016-17ನೇ ಸಾಲಿಗೆ ವರದಿಯ ಶಿಫಾರಸಿನಿಂದ ಹೆಚ್ಚುವರಿಯಾಗಿ ಹೊರೆಯಾಗುವ 84,933 ಕೋಟಿ ರುಪಾಯಿ ಹಣಕ್ಕೆ ಸಂಪುಟವು ಕಳೆದ ಜೂನ್ ನಲ್ಲಿ ಒಪ್ಪಿಗೆ ಸೂಚಿಸಿತ್ತು. ಅದರಲ್ಲಿ 2015-16ನೇ ಸಾಲಿನ ಎರಡು ತಿಂಗಳ ಬಾಕಿ ಸಹ ಒಳಗೊಂಡಿತ್ತು.[55 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಏರಿಕೆ]

7th Pay Commission: Here is how you calculate your new HRA arrears

ನಿವೃತ್ತರಿಗೆ ಸಂಬಂಧಿಸಿದ ಹಾಗೆ ಎಲ್ಲ ಪ್ರಸ್ತಾವನೆಗಳನ್ನು ಒಪ್ಪಲಾಗಿದೆ. ಜನವರಿ 1, 2016ರಿಂದ ಪೂರ್ವಾನ್ವಯ ಆಗುವಂತೆ ಬಾಕಿ ಹಣವನ್ನು ನಿವೃತ್ತರಿಗೆ ನೀಡಲಾಗುವುದು ಎಂದು ಆರ್ಥಿಕ ಸಚಿವಾಲಯ ತಿಳಿಸಿತ್ತು. ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಹಲವು ಮಾರ್ಪಾಟು ಮಾಡಲಾಗಿದೆ.

ಅದ್ದರಿಂದ ಎಚ್ಆರ್ಎ ಲೆಕ್ಕಾಚಾರ ತಿಳಿಯುವುದಕ್ಕೆ ಕ್ಯಾಲ್ಕುಲೇಟರ್ ಬೇಕಾಗುತ್ತದೆ. ಶಿಫಾರಸಿನ ಅನ್ವಯ ಎಷ್ಟು ಮೊತ್ತ ನಿರೀಕ್ಷಿಸಬಹುದು ಎಂಬುದಕ್ಕೆ ಏಳನೇ ವೇತನ ಆಯೋಗವೇ ಒಂದು ಕ್ಯಾಲ್ಕುಲೇಟರ್ ವ್ಯವಸ್ಥೆ ಮಾಡಿದೆ. ನೀವು ಅದಕ್ಕೆ ಒದಗಿಸುವ ಅಂಕಿಯ ಆಧಾರದಲ್ಲಿ ಹೆಚ್ಚಳವಾಗಬಹುದಾದ ಮೊತ್ತವನ್ನು ಅದು ತೋರಿಸುತ್ತದೆ.[ಮನೆ ಬಾಡಿಗೆ ಭತ್ಯೆ ಹೆಚ್ಚಳ? ಕೇಂದ್ರ ನೌಕರರಿಗೆ ಬಂಪರ್ ಕೊಡುಗೆ]

ಆ ಲೆಕ್ಕಾಚಾರ ತಿಳಿದುಕೊಳ್ಳುವುದಕ್ಕೆ ಆರನೇ ವೇತನ ಆಯೋಗದ ಮೂಲ ವೇತನ, ಅದರಲ್ಲಿ ಗ್ರೇಡ್ ಪೇ ಒಳಗೊಂಡಿರಬೇಕು. ಪೇ ಬ್ಯಾಂಡ್ ಹಾಗೂ ಗ್ರೇಡ್ ಪೇ ಆಯ್ಕೆ ಮಾಡಿಕೊಳ್ಳಬೇಕು. ಆ ನಂತರ ಎಚ್ಆರ್ಎ ಪರ್ಸೆಂಟೇಜ್ ಹಾಕಬೇಕು. ಇನ್ನು ಬಾಕಿ ಹಣದ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ, ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ಯಾವ ದಿನದಿಂದ ಪರಿಷ್ಕೃತ ವೇತನಕ್ಕೆ ನೀವು ಅರ್ಹರು ಎಂಬುದನ್ನು ತಿಳಿದುಕೊಳ್ಳಬೇಕು.

ಎಚ್ಆರ್ಎ ಲೆಕ್ಕಾಚಾರದ ಬಗ್ಗೆಯೇ ತಿಳಿದುಕೊಳ್ಳಬೇಕು ಅಂದರೆ ಈ ಲಿಂಕ್ ಕ್ಲಿಕ್ ಮಾಡಿ.

English summary
There are several modifications that have been made as per the 7th Pay Commission. Hence a calculator would be necessary to help people calculate what HRA they could expect. The calculator put out by the 7th Pay Commission News will give an expected value on the basis of the recommendations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X