• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಎ ಹೆಚ್ಚಿಸಿ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಲಿದೆ ಮೋದಿ ಸರ್ಕಾರ

By ವಿಕಾಸ್ ನಂಜಪ್ಪ
|
   ಸರ್ಕಾರೀ ನೌಕರರಿಗೆ ಮೋದಿ ಸರ್ಕಾರ ಕೊಡಲಿದೆ ಶುಭ ಸುದ್ದಿ | Oneindia Kannada

   ನವದೆಹಲಿ, ಜನವರಿ 07: ಲೋಕಸಭೆ ಚುನಾವಣೆಗೂ ಮುನ್ನ ನಿರೀಕ್ಷೆಯಂತೆ ಕೋಟ್ಯಂತರ ಮಂದಿಗೆ ಮೋದಿ ಸರ್ಕಾರದಿಂದ ಶುಭ ಸುದ್ದಿ ಸಿಗಲಿದೆ.

   ಕಳೆದ ಸ್ವಾತಂತ್ರ್ಯೋತ್ಸವ ದಿನದಂದು ವೇತನ ಏರಿಕೆ, ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ನಿರಾಶೆಯಾಗಿತ್ತು. ಆದರೆ, ಕಳೆದ ಆಗಸ್ಟ್ ತಿಂಗಳಿನಲ್ಲಿ ತುಟ್ಟಿಭತ್ಯೆ(ಡಿಎ) ಹೆಚ್ಚಳ ಮಾಡಿದ್ದ ಮೋದಿ ಸರ್ಕಾರ, ಈಗ ಮತ್ತೊಮ್ಮೆ ಡಿಎ ಹೆಚ್ಚಿಸುವ ಮೂಲಕ ಸರ್ಕಾರಿ ನೌಕರರ ಮನ ಗೆಲ್ಲುವ ಹಂತದಲ್ಲಿದೆ.

   ಸರ್ಕಾರಿ ನೌಕರರ ಸಂಬಳ ಏರಿಕೆ, ಬಿಜೆಪಿಯ 'ಮಹಾ' ರಣತಂತ್ರ!

   7ನೇ ವೇತನ ಆಯೋಗದ ಬಹು ನಿರೀಕ್ಷಿತ ಶಿಫಾರಸ್ಸಿನ ಅನ್ವಯ ಸುಮಾರು 1 ಕೋಟಿಗೂ ಮಂದಿಗೆ ಲಾಭವಾಗಲಿರುವ ನಿವೃತ್ತಿ ವಯಸ್ಸು ಏರಿಕೆ(60 ರಿಂದ 62ಕ್ಕೆ) ಬೇಡಿಕೆ ಹಾಗೂ ವೇತನ ಹೆಚ್ಚಳ ಎರಡಕ್ಕೂ ಮೋದಿ ಅವರು ಇನ್ನು ಅಸ್ತು ಎಂದಿಲ್ಲ.

   ಆದರೆ, ಶೇ3ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಈ ಕುರಿತಂತೆ ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ. ಜನವರಿ 01, 2019ರಿಂದ ಪೂರ್ವನ್ವಯವಾಗುವಂತೆ ಹೆಚ್ಚಳ ಜಾರಿಗೆ ಬರಲಿದೆ.

   ಶೇ4ರಷ್ಟು ತುಟ್ಟಿಭತ್ಯೆ ಸಿಕ್ಕರೂ ಸಿಗಬಹುದು

   ಶೇ4ರಷ್ಟು ತುಟ್ಟಿಭತ್ಯೆ ಸಿಕ್ಕರೂ ಸಿಗಬಹುದು

   ಕಳೆದ ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ5 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ಅಕೌಂಟ್ಸ್ ಹಾಗೂ ಆಡಿಟ್ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಹರಿಶಂಕರ್ ತಿವಾರಿ ಹೇಳಿದ್ದಾರೆ. ಶೇ3ರಷ್ಟು ಡಿಎ ಹೆಚ್ಚಳ ನಿಚ್ಚಳವಾಗಿದೆ ಎಂದಿದ್ದಾರೆ.

   ಈ ಹಿಂದೆ ಡಿಎ ಶೇ2ರಷ್ಟು ಹೆಚ್ಚಳವಾಗಿತ್ತು

   ಈ ಹಿಂದೆ ಡಿಎ ಶೇ2ರಷ್ಟು ಹೆಚ್ಚಳವಾಗಿತ್ತು

   ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಇದರಿಂದ ಸುಮಾರು 1.1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೆರವಾಗಲಿದ್ದು, ಕೇಂದ್ರ ಸರ್ಕಾರದ ಮೇಲೆ ವಾರ್ಷಿಕವಾಗಿ 6,112.20 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. 2013-14ರಲ್ಲಿ 63,000 ಕೋಟಿ ಇದ್ದ ಇಲಾಖೆಯ ಬಹೆಟ್ ಈಗ 2018-19ರಲ್ಲಿ 110 ಲಕ್ಷ ಕೋಟಿಗೆ ಏರಿಕೆಯಾಗಿದೆ.

   ನಿವೃತ್ತಿ ವಯಸ್ಸು ಹೆಚ್ಚಳದ ಬೇಡಿಕೆ

   ನಿವೃತ್ತಿ ವಯಸ್ಸು ಹೆಚ್ಚಳದ ಬೇಡಿಕೆ

   2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ.

   ಪಿಂಚಣಿದಾರರಿಗೂ ಅನುಕೂಲ

   ಪಿಂಚಣಿದಾರರಿಗೂ ಅನುಕೂಲ

   ಕೇಂದ್ರ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ ಬೋಧಕ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗದ ಅನ್ವಯ ಪಿಂಚಣಿ ಸಿಗಲಿದೆ. ಸುಮಾರು 25,000 ಪಿಂಚಣಿದಾರರಿಗೆ 6,000 ರು ನಿಂದ 18,000 ರುಗಳ ತನಕ ಪಿಂಚಣಿ ಸಿಗಲಿದೆ. ಇದು ಪರೋಕ್ಷವಾಗಿ ರಾಜ್ಯ ವಿಶ್ವವಿದ್ಯಾಲಯಗಳಿಂದ ನಿವೃತ್ತಿ ಹೊಂದಿದ 23 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.

   English summary
   There is some good news on the 7th Pay Commission for nearly 1 crore Central and State Government employees. A 3 per cent Dearness Allowance is on the anvil and would be applicable from January 1 2019 onwards.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more