ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದಿಂದ ಸಂಕ್ರಾಂತಿ ಕೊಡುಗೆ: ಶಿಕ್ಷಕರಿಗೆ ಸಿಗಲಿದೆ ಬಂಪರ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 16: ಲೋಕಸಭೆ ಚುನಾವಣೆಗೂ ಮುನ್ನ ನಿರೀಕ್ಷೆಯಂತೆ 7ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಸಮ್ಮತಿ ನೀಡಲು ಮೋದಿ ಸರ್ಕಾರ ಮುಂದಾಗಿದೆ. ಇದರಿಂದಾಗಿ ಕೋಟ್ಯಂತರ ಮಂದಿಗೆ ಮೋದಿ ಸರ್ಕಾರದಿಂದ ಶುಭ ಸುದ್ದಿ ಸಿಗಲಿದೆ.

7ನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಪದವಿ ಮಟ್ಟದ ತಾಂತ್ರಿಕ ಸಂಸ್ಥೆಗಳ ಶಿಕ್ಷಕರು, ಇತರ ಶೈಕ್ಷಣಿಕ ಸಿಬ್ಬಂದಿಗಳಿಗೆ ವೇತನ ಹೆಚ್ಚಳದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ 1241.78 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ.

ಸರ್ಕಾರಿ ನೌಕರರ ವಿಶೇಷ ಭತ್ಯೆ ಹೆಚ್ಚಳ ಮಾಡಿದ ಕರ್ನಾಟಕ ಸರ್ಕಾರ!

ಕಳೆದ ಸ್ವಾತಂತ್ರ್ಯೋತ್ಸವ ದಿನದಂದು ವೇತನ ಏರಿಕೆ, ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ನಿರಾಶೆಯಾಗಿತ್ತು. ಆದರೆ, ಕಳೆದ ಆಗಸ್ಟ್ ತಿಂಗಳಿನಲ್ಲಿ ತುಟ್ಟಿಭತ್ಯೆ(ಡಿಎ) ಹೆಚ್ಚಳ ಮಾಡಿದ್ದ ಮೋದಿ ಸರ್ಕಾರ, ಈಗ ಮತ್ತೊಮ್ಮೆ ಡಿಎ ಹೆಚ್ಚಿಸುವ ಮೂಲಕ ಸರ್ಕಾರಿ ನೌಕರರ ಮನ ಗೆಲ್ಲುವ ಹಂತದಲ್ಲಿದೆ.

ಡಿಎ ಹೆಚ್ಚಿಸಿ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಲಿದೆ ಮೋದಿ ಸರ್ಕಾರ ಡಿಎ ಹೆಚ್ಚಿಸಿ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಲಿದೆ ಮೋದಿ ಸರ್ಕಾರ

7ನೇ ವೇತನ ಆಯೋಗದ ಬಹು ನಿರೀಕ್ಷಿತ ಶಿಫಾರಸ್ಸಿನ ಅನ್ವಯ ಸುಮಾರು 1 ಕೋಟಿಗೂ ಮಂದಿಗೆ ಲಾಭವಾಗಲಿರುವ ನಿವೃತ್ತಿ ವಯಸ್ಸು ಏರಿಕೆ(60 ರಿಂದ 62ಕ್ಕೆ) ಬೇಡಿಕೆ ಹಾಗೂ ವೇತನ ಹೆಚ್ಚಳ ಎರಡಕ್ಕೂ ಮೋದಿ ಅವರು ಇನ್ನು ಅಸ್ತು ಎಂದಿಲ್ಲ. ಆದರೆ, ಶೇ3ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಈ ಕುರಿತಂತೆ ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ. ಜನವರಿ 01, 2019ರಿಂದ ಪೂರ್ವನ್ವಯವಾಗುವಂತೆ ಹೆಚ್ಚಳ ಜಾರಿಗೆ ಬರಲಿದೆ.

ಶಿಕ್ಷಕ ವೃಂದಕ್ಕೆ ಬಾಕಿ ಮೊತ್ತ ಕೂಡಾ ಲಭ್ಯ

ಶಿಕ್ಷಕ ವೃಂದಕ್ಕೆ ಬಾಕಿ ಮೊತ್ತ ಕೂಡಾ ಲಭ್ಯ

ಜನವರಿ 01, 2016ರಿಂದ ಪೂರ್ವನ್ವಯವಾಗುವಂತೆ ಶಿಕ್ಷಕ ವೃಂದಕ್ಕೆ ಬಾಕಿ ವೇತನ ಕೂಡಾ ಲಭಿಸಲಿದೆ. ಇದಕ್ಕೆ ಬಡ್ಡಿದರ ಇಂದಿನ ಮಾರುಕಟ್ಟೆ ದರದಂತೆ ಸಿಗಲಿದೆ. ಈ ಕುರಿತಂತೆ ಆದೇಶವನ್ನು ಹಾಗೂ ದೆಹಲಿ ಶಾಲಾ ಶಿಕ್ಷಣ ಕಾಯ್ದೆ ಜಾರಿಗೊಳಿಸದ ವಿದ್ಯಾಸಂಸ್ಥೆ ವಿರುದ್ಧ ಕ್ರಮ ಜರುಗಿಸುವಂತೆ ದೆಹಲಿ ಸರ್ಕಾರ ಸೂಚಿಸಿದೆ. ವಿಶೇಷ ಭತ್ಯೆ, ತುಟ್ಟಿಭತ್ಯೆ, ಸಂಬಳ ಏರಿಕೆ ಸೌಲಭ್ಯದಿಂದಲೂ ಅನೇಕ ವಿದ್ಯಾಸಂಸ್ಥೆ ಸಿಬ್ಬಂದಿಗಳು ವಂಚಿತರಾಗಿದ್ದು, ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಜನವರಿ 01,2006ರ 6ನೇ ವೇತನ ಆಯೋಗದ ಶಿಫಾರಸ್ಸು ಕೂಡಾ ಈಗ ಲಭ್ಯವಾಗಲಿದೆ.

ನಿವೃತ್ತಿ ವಯಸ್ಸು ಮಿತಿ ಏರಿಕೆ ಸದ್ಯಕ್ಕಿಲ್ಲ

ನಿವೃತ್ತಿ ವಯಸ್ಸು ಮಿತಿ ಏರಿಕೆ ಸದ್ಯಕ್ಕಿಲ್ಲ

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ.

ಪಿಂಚಣಿ ಸೌಲಭ್ಯ ಎಲ್ಲರಿಗೂ ಲಭ್ಯ

ಪಿಂಚಣಿ ಸೌಲಭ್ಯ ಎಲ್ಲರಿಗೂ ಲಭ್ಯ

ಕೇಂದ್ರ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ ಬೋಧಕ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗದ ಅನ್ವಯ ಪಿಂಚಣಿ ಸಿಗಲಿದೆ. ಸುಮಾರು 25,000 ಪಿಂಚಣಿದಾರರಿಗೆ 6,000 ರು ನಿಂದ 18,000 ರುಗಳ ತನಕ ಪಿಂಚಣಿ ಸಿಗಲಿದೆ. ಇದು ಪರೋಕ್ಷವಾಗಿ ರಾಜ್ಯ ವಿಶ್ವವಿದ್ಯಾಲಯಗಳಿಂದ ನಿವೃತ್ತಿ ಹೊಂದಿದ 23 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.

ತುಟ್ಟಿಭತ್ಯೆ ಹೆಚ್ಚಳ ಮತ್ತೊಮ್ಮೆ ಸಾಧ್ಯತೆ

ತುಟ್ಟಿಭತ್ಯೆ ಹೆಚ್ಚಳ ಮತ್ತೊಮ್ಮೆ ಸಾಧ್ಯತೆ

ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಇದರಿಂದ ಸುಮಾರು 1.1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೆರವಾಗಲಿದ್ದು, ಕೇಂದ್ರ ಸರ್ಕಾರದ ಮೇಲೆ ವಾರ್ಷಿಕವಾಗಿ 6,112.20 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. 2013-14ರಲ್ಲಿ 63,000 ಕೋಟಿ ಇದ್ದ ಇಲಾಖೆಯ ಬಜೆಟ್ ಈಗ 2018-19ರಲ್ಲಿ 110 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈಗ ಶೇ4ರಷ್ಟು ಡಿಎ ಹೆಚ್ಚಳದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

English summary
In some good news, the Central Government has decided to extend the benefits of the 7th Pay Commission to teachers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X