ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರೇ ಭರ್ಜರಿ ಉಡುಗೊರೆ ನಿರೀಕ್ಷಿಸಿ!

By Mahesh
|
Google Oneindia Kannada News

Recommended Video

7ನೇ ವೇತನ ಆಯೋಗ : ಸರ್ಕಾರೀ ನೌಕರರಿಗೆ ಭರ್ಜರಿ ಉಡುಗೊರೆ | Oneindia Kannada

ನವದೆಹಲಿ, ಫೆಬ್ರವರಿ 05: ಕೇಂದ್ರ ಬಜೆಟ್ ಮಂಡನೆ ಬಳಿಕ ಕೇಂದ್ರ ಸರ್ಕಾರಿ ನೌಕರರಿಗೆ ಕೈ ತುಂಬಾ ಸಂಬಳ ಸಿಗುವ ಸುದ್ದಿ ಬಹುತೇಕ ಖಚಿತವಾಗಿದೆ.

ವಿತ್ತ ಸಚಿವಾಲಯದ ಮೂಲಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ, ಭತ್ಯೆ ಏರಿಕೆಯಾಗಲಿದೆ.

ಏಪ್ರಿಲ್ ತಿಂಗಳಿನಿಂದ ಕೇಂದ್ರ ಸರ್ಕಾರಿ ನೌಕರರ ಸಂಬಳ ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಲಕ್ಷಾಂತರ ಮಂದಿಗೆ ಖುಷಿ ತರಲಿದೆ.

7ನೇ ವೇತನ ಆಯೋಗ ಶಿಫಾರಸ್ಸಿನ ಅನ್ವಯ ಹೊಸ ವೇತನ ದರ ಪಟ್ಟಿ ಜಾರಿಗೆ ಬರಲಿದ್ದು, ಇದಕ್ಕೆ ಕೇಂದ್ರ ಸಚಿವ ಸಂಪುಟ ಕೂಡ 2016ರಲ್ಲೇ ಒಪ್ಪಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಸರ್ಕಾರಿ ನೌಕರರು 6ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಫಿಟ್ಮೆಂಟ್ ಫಾರ್ಮ್ಯೂಲಾದಂತೆ ಮೂಲ ವೇತನದ 2.57ರಂತೆ ವೇತನ ಪಡೆಯುತ್ತಿದ್ದಾರೆ.

ಬಜೆಟ್ ಬಳಿಕ ಸರ್ಕಾರಿ ನೌಕರರಿಗೆ ಕೈತುಂಬಾ ಸಂಬಳ!ಬಜೆಟ್ ಬಳಿಕ ಸರ್ಕಾರಿ ನೌಕರರಿಗೆ ಕೈತುಂಬಾ ಸಂಬಳ!

ಈಗ ಬೇಡಿಕೆಗೆ ಅನುಸಾರವಾಗಿ ಮೂಲ ವೇತನವನ್ನು ಏರಿಕೆ ಮಾಡುವುದು ಹಾಗೂ ಫಿಟ್ಮೆಂಟ್ ಫಾರ್ಮುಲಾ ಅವರನ್ನು ಮೂಲವೇತನದ ಮೂರು ಪಟ್ಟು ಏರಿಕೆ ಮಾಡುವ ನಿರೀಕ್ಷೆಯಿದೆ.

ಸಿಬ್ಬಂದಿಯ ಕನಿಷ್ಟ ವೇತನ ಏರಿಕೆ

ಸಿಬ್ಬಂದಿಯ ಕನಿಷ್ಟ ವೇತನ ಏರಿಕೆ

ಸಿಬ್ಬಂದಿಯ ಕನಿಷ್ಟ ವೇತನವನ್ನು 7000 ರು ಗಳಿಂದ 18,000ಕ್ಕೇರಿಸಲಾಗುವುದು ಹಾಗೂ ಗರಿಷ್ಟ ವೇತನವನ್ನು 90,000 ರು ನಿಂದ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುತ್ತದೆ. ಇದು ಜನವರಿ 2016ರಿಂದ ಪೂರ್ವನ್ವಯವಾಗಲಿದೆ. ಇದು 2.57 ಫಿಟ್ಮೆಂಟ್ ಫಾರ್ಮುಲಾಗೆ ಅನುಗುಣವಾಗಿ ಸಿಗಲಿದೆ.

ಸಿಬ್ಬಂದಿಗಳ ಬೇಡಿಕೆ ಏನಿದೆ?

ಸಿಬ್ಬಂದಿಗಳ ಬೇಡಿಕೆ ಏನಿದೆ?

ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು. ಅಂದರೆ, 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ.

ಬಜೆಟ್ 2018ರಲ್ಲಿ ಈ ಬಗ್ಗೆ ನಿರೀಕ್ಷೆಯಿತ್ತು

ಬಜೆಟ್ 2018ರಲ್ಲಿ ಈ ಬಗ್ಗೆ ನಿರೀಕ್ಷೆಯಿತ್ತು

ಸಂಬಳದಾರ ಮಧ್ಯಮವರ್ಗದವರಿಗೆ ಬಜೆಟ್ 2018ರಲ್ಲಿ ಅರುಣ್ ಜೇಟ್ಲಿ ಏನು ಕೊಟ್ಟಿಲ್ಲ ಎಂಬ ದೊಡ್ಡ ಆರೋಪ ಕೇಳಿ ಬಂದಿದೆ. ಇದನ್ನು ಸರಿದೂಗಿಸಲು ವೇತನ ಏರಿಕೆಯ ಗಿಫ್ಟ್ ನೀಡುವ ಸಾಧ್ಯತೆಯಿದೆ. ಆದರೆ, ಇದಕ್ಕೆ ಮತ್ತೊಮ್ಮೆ ಸಂಪುಟದ ಸಮ್ಮತಿ ಬೇಕಾಗಿದ್ದು, ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವ ನಿರೀಕ್ಷೆಯಿದೆ.

 ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೊರೆ

ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೊರೆ

ಕೇಂದ್ರ ಸರ್ಕಾರಿ ನೌಕರರು ತಾವಿರುವ ನಗರಗಳ ಆಧಾರದ ಮೇಲೆ ಶೇ. 45ರವರೆಗೆ ಹೆಚ್ಚಿನ ಸಂಬಳ ಪಡೆಯಲಿದ್ದಾರೆ. ಜುಲೈ 1ರಿಂದ ವೇತನ ಆಯೋಗ ಜಾರಿಗೊಳ್ಳಲಿದೆ.

34 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ, ಸೇನಾ ವಲಯದ 14 ಲಕ್ಷ ಸಿಬ್ಬಂದಿಗೆ ಇದರ ಲಾಭಗಳಾಗಲಿದ್ದು, ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 30,748 ಕೋಟಿ ರು. ಹೊರೆ ಬೀಳಲಿದೆ

English summary
If reports are to be believed, government may consider increasing the salary of lower-level officials, from matrix level 1 to 5, and go beyond the recommendations of the Seventh Pay Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X