ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ವೇತನ ಆಯೋಗದ ಶಿಫಾರಸು ಜಾರಿ : ಮುಖ್ಯಾಂಶಗಳು

7ನೇ ವೇತನ ಆಯೋಗವು ನೀಡಿದ್ದ ಭತ್ಯೆಯ ಶಿಫಾರಸುಗಳಿಗೆ ಕೇಂದ್ರ ಸರ್ಕಾರದ ಅಸ್ತು. ಇದರಿಂದ 34 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ, ಸೇನಾ ವಲಯದ 14 ಲಕ್ಷ ಸಿಬ್ಬಂದಿಗೆ ಲಾಭ.

|
Google Oneindia Kannada News

ನವದೆಹಲಿ, ಜೂನ್ 29: ಕೇಂದ್ರ ಸರ್ಕಾರಿ ನೌಕರರು ತುಂಬಾ ದಿನಗಳಿಂದ ತೀವ್ರವಾಗಿ ನಿರೀಕ್ಷಿಸುತ್ತಿದ್ದ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ಬುಧವಾರ ಬೆಳಗ್ಗೆ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಶಿಫಾರಸುಗಳಿಗೆ ಅಂತಿಮ ಒಪ್ಪಿಗೆ ನೀಡಲಾಗಿದೆ. ಅದರಂತೆ, ಕೇಂದ್ರ ಸರ್ಕಾರಿ ನೌಕರರು ತಾವಿರುವ ನಗರಗಳ ಆಧಾರದ ಮೇಲೆ ಶೇ. 45ರವರೆಗೆ ಹೆಚ್ಚಿನ ಸಂಬಳ ಪಡೆಯಲಿದ್ದಾರೆ. ಜುಲೈ 1ರಿಂದ ವೇತನ ಆಯೋಗ ಜಾರಿಗೊಳ್ಳಲಿದೆ.

ಐವತ್ತು ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಬಂಪರ್ಐವತ್ತು ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಬಂಪರ್

ಇದರಿಂದಾಗಿ, 34 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ, ಸೇನಾ ವಲಯದ 14 ಲಕ್ಷ ಸಿಬ್ಬಂದಿಗೆ ಇದರ ಲಾಭಗಳಾಗಲಿದ್ದು, ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 30,748 ಕೋಟಿ ರು. ಹೊರೆ ಬೀಳಲಿದೆ.

ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಈ ವಿಚಾರ ತಿಳಿಸಿದರು.

7ನೇ ವೇತನ ಆಯೋಗದ ಶಿಫಾರಸುಗಳ ಸಾಧಕ- ಬಾಧಕಗಳನ್ನು ಪರಾಮರ್ಶಿಸಲು ಕೇಂದ್ರ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು ತನ್ನ ವರದಿಯನ್ನು ಅರುಣ್ ಜೇಟ್ಲಿಯವರಿಗೆ ಇದೇ ವರ್ಷ ಏಪ್ರಿಲ್ ನಲ್ಲಿಯೇ ಸಲ್ಲಿಸಿತ್ತು. ಅದರಲ್ಲಿ ಮನೆ ಬಾಡಿಗೆ ಭತ್ಯೆಯ ಹೆಚ್ಚಳ ವಿಚಾರವನ್ನು ಚರ್ಚಿಸಲು ತಿಳಿಸಲಾಗಿತ್ತು.

ಮನೆ ಬಾಡಿಗೆ ಭತ್ಯೆ ಹೆಚ್ಚಳ? ಕೇಂದ್ರ ನೌಕರರಿಗೆ ಬಂಪರ್ ಕೊಡುಗೆ ಮನೆ ಬಾಡಿಗೆ ಭತ್ಯೆ ಹೆಚ್ಚಳ? ಕೇಂದ್ರ ನೌಕರರಿಗೆ ಬಂಪರ್ ಕೊಡುಗೆ

ಕೇಂದ್ರ ಸಂಪುಟದ ಈ ಹಿಂದಿನ ಸಭೆಗಳಲ್ಲಿ ವೇತನ ಆಯೋಗದ ಹಲವಾರು ಶಿಫಾರಸುಗಳಿಗೆ ಒಪ್ಪಿಗೆ ಕೊಟ್ಟಿದ್ದರೂ, ಲಾವಾಸಾ ವರದಿಯನ್ವಯ ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಮತ್ತಷ್ಟು ಚರ್ಚೆಗಳ ಅಗತ್ಯವಿದ್ದಿದ್ದರಿಂದ ಆಯೋಗ ಶಿಫಾರಸುಗಳಿಗೆ ಸಂಪೂರ್ಣ ಒಪ್ಪಿಗೆ ಸಿಕ್ಕಿರಲಿಲ್ಲ. ಇದೀಗ, ಆ ಬಗ್ಗೆ ಒಪ್ಪಿಗೆ ಸಿಕ್ಕಿದೆ.

7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ? 7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?

ಹಾಗಾದರೆ, ಯಾವ್ಯಾವ ಭತ್ಯೆಗಳು ಎಷ್ಟು ಹೆಚ್ಚಳ, ಕೇಂದ್ರ ಸರ್ಕಾರಿ ನೌಕರರಿಗೆ ಆಗುವ ಲಾಭಗಳೇನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಮೂರು ವಿಭಾಗಗಳಲ್ಲಿ ವಿಂಗಡಣೆ

ಮೂರು ವಿಭಾಗಗಳಲ್ಲಿ ವಿಂಗಡಣೆ

ವೇತನ ಆಯೋಗದ ಶಿಫಾರಸುಗಳಲ್ಲಿ ಮನೆ ಬಾಡಿಗೆ ಭತ್ಯೆಯೇ ಅತಿ ಹೆಚ್ಚು ಚರ್ಚೆಗೊಳಗಾದ ವಿಚಾರ. ಇದೀಗ, ಕೇಂದ್ರ ಸರ್ಕಾರಿ ನೌಕರರು ವಾಸವಾಗಿರುವ ನಗರಗಳನ್ನು x,y ಹಾಗೂ z ಎಂಬ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ಆಯಾ ವಿಭಾಗಗಳಿಗೆ ಕ್ರಮವಾಗಿ, ಶೇ. 24, ಶೇ. 26 ಹಾಗೂ ಶೇ. 8ರಷ್ಟು ಭತ್ಯೆಯನ್ನು ಹೆಚ್ಚಿಸಲಾಗಿದೆ.

ಉನ್ನತ ಅಧಿಕಾರಗಳಿಗೆ ಬಂಪರ್

ಉನ್ನತ ಅಧಿಕಾರಗಳಿಗೆ ಬಂಪರ್

ಹೆಚ್ಚಾಗಲಿರುವ ಮನೆ ಬಾಡಿಗೆ ಭತ್ಯೆಯಿಂದಾಗಿ, ದೆಹಲಿಯಂಥ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರ (ಸಂಪುಟ ಕಾರ್ಯದರ್ಶಿ ಸರಿಸಮಾನ ಹುದ್ದೆಗಳು) ಮನೆ ಬಾಡಿಗೆ ಭತ್ಯೆಯು ಈ ಹಿಂದಿದ್ದ 22,500 ರು.ಗಳಿಂದ 44,640 ರು. ಗಳವರೆಗೆ ಹೆಚ್ಚಾಗಲಿದೆ. ಆ ಅಧಿಕಾರಿಯ ಮಾಸಿಕ ವೇತನದ ಮೂಲ ವೇತನದ ಪ್ರಮಾಣ, 85,000 ರು. ಗಳಿಂದ 1.26 ಲಕ್ಷ ರು.ಗಳಿಗೆ ಹೆಚ್ಚಾಗಲಿದೆ.

ಹಿರಿಯ ನಾಗರಿಕರಿಗೆ ಖುಷಿ

ಹಿರಿಯ ನಾಗರಿಕರಿಗೆ ಖುಷಿ

ಕೇಂದ್ರ ಸರ್ಕಾರದ ಮಾಜಿ ನೌಕರರ ಪಿಂಚಣಿಯಲ್ಲಿ ನೀಡಲಾಗುತ್ತಿದ್ದ ವೈದ್ಯಕೀಯ ಭತ್ಯೆಯನ್ನು ಮಾಸಿಕ 500 ರು.ಗಳಿಂದ 1,000 ರು.ವರೆಗೆ ಹೆಚ್ಚಿಸಲಾಗಿದೆ. ಇನ್ನು, ರೋಗಿಗಳ ಶುಶ್ರೂಷಾ ಭತ್ಯೆಯನ್ನು ಮಾಸಿಕವಾಗಿ 2,100 ರು.ಗಳಿಂದ 5,300 ರು.ಗಳವರೆಗೆ ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ, ಹಿರಿಯ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆ ಭತ್ಯೆಯಲ್ಲಿ 6,300 ರು.ಗಳಷ್ಟು ಹೆಚ್ಚುವರಿ ಹಣ ಸಿಗಲಿದೆ.

ಅನೇಕರಿಗೆ ಸಹಾಯ

ಅನೇಕರಿಗೆ ಸಹಾಯ

ಕೇಂದ್ರ ಸರ್ಕಾರಿ ನೌಕರರ ಮಕ್ಕಳ ವಿದ್ಯಾಭ್ಯಾಸದ ಭತ್ಯೆಯನ್ನು ಮಾಸಿಕವಾಗಿ 1,500 ರು.ಗಳಿಂದ 2,500 ರು.ಗಳಿಗೆ ಹೆಚ್ಚಿಸಲಾಗಿದೆ.

ಸೈನಿಕರ, ಅಧಿಕಾರಿಗಳ ವಿಶೇಷ ಭತ್ಯೆ ಹೆಚ್ಚಳ

ಸೈನಿಕರ, ಅಧಿಕಾರಿಗಳ ವಿಶೇಷ ಭತ್ಯೆ ಹೆಚ್ಚಳ

ಸಿಯಾಚಿನ್ ನಲ್ಲಿನರುವ ಭಾರತೀಯ ಸೇನಾ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರಿಗೆ ನೀಡಲಾಗುತ್ತಿದ್ದ ವಿಶೇಷ ಭತ್ಯೆಯನ್ನು ಮಾಸಿಕ 14, 0000 ರು.ದಿಂದ 30,000 ರು.ವರೆಗೆ ಹೆಚ್ಚಿಸಲಾಗಿದೆ. ಇದೇ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಗಳ ವಿಶೇಷ ಭತ್ಯೆಯನ್ನು ಮಾಸಿಕ 21,000ದಿಂದ 42,500 ರು.ಗಳವರೆಗೆ ಹೆಚ್ಚಿಸಲಾಗಿದೆ.

English summary
The Union cabinet approved on Wednesday the new allowance structure for 34 lakh central government and 14 lakh defence staffers, giving their pay cheques a significant bump from next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X