ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಸಿಬ್ಬಂದಿಗೆ ಭರ್ಜರಿಯಾಗಿ ಬಡ್ತಿ, ಇಂಗ್ರೀಮೆಂಟ್ ಘೋಷಣೆ

|
Google Oneindia Kannada News

ನವದೆಹಲಿ, ನವೆಂಬರ್ 15: ಸುಮಾರು 11 ಲಕ್ಷ ಮಂದಿ ರೈಲ್ವೆ ಸಿಬ್ಬಂದಿಗೆ ಪ್ರಯೋಜನವಾಗುವಂತೆ ದಸರಾ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರವು ಬೋನಸ್ ಘೋಷಣೆ ಮಾಡಿತ್ತು. ಇದಾದ ಬಳಿಕ 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಹಲವು ರೈಲ್ವೆ ಸಿಬ್ಬಂದಿಗಳಿಗೆ ಬಡ್ತಿ, ಇಂಗ್ರೀಮೆಂಟ್ ಘೋಷಿಸಿದೆ.

ಸತತ 6 ವರ್ಷಗಳಿಂದ ರೈಲ್ವೆ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಬೋನಸ್ ನೀಡುತ್ತಾ ಬಂದಿದೆ. ಈ ಬಾರಿ ಬೋನಸ್ ನೀಡುವುದರಿಂದ ಒಟ್ಟಾರೆ 2019-20ರ ಅವಧಿಯಲ್ಲಿ ಸರ್ಕಾರಿ ಬೊಕ್ಕಸಕ್ಕೆ 2024 ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ. 1979-80ರ ನಂತರ ಮತ್ತೊಮ್ಮೆ Productivity linked ಬೋನಸ್ ಜಾರಿಗೆ ತರಲಾಗುತ್ತಿದೆ" ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ28ರಷ್ಟು ಏರಿಕೆ, ಮೋದಿ ಭರವಸೆಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ28ರಷ್ಟು ಏರಿಕೆ, ಮೋದಿ ಭರವಸೆ

2019ರ ಕೇಂದ್ರ ಬಜೆಟ್ ನಲ್ಲಿ ಭಾರತೀಯ ರೈಲ್ವೆಗೆ 65, 837 ಕೋಟಿ ರು ಮೀಸಲಿಡಲಾಗಿದೆ. ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ, ನೇಮಕಾತಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರಿಗೆ 18,000 ರು ಕನಿಷ್ಠ ವೇತನ ಪ್ರತಿ ತಿಂಗಳಿಗೆ ಸಿಗಲಿದೆ. ಇದರ ಜೊತೆಗೆ ವೇತನ ಏರಿಕೆ ಪ್ರಮಾಣದ ಬಗ್ಗೆ ಕೂಡಾ ಮಾಹಿತಿ ಸಿಕ್ಕಿದೆ. ಕನಿಷ್ಠ 8 ಸಾವಿರ ರು ತನಕ ಸಂಬಳ ಹೆಚ್ಚಾಗುವ ಸಾಧ್ಯತೆಯಿದೆ.

ಎಷ್ಟು ಪ್ರಮಾಣದಲ್ಲಿ ಇಂಗ್ರೀಮೆಂಟ್

ಎಷ್ಟು ಪ್ರಮಾಣದಲ್ಲಿ ಇಂಗ್ರೀಮೆಂಟ್

2019ರ ಕೇಂದ್ರ ಬಜೆಟ್ ನಲ್ಲಿ ಹೇಳಿಂದರೆ ರೈಲ್ವೆಯಲ್ಲಿ ಉದ್ಯೋಗ ನಿರ್ಮಾಣ, ಹಾಲಿ ಉದ್ಯೋಗಿಗಳಿಗೆ ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ಬಡ್ತಿ, ಡೆಪ್ಯುಟೇಷನ್ ಮಾಡಲಾಗುತ್ತದೆ. ಸರಿ ಸುಮಾರು 9,500 ರು ನಿಂದ 21,000 ರು ತನಕ ಇಂಗ್ರೀಮೆಂಟ್ ಜೊತೆಗೆ ಬಡ್ತಿ ಖಾತ್ರಿಯಾಗಿದೆ.

ಯಾರಿಗೆ ಮೊದಲಿಗೆ ಸಿಗಲಿದೆ

ಯಾರಿಗೆ ಮೊದಲಿಗೆ ಸಿಗಲಿದೆ

ಫಿಸಿಯೋಥೆರಪಿಸ್ಟ್ ಗ್ರೇಡ್ II ಸಿಬ್ಬಂದಿಗಳಿಗೆ ಗ್ರೇಡ್ I ಗೆ ಬಡ್ತಿ ಸಿಗಲಿದೆ. ಈ ಸಿಬ್ಬಂದಿಗಳು ಮೂಲ ವೇತನದ ಆಧಾರದ ಮೇಲೆ 9,500 ರು ಇಂಗ್ರೀಮೆಂಟ್ ಸಿಗಲಿದೆ. 6 ರಿಂದ 7 ಇಂಗ್ರೀಮೆಂಟ್ ಸಿಗಲಿದೆ. ಫಿಸಿಯೋಥೆರಪಿಸ್ಟ್ ಗ್ರೇಡ್ I ಹುದ್ದೆಯಲ್ಲಿರುವವರು 8ನೇ ಸ್ತರಕ್ಕೇರಲಿದ್ದಾರೆ. ಸಹಾಯಕ ಪಿಸಿಯೋಥೆರಪಿಸ್ಟ್ ಆಫೀಸರ್ ಹುದ್ದೆ ಪಡೆಯಲಿದ್ದಾರೆ.

ಬಡ್ತಿ ಮೂಲಕ ಶೇ 66ರಷ್ಟು ಹುದ್ದೆ ಭರ್ತಿ

ಬಡ್ತಿ ಮೂಲಕ ಶೇ 66ರಷ್ಟು ಹುದ್ದೆ ಭರ್ತಿ

ಬಡ್ತಿ ಮೂಲಕ ಶೇ 66ರಷ್ಟು ಹುದ್ದೆ ಸಹಾಯಕ ವಿಭಾಗೀಯ ಪಿಸಿಯೋಥೆರಪಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿಮಾಡಲಾಗುತ್ತದೆ. ಶೇ33ರಷ್ಟು ನೇರ ನೇಮಕಾತಿ ಅಥವಾ ಡೆಪ್ಯುಟೇಷನ್ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಜೀ ಬಿಸಿನೆಸ್ ವರದಿ ಮಾಡಿದೆ. 11.52 ನಾನ್ ಗೆಜೆಟೆಡ್ ರೈಲ್ವೆ ಸಿಬ್ಬಂದಿ (ಆರ್ ಪಿಎಫ್/ ಆರ್ ಪಿ ಎಸ್ ಎಫ್ ಹೊರತುಪಡಿಸಿ) ಗಳಿಗೆ ಬೋನಸ್ ಸಿಕ್ಕಿದೆ.

ರಾಷ್ಟ್ರೀಯ ಕನಿಷ್ಠ ವೇತನ ಬದಲಾವಣೆ

ರಾಷ್ಟ್ರೀಯ ಕನಿಷ್ಠ ವೇತನ ಬದಲಾವಣೆ

ರಾಷ್ಟ್ರೀಯ ಕನಿಷ್ಠ ವೇತನ (National minimum floor wage) ಬದಲಾವಣೆಗೆ ಸೂಚಿಸಿರುವ ಸಲಹಾ ಮಂಡಳಿಯ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ28ರಷ್ಟು ಏರಿಕೆಯಾಗಲಿದೆ. ಇದನ್ನು ರಾಜ್ಯ ಸರ್ಕಾರಿ ನೌಕರರಿಗೂ ಹಂತ ಹಂತವಾಗಿ ಜಾರಿಗೊಳಿಸಲು ಸೂಚಿಸಲಾಗಿದೆ. 7ನೇ ವೇತನ ಆಯೋಗದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ, ಭತ್ಯೆ, ಕೆಲಸದ ಅವಧಿ, ರಜಾ ದಿನ ನಿಗದಿ ಮಾಡುವಂತೆ ಬೇಡಿಕೆ ಇದ್ದೆ ಇದೆ.

ತುಟ್ಟಿ ಭತ್ಯೆ, ತುಟ್ಟಿ ಪರಿಹಾರ ಬದಲಾವಣೆ

ತುಟ್ಟಿ ಭತ್ಯೆ, ತುಟ್ಟಿ ಪರಿಹಾರ ಬದಲಾವಣೆ

ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಶೇ3ರಷ್ಟು ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ ಹೊಂದಿದ್ದ ನೌಕರರಿಗೆ ಈಗ ಶೇ 5ರಷ್ಟು ತುಟ್ಟಿಭತ್ಯೆ ಸಿಗಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಅನುತ್ಪಾದನಾ ಮಿಲಿತ ಬೋನಸ್(Non Product linked) ನೀಡಲಾಗಿದೆ.

English summary
There is some positive news on the 7th Pay Commission that has been announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X